ಭಾರತೀಯ ಕರಾವಳಿ ಸೇನಾ ಪಡೆಯಲ್ಲಿ ಖಾಲಿ ಇರುವ 358 ನಾವಿಕ್ ಮತ್ತು ಯಾಂತ್ರಿಕ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಣೆ
ಭಾರತೀಯ ಕರಾವಳಿ ಸೇನಾ ಪಡೆಯಲ್ಲಿ ಖಾಲಿ ಇರುವ 02/2021 ಬ್ಯಾಚ್‌ನ 358 ನಾವಿಕ್ (ದೇಶೀಯ ಶಾಖೆ, ಜನರಲ್ ಡ್ಯೂಟಿ) ಮತ್ತು ಯಾಂತ್ರಿಕ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಮಾಹಿತಿಯನ್ನು ಓದಿಕೊಂಡು ಆನ್‌ಲೈನ್‌ನಲ್ಲಿ ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ ಜನವರಿ 05, 2021 ರಿಂದ ಪ್ರಾರಂಭಗೊಂಡು ಜನವರಿ 19 2021 ರಂದು ಮುಕ್ತಾಯಗೊಳ್ಳುವುದು.
* ಪ್ರಮುಖ ದಿನಾಂಕಗಳು:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05-01-2021
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-01-2021
- ಪ್ರವೇಶ ಪತ್ರ ಮುದ್ರಿಸಲು ದಿನಾಂಕ: ಹಂತ -1 ಪರೀಕ್ಷೆಗೆ 10 ದಿನಗಳ ಮೊದಲು
- ನಾವಿಕ್ (ಜಿಡಿ, ಡಿಬಿ) ಮತ್ತು ಯಂತ್ರಿಕ್‌ಗಾಗಿ ತಾತ್ಕಾಲಿಕ ಹಂತ -1 ಪರೀಕ್ಷೆಯ ದಿನಾಂಕಗಳು: ಮಾರ್ಚ್ 2021
- ನಾವಿಕ್ (ಜಿಡಿ, ಡಿಬಿ) ಮತ್ತು ಯಂತ್ರಿಕ್‌ಗಾಗಿ ತಾತ್ಕಾಲಿಕ ಹಂತ- II ಪರೀಕ್ಷೆಯ ದಿನಾಂಕಗಳು: ಮೇ 2021
- ನಾವಿಕ್ (ಜಿಡಿ) ಮತ್ತು ಯಂತ್ರಿಕ್‌ಗಾಗಿ ತಾತ್ಕಾಲಿಕ ಹಂತ -3 ಮತ್ತು IV ಪರೀಕ್ಷೆಯ ದಿನಾಂಕಗಳು: ಆಗಸ್ಟ್ 2021
- ನಾವಿಕ್ (ಡಿಬಿ) ಗಾಗಿ ತಾತ್ಕಾಲಿಕ ಹಂತ -3 ಮತ್ತು IV ಪರೀಕ್ಷೆಯ ದಿನಾಂಕಗಳು: ಅಕ್ಟೋಬರ್ 2021
- ನಾವಿಕ್ (ಜಿಡಿ) ಮತ್ತು ಯಂತ್ರಿಕ್ ತರಬೇತಿ ದಿನಾಂಕ: ಆಗಸ್ಟ್ 2021
- ನಾವಿಕ್ (ಜಿಡಿ) ಗಾಗಿ ತರಬೇತಿ ದಿನಾಂಕ: ಅಕ್ಟೋಬರ್ 2021
Job Overview
- No. of posts
- 358
- Start Date
- 5 ಜನವರಿ 2021
- End Date
- 19 ಜನವರಿ 2021
- Employment Type
- FULL_TIME
- Organization
- KPSC Vaani (Website)
- Location
- KA,
Selection Procedure:
- ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ, ದೈಹಿಕ ಪರೀಕ್ಷೆ, ಮತ್ತು ಮೂಲ ದಾಖಲೆಗಳ ಪರಿಶೀಲನೆಯ ಮುಖಾಂತರ ಆಯ್ಕೆ ಮಾಡಲಾಗುವುದು.
Qualification:
- ನಾವಿಕ (ಜನರಲ್ ಡ್ಯೂಟಿ ) : ಪಿಯುಸಿ (ಗಣಿತ ಮತ್ತು ಭೌತಶಾಸ್ತ್ರ)
- ನಾವಿಕ (ಡೊಮೆಸ್ಟಿಕ್ ಬ್ರಾಂಚ್ ) : 10 ನೇ ತರಗತಿಯನ್ನು ಅಂಗೀಕೃತ ಸಂಸ್ಥೆ ಅಥವಾ ಬೋರ್ಡ್ ನಿಂದ ಉತ್ತೀರ್ಣರಾಗಿರಬೇಕು.
- ಯಾಂತ್ರಿಕ್ ಹುದ್ದೆ : 10 ನೇ ತರಗತಿ ವಿದ್ಯಾರ್ಹತೆಯೊಂದಿಗೆ ಡಿಪ್ಲೊಮಾ (ಎಲೆಕ್ಟ್ರಿಕಲ್ / ಮೆಕ್ಯಾನಿಕಲ್ / ಎಲೆಕ್ಟ್ರಾನಿಕ್ಸ್ & ದೂರಸಂಪರ್ಕ (ರೇಡಿಯೋ / ಪವರ್) ಇಂಜಿನೀರಿಂಗ್)
ಈ ಮೇಲಿನ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Fee:
- ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು ರೂಪಾಯಿ 250/- ಅರ್ಜಿಶುಲ್ಕವನ್ನು ಭರಿಸಬೇಕು, ಮತ್ತು ಪ.ಜಾ ಮತ್ತು ಪ.ಪಂ ದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
Age Limit:
- ಹುದ್ದೆಗೆ ಅನುಗುಣವಾಗಿ ಅಭ್ಯರ್ಥಿಗಳು ಕನಿಷ್ಠ- 18 ವರ್ಷಗಳನ್ನು ಪೂರ್ಣಗೊಳಿಸಿರಬೇಕು ಮತ್ತು ಗರಿಷ್ಠ- 22 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
- ನಾವಿಕ್ (ಜನರಲ್ ಡ್ಯೂಟಿ) ಮತ್ತು ಯಂತ್ರಿಕ್ ಅಭ್ಯರ್ಥಿಗಳು 01-08-1999 ರಿಂದ 31-07-2003ರ ನಡುವೆ ಜನಿಸಿರಬೇಕು.
- ನಾವಿಕ್ (ಡೊಮೆಸ್ಟಿಕ್ ಬ್ರಾಂಚ್) ಅಭ್ಯರ್ಥಿಗಳು 01-10-1999 ರಿಂದ 30-09-2003ರ ನಡುವೆ ಜನಿಸಿರಬೇಕು.
Apply online
To Buy : ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಹಲವು ಉತ್ತಮ ಪುಸ್ತಕಗಳನ್ನು ಈ ಲಿಂಕ್ ಮೂಲಕ ಕೂಡಲೇ ಖರೀದಿ ಮಾಡಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.