ಭಾರತೀಯ ಕರಾವಳಿ ಪಡೆಯಲ್ಲಿ ಒಟ್ಟು 50 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Published by: Mallappa Myageri
|
ಭಾರತೀಯ ಕರಾವಳಿ ಪಡೆಯಲ್ಲಿ ಒಟ್ಟು 50 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಭಾರತೀಯ ಕರಾವಳಿ ಪಡೆಯಯಲ್ಲಿ ಖಾಲಿ ಇರುವ ಜನರಲ್ ಡ್ಯೂಟಿ ಹುದ್ದೆಗಳು 30, ಕಮರ್ಷಿಯಲ್ ಪೈಲಟ್‌ ಲೈಸನ್ಸ್‌ (ಎಸ್‌ಎಸ್‌ಎ) ಹುದ್ದೆಗಳು 10, ಮತ್ತು ಟೆಕ್ನಿಕಲ್ (ಇಂಜಿನಿಯರಿಂಗ್ ಮತ್ತು ಇಲೆಕ್ಟ್ರಿಕಲ್) ಹುದ್ದೆಗಳು 10, ಒಟ್ಟು 50 ಹುದ್ದೆಗಳನ್ನು 2022 ರ ಬ್ಯಾಚ್‌ನಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ : 06-12-2021 ರ ಮಧ್ಯಾಹ್ನ 12:00 ಗಂಟೆಯಿಂದ ದಿನಾಂಕ: 17-12-2021 ರ ಸಂಜೆ 05:30 ಗಂಟೆವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
Job Overview
No. of posts
50
Start Date
6 ಡಿಸೆಂಬರ್ 2021
End Date
17 ಡಿಸೆಂಬರ್ 2021
Employment Type
FULL_TIME
Organization
KPSC Vaani (Website)
Location
Karnataka, KA,
Selection Procedure:
ಭಾರತೀಯ ಕರಾವಳಿ ಪಡೆಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು.
Qualification:

ಭಾರತೀಯ ಕರಾವಳಿ ಪಡೆಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ.
1) ಜೆನೆರಲ್ ಡ್ಯೂಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ  ಬ್ಯಾಚುಲರ್ ಪದವಿ ಹೊಂದಿರಬೇಕು.
2) ಕಮರ್ಷಿಯಲ್ ಪೈಲರ್ ಎಂಟ್ರಿ (ಸಿಪಿಎಲ್-ಎಸ್‌ಎಸ್‌ಎ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು  ಪಿ.ಯು.ಸಿ ಪಾಸ್ ಮಾಡಿರಬೇಕು.
3) ಟೆಕ್ನಿಕಲ್ (ಇಂಜಿನಿಯರಿಂಗ್ ಮತ್ತು ಇಲೆಕ್ಟ್ರಿಕಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.E ಪದವಿ ಹೊಂದಿರಬೇಕು.

Age Limit:

ಭಾರತೀಯ ಕರಾವಳಿ ಪಡೆಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ವಯೋಮಿತಿಯನ್ನು ನಿಗದಿಪಡಿಸಿದೆ.
1) ಜೆನೆರಲ್ ಡ್ಯೂಟಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಿನಾಂಕ 01-07-1997 ರಿಂದ 30-06-2001 ರ ನಡುವೆ ಜನಿಸಿರಬೇಕು.
2)  ಕಮರ್ಷಿಯಲ್ ಪೈಲಟ್ ಎಂಟ್ರಿ (ಸಿಪಿಎಲ್-ಎಸ್‌ಎಸ್‌ಎ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 01-07-1997 ರಿಂದ 30-06-2003 ರ ನಡುವೆ ಜನಿಸಿರಬೇಕು.
3) ಟೆಕ್ನಿಕಲ್ (ಇಂಜಿನಿಯರಿಂಗ್ ಮತ್ತು ಇಲೆಕ್ಟ್ರಿಕಲ್) ಹುದ್ದೆಗೆ ಅರ್ಜಿ ಸಲ್ಲಿಸುವವರು ದಿನಾಂಕ 01-07-1997 ರಿಂದ 30-06-2001 ರ ನಡುವೆ ಜನಿಸಿರಬೇಕು.
* ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

To Download the official notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.