ಭಾರತೀಯ ಹೆದ್ದಾರಿ ನಿರ್ವಹಣಾ ಸಂಸ್ಥೆ ಲಿಮಿಟೆಡ್ (IHMCL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ
ಭಾರತೀಯ ಹೆದ್ದಾರಿ ನಿರ್ವಹಣಾ ಸಂಸ್ಥೆ ಲಿಮಿಟೆಡ್ (IHMCL) 2025ರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ದೇಶದಾದ್ಯಂತ 49 ಎಂಜಿನಿಯರ್ (ಐಟಿಎಸ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಸರ್ಕಾರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
🔹 ಸಂಸ್ಥೆಯ ಹೆಸರು : ಇಂಡಿಯನ್ ಹೈವೇ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್ (IHMCL)
🔹 ಒಟ್ಟು ಹುದ್ದೆಗಳು : 49
🔹 ಹುದ್ದೆಯ ಹೆಸರು : ಎಂಜಿನಿಯರ್ (ಐಟಿಎಸ್)
🔹 ಕೆಲಸದ ಸ್ಥಳ : ಭಾರತದಾದ್ಯಂತ
🔹 ವೇತನ ಶ್ರೇಣಿ : ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 40,000/- ರಿಂದ ರೂ. 1,40,000/-ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಹತಾ ವಿವರಗಳು :
ಶೈಕ್ಷಣಿಕ ಅರ್ಹತೆ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಂಪ್ಯೂಟರ್ ಸೈನ್ಸ್, ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್, ಎಲೆಕ್ಟ್ರಿಕಲ್, ಇನ್‌ಸ್ಟ್ರುಮೆಂಟೇಶನ್, ಡೇಟಾ ಸೈನ್ಸ್ ಮತ್ತು ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಪದವಿ ಹೊಂದಿರಬೇಕು.
ವಯೋಮಿತಿ (02-06-2025 ರ ಅನ್ವಯ) :
✔ ಕನಿಷ್ಟ: 21 ವರ್ಷ
✔ ಗರಿಷ್ಠ: 30 ವರ್ಷ
ವಯೋಮಿತಿಯಲ್ಲಿ ರಿಯಾಯಿತಿ :
ಓಬಿಸಿ ಅಭ್ಯರ್ಥಿಗಳಿಗೆ : 3 ವರ್ಷ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ : 5 ವರ್ಷ
ಪಿಡಬ್ಲ್ಯುಡಿ (ಸಾಮಾನ್ಯ) : 10 ವರ್ಷ
ಪಿಡಬ್ಲ್ಯುಡಿ (ಓಬಿಸಿ) : 13 ವರ್ಷ
ಪಿಡಬ್ಲ್ಯುಡಿ (ಎಸ್‌ಸಿ/ಎಸ್‌ಟಿ) : 15 ವರ್ಷ
ಅರ್ಜಿ ಶುಲ್ಕ :
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳನ್ನು GATE ಅಂಕಗಳು ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ಹೇಗೆ ಅರ್ಜಿ ಸಲ್ಲಿಸಬೇಕು :
1. ಅಧಿಕೃತ ಅಧಿಸೂಚನೆ ಸಂಪೂರ್ಣವಾಗಿ ಓದಿ.
2. ಆನ್‌ಲೈನ್ ಅರ್ಜಿ ಸಲ್ಲಿಸುವ ಮೊದಲು ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಸಿದ್ದವಾಗಿರಲಿ.
3. ಅಗತ್ಯ ದಾಖಲೆಗಳು ಸಿದ್ಧಪಡಿಸಿ – ಗುರುತಿನ ಚೀಟಿ, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಇತ್ಯಾದಿ.
4. ಕೆಳಗೆ ನೀಡಿರುವ ಲಿಂಕ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಿ.
5. ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ದಾಖಲೆಗಳನ್ನು ಅಟ್ಯಾಚ್ ಮಾಡಿ.
6. ಅಂತಿಮವಾಗಿ ಸಬ್‌ಮಿಟ್ ಮಾಡಿ ಮತ್ತು ಅರ್ಜಿ ಸಂಖ್ಯೆಯನ್ನು ನೋಟು ಮಾಡಿ.
ಪ್ರಮುಖ ದಿನಾಂಕಗಳು :
📅 ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ : 02 ಮೇ 2025
📅 ಅಂತಿಮ ದಿನಾಂಕ : 02 ಜೂನ್ 2025
- ಇದೊಂದು ಉತ್ತಮ ಸರ್ಕಾರಿ ಉದ್ಯೋಗದ ಅವಕಾಶವಾಗಿದ್ದು, ಆಸಕ್ತ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸುವುದು ಉತ್ತಮ.
- End Date
- 2 ಜೂನ್ 2025
- Employment Type
- FULL_TIME
- Organization
- KPSC Vaani (Website)
- Location
- KA,
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.