Indian Coast Guard Recruitment 2026: ಭಾರತೀಯ ತಟರಕ್ಷಕ ಪಡೆಯಲ್ಲಿ 365 ಹುದ್ದೆಗಳ ಬೃಹತ್ ನೇಮಕಾತಿ! 10th pass, 12th pass ಅಭ್ಯರ್ಥಿಗಳಿಗೆ ಸುವರ್ಣಾವಕಾಶ

Indian Coast Guard Recruitment 2026: ಭಾರತೀಯ ತಟರಕ್ಷಕ ಪಡೆಯಲ್ಲಿ 365 ಹುದ್ದೆಗಳ ಬೃಹತ್ ನೇಮಕಾತಿ! 10th pass, 12th pass ಅಭ್ಯರ್ಥಿಗಳಿಗೆ ಸುವರ್ಣಾವಕಾಶ
Published by Heena Sheregar
37 minutes ago Others
Tags: PUC SSLC

ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯಾಚರಿಸುವ ಭಾರತೀಯ ತಟರಕ್ಷಕ ಪಡೆ (ICG) CGEPT 01/2027 ಮತ್ತು 02/2027 ಬ್ಯಾಚ್‌ಗಳ ನಾವಿಕ್, ಯಾಂತ್ರಿಕ್ ಸೇರಿದಂತೆ ಒಟ್ಟು 365 ಹುದ್ದೆಗಳ ಭರ್ತಿಗೆ Staff Selection Commission (SSC) ಮೂಲಕ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದೆ. 10ನೇ ತರಗತಿ, 12ನೇ ತರಗತಿ ಹಾಗೂ ಡಿಪ್ಲೊಮಾ ಮುಗಿಸಿದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಭಾರತೀಯ ರಕ್ಷಣಾ ಕ್ಷೇತ್ರದಲ್ಲಿ ದೇಶಸೇವೆ ಮಾಡುವುದರೊಂದಿಗೆ ಉತ್ತಮ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಇದು ಸುವರ್ಣ ಅವಕಾಶವಾಗಿದೆ.   

 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಹುದ್ದೆಯ ಸ್ವರೂಪಕ್ಕೆ ಅನುಗುಣವಾಗಿ 18 ರಿಂದ 22 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದ್ದು, ಆಯ್ಕೆಯಾದ ಉದ್ಯೋಗಿಗಳಿಗೆ ಪ್ರತಿ ತಿಂಗಳು ₹21,700 ರಿಂದ ₹29,200 ರವರೆಗೆ ಮೂಲ ವೇತನ ಹಾಗೂ ಇತರ ಭತ್ಯೆಗಳು ಸಿಗಲಿವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್ ssc.gov.in ಮೂಲಕ ಆನ್‌ಲೈನ್‌ನಲ್ಲಿ ದಿನಾಂಕ 21 ಅಕ್ಟೋಬರ್ 2026ರ ಸಂಜೆ 5:30 ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.

 

ನೇಮಕಾತಿಯ ಕಂಪ್ಲೀಟ್ ವಿವರಗಳು, ಹುದ್ದೆಗಳ ಹಂಚಿಕೆ, ದೈಹಿಕ ಪರೀಕ್ಷೆ ಹಾಗೂ ಅರ್ಜಿ ಸಲ್ಲಿಸುವ ಹಂತ-ಹಂತದ ಉಚಿತ ಮಾರ್ಗದರ್ಶನಕ್ಕಾಗಿ ತಕ್ಷಣವೇ KPSCVAANI.COM ವೆಬ್‌ಸೈಟ್‌ಗೆ ಭೇಟಿ ನೀಡಿ! ಕರ್ನಾಟಕದ ಉದ್ಯೋಗಾಂಕ್ಷಿಗಳಿಗೆ ಕ್ಷಣಾರ್ಧದಲ್ಲಿ ನಿಖರ ಸರ್ಕಾರಿ ಉದ್ಯೋಗದ ಅಪ್ಡೇಟ್‌ಗಳನ್ನು ಪಡೆಯಲು ದಿನವೂ KPSCVAANI.COM ಫಾಲೋ ಮಾಡಲು ಮರೆಯದಿರಿ!

 

 

ICG CGEPT Recruitment 2026 ಪ್ರಮುಖ ವಿವರಗಳು:

  • ನೇಮಕಾತಿ ಸಂಸ್ಥೆ: Indian Coast Guard (ICG)  
  • ಪರೀಕ್ಷಾ ನಡೆಸುವ ಸಂಸ್ಥೆ: Staff Selection Commission (SSC)  
  • ಬ್ಯಾಚ್‌ಗಳು: CGEPT 01/2027 & CGEPT 02/2027  
  • ಒಟ್ಟು ಖಾಲಿ ಹುದ್ದೆಗಳು: 365 ಹುದ್ದೆಗಳು
  • ಹುದ್ದೆಗಳ ಹೆಸರು: Navik (GD), Navik (DB), Yantrik, Hygienist-I  
  • ಅರ್ಜಿ ವಿಧಾನ: ಆನ್‌ಲೈನ್ (Online)   

 

ಪ್ರಮುಖ ದಿನಾಂಕಗಳು (Important Dates):

  • ಅಧಿಸೂಚನೆ ಪ್ರಕಟಣೆ ದಿನಾಂಕ: ಅಕ್ಟೋಬರ್ 2026  
  • ಆನ್‌ಲೈನ್ ಅರ್ಜಿ ಆರಂಭ ದಿನಾಂಕ: 06 ಅಕ್ಟೋಬರ್ 2026  
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಅಕ್ಟೋಬರ್ 2026 (ಸಂಜೆ 5:30 ರವರೆಗೆ)  
  • Stage-I ಪರೀಕ್ಷಾ ದಿನಾಂಕ: ಅಧಿಕೃತ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ಪ್ರಕಟಿಸಲಾಗುವುದು.

 

ಹುದ್ದೆಗಳ ವಿಂಗಡಣೆ (Detailed Vacancy Breakdown):

  • Navik (General Duty): 260 (ಪುರುಷ: 234, ಮಹಿಳೆ: 26)  
  • Navik (Domestic Branch): 25 ಪುರುಷ ಮಾತ್ರ  
  • Yantrik (Mech/Elec/ECE): 60 ಪುರುಷ ಮಾತ್ರ  
  • Hygienist-I : 20 ಪುರುಷ ಮಾತ್ರ  
  • ಒಟ್ಟು ಹುದ್ದೆಗಳು: 365 ಹುದ್ದೆಗಳು

 

ಶೈಕ್ಷಣಿಕ ಅರ್ಹತೆಗಳು (Educational Qualification):

1. Navik (General Duty):

  • COBSE (Council of Boards for School Education) ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ (PUC / Science) ತೇರ್ಗಡೆಯಾಗಿರಬೇಕು.  
  • ಪಿಯುಸಿಯಲ್ಲಿ ಗಣಿತ (Mathematics) ಮತ್ತು ಭೌತಶಾಸ್ತ್ರ (Physics) ವಿಷಯಗಳನ್ನು ಕಡ್ಡಾಯವಾಗಿ ವ್ಯಾಸಂಗ ಮಾಡಿರಬೇಕು.   

2. Navik (Domestic Branch):

  • ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ (SSLC) ತೇರ್ಗಡೆಯಾಗಿರಬೇಕು.   

3. Hygienist-I:

  • 10ನೇ ತರಗತಿ (SSLC) ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ಟ್ರೇಡ್‌ನಲ್ಲಿ ITI ಪೂರ್ಣಗೊಳಿಸಿರಬೇಕು.   

4. Yantrik (Mechanical / Electrical / Electronics & Telecommunication):

  • 10ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು AICTE ಮಾನ್ಯತೆ ಪಡೆದ ಸಂಸ್ಥೆಯಿಂದ 3 ಅಥವಾ 4 ವರ್ಷಗಳ ಇಂಜಿನಿಯರಿಂಗ್ ಡಿಪ್ಲೊಮಾ (Diploma) ಪಡೆದಿರಬೇಕು.  
  • ಅಥವಾ 10 ಹಾಗೂ 12ನೇ ತರಗತಿ ನಂತರ 2 ಅಥವಾ 3 ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.   

 

 

ವಯೋಮಿತಿ ಮತ್ತು ವಯೋ ಸಡಿಲಿಕೆ (Age Criteria):

  • ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಠ 22 ವರ್ಷಗಳು. (ಹುದ್ದೆವಾರು ಜನ್ಮದಿನಾಂಕದ ವ್ಯಾಪ್ತಿ ಕೆಳಗಿನಂತಿದೆ):  
  • Navik (GD): 01 ನವೆಂಬರ್ 2005 ರಿಂದ 01 ಮೇ 2009 ರ ನಡುವೆ ಜನಿಸಿರಬೇಕು.  
  • Yantrik: 01 ಮೇ 2005 ರಿಂದ 01 ಮೇ 2009 ರ ನಡುವೆ ಜನಿಸಿರಬೇಕು.  
  • Navik (DB): 01 ನವೆಂಬರ್ 2005 ರಿಂದ 01 ಅಕ್ಟೋಬರ್ 2009 ರ ನಡುವೆ ಜನಿಸಿರಬೇಕು.  
  • Hygienist-I: 01 ನವೆಂಬರ್ 2002 ರಿಂದ 01 ಅಕ್ಟೋಬರ್ 2009 ರ ನಡುವೆ ಜನಿಸಿರಬೇಕು.   

 

ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ:

  • OBC (Non-Creamy Layer) ಅಭ್ಯರ್ಥಿಗಳಿಗೆ: 3 ವರ್ಷಗಳ ಸಡಿಲಿಕೆ.  
  • SC / ST ಅಭ್ಯರ್ಥಿಗಳಿಗೆ: 5 ವರ್ಷಗಳ ಸಡಿಲಿಕೆ.   

 

ವೇತನ ಶ್ರೇಣಿ ಮತ್ತು ಇತರೆ ಭತ್ಯೆಗಳು (Pay & Allowances)

  • Yantrik: Basic Pay ₹29,200/- (Pay Level-5) + Yantrik Pay ₹6,200/-.  
  • Navik (GD / DB) & Hygienist-I: Basic Pay ₹21,700/- (Pay Level-3).  
  • ಇತರೆ ಸೌಲಭ್ಯಗಳು: ಉಚಿತ ರೇಷನ್, ವೈದ್ಯಕೀಯ ಸೌಲಭ್ಯ, ಉಚಿತ ಸಮವಸ್ತ್ರ, ಕ್ಯಾಂಟೀನ್ (CSD) ಸೌಲಭ್ಯ, ಮತ್ತು ಪ್ರವಾಸ ಭತ್ಯೆಗಳು ಸರ್ಕಾರಿ ನಿಯಮಾವಳಿಗಳಂತೆ ಲಭ್ಯವಿರುತ್ತವೆ.   

 

ಆಯ್ಕೆ ಪ್ರಕ್ರಿಯೆಯ ಹಂತಗಳು (Detailed Selection Process): ಆಯ್ಕೆ ಪ್ರಕ್ರಿಯೆಯನ್ನು ಒಟ್ಟು 4 ಹಂತಗಳಲ್ಲಿ ವಿಂಗಡಿಸಲಾಗಿದೆ:   
1. Stage - I (ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ - CBE):

  • ಅಭ್ಯರ್ಥಿಯ ಹುದ್ದೆಗೆ ಅನುಗುಣವಾಗಿ ಲಿಖಿತ ಪರೀಕ್ಷೆ (Section I, II, III, IV, V) ನಡೆಯಲಿದೆ.  
  • ಆಬ್ಜೆಕ್ಟಿವ್ ಮಾದರಿಯ (MCQ) ಪ್ರಶ್ನೆಗಳಿರುತ್ತವೆ.

2. Stage - II (ಆನ್‌ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ):

  • Physical Fitness Test (PFT): 1.6 ಕಿ.ಮೀ ಓಟ (7 ನಿಮಿಷಗಳಲ್ಲಿ), 20 ಉತ್ತುಕ್ ಬೈಟಕ್ (Squats), 10 ಪುಷ್-ಅಪ್ಸ್.  
  • ಅಸೆಸ್‌ಮೆಂಟ್ ಟೆಸ್ಟ್ & ದಾಖಲೆ ಪರಿಶೀಲನೆ (Document Verification).  
  • ಪ್ರಾಥಮಿಕ ವೈದ್ಯಕೀಯ ತಪಾಸಣೆ (Initial Medical Examination).   

3. Stage - III (INS ಚಿಲ್ಕಾ ಕೇಂದ್ರದಲ್ಲಿ):

  • ಅಂತಿಮ ದಾಖಲಾತಿ ಪರಿಶೀಲನೆ ಮತ್ತು INS ಚಿಲ್ಕಾದಲ್ಲಿ ತರಬೇತಿಗೆ ಮುನ್ನ ಪ್ರಿ-ಎನ್‌ರೋಲ್‌ಮೆಂಟ್ ವೈದ್ಯಕೀಯ ಪರೀಕ್ಷೆ (Pre-Enrollment Medicals).   

4. Stage - IV (ಅಂತಿಮ ಹಂತ):

  • ಮೂಲ ಶೈಕ್ಷಣಿಕ ಪ್ರಮಾಣಪತ್ರಗಳ ದೃಢೀಕರಣ ಮತ್ತು ತರಬೇತಿಯ ಪ್ರಾರಂಭ.   

ಅರ್ಜಿ ಶುಲ್ಕ (Application Fee):

  • SC / ST ಅಭ್ಯರ್ಥಿಗಳು: ಶುಲ್ಕವಿಲ್ಲ (ಉಚಿತ).  
  • UR / OBC / EWS ಅಭ್ಯರ್ಥಿಗಳು: ₹550/- (ಆನ್‌ಲೈನ್ ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ UPI ಮೂಲಕ ಪಾವತಿಸಬಹುದು).   

 

ಇದನ್ನು ಓದಿ: ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ: NWR ನಲ್ಲಿ 2008 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 10ನೇ ತರಗತಿ & ITI ಪಾಸಾದವರಿಗೆ ಸುವರ್ಣಾವಕಾಶ!

 

ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಬೇಕಾಗುವ ದಾಖಲೆಗಳು (Required Documents):

  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಬಣ್ಣದ ಫೋಟೋ (ಆನ್‌ಲೈನ್ ಅರ್ಜಿಯಲ್ಲಿ Live Photo Capture ಇರುತ್ತದೆ).  
  • ಅಭ್ಯರ್ಥಿಯ ಡಿಜಿಟಲ್ ಸಹಿ.  
  • 10ನೇ ತರಗತಿ (SSLC) ಅಂಕಪಟ್ಟಿ (ಜನ್ಮದಿನಾಂಕದ ಪುರಾವೆಗಾಗಿ).  
  • 12ನೇ ತರಗತಿ (PUC) ಅಂಕಪಟ್ಟಿ / ಡಿಪ್ಲೊಮಾ ಪ್ರಮಾಣಪತ್ರ.   
  • ಚಾಲ್ತಿಯಲ್ಲಿರುವ ಜಾತಿ ಪ್ರಮಾಣಪತ್ರ (OBC-NCL / SC / ST / EWS).   
  • ಸರ್ಕಾರಿ ಗುರುತಿನ ಚೀಟಿ (Aadhaar, Voter ID, Passport ಅಥವಾ Driving License).
  • ಚಾಲ್ತಿಯಲ್ಲಿರುವ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ.   

ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ (Step-by-Step Application Process):

  • Staff Selection Commission ನ ಅಧಿಕೃತ ವೆಬ್‌ಸೈಟ್ www.ssc.gov.in ಗೆ ಭೇಟಿ ನೀಡಿ.
  • ನೀವು ಹೊಸ ಬಳಕೆದಾರರಾಗಿದ್ದರೆ "One Time Registration (OTR)" ಪೂರ್ಣಗೊಳಿಸಿ.   
  • ಲಾಗಿನ್ ಆದ ನಂತರ "Indian Coast Guard CGEPT 01/2027 & 02/2027" ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಶೈಕ್ಷಣಿಕ ವಿವರಗಳು, ವಿಳಾಸ ಮತ್ತು ಇತರೆ ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
  • ನಿಮ್ಮ ಸಹಿ ಮತ್ತು ಅಗತ್ಯ ದಾಖಲೆಗಳನ್ನು ನಿಗದಿತ ಸೈಜ್‌ನಲ್ಲಿ ಅಪ್‌ಲೋಡ್ ಮಾಡಿ, ಲೈವ್ ವೆಬ್‌ಕ್ಯಾಮ್ ಫೋಟೋವನ್ನು ಸೆರೆಹಿಡಿಯಿರಿ.   
  • ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
  • ಅರ್ಜಿಯನ್ನು ಒಮ್ಮೆ ಮರುಪರಿಶೀಲಿಸಿ (Preview) "Submit" ಬಟನ್ ಒತ್ತಿ ಹಾಗೂ ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದಿಟ್ಟುಕೊಳ್ಳಿ.
Advertisement
Job Overview
No. of posts
365
Start Date
6 ಅಕ್ಟೋಬರ್ 2026
End Date
21 ಅಕ್ಟೋಬರ್ 2026
Employment Type
FULL_TIME
Organization
Indian Coast Guard (Website)
Location
Purana Quila Road, New Delhi, DL, 11001
To download official notification
Related Tags: PUC SSLC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.