ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದಲ್ಲಿ 28 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ – 10ನೇ ತರಗತಿ ಹಾಗೂ ITI ಪಾಸ್ ಆದವರಿಗೆ ಕೇಂದ್ರ ಸರ್ಕಾರಿ ಉದ್ಯೋಗದ ಸುವರ್ಣ ಅವಕಾಶ!
ಮೈಸೂರಿನ ಸಿಎಸ್ಐಆರ್ - ಸಿಎಫ್ಟಿಆರ್ಐ (CSIR-CFTRI) ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ತಾಂತ್ರಿಕ ವಿಭಾಗದಲ್ಲಿ ವೃತ್ತಿ ಜೀವನ ಆರಂಭಿಸಲು ಬಯಸುವವರಿಗೆ ಇದು ಅತ್ಯುತ್ತಮ ಸದವಕಾಶವಾಗಿದೆ.
ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಎಂಬ ಕನಸು ಹೊತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣ ಅವಕಾಶವೊಂದು ಎದುರಾಗಿದೆ. ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯವು ಒಟ್ಟು 28 ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಈ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸುವುದು ಅನೇಕರ ಕನಸಾಗಿರುತ್ತದೆ. ಈಗ ಪ್ರಕಟವಾಗಿರುವ ಅಧಿಸೂಚನೆ ಸಂಖ್ಯೆ Rec.02/2026 ರ ಪ್ರಕಾರ, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿವಿಧ ತಾಂತ್ರಿಕ ಟ್ರೇಡ್ಗಳಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಶೈಕ್ಷಣಿಕ ಅರ್ಹತೆ ಏನು? ಮತ್ತು ವಯೋಮಿತಿ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ನೇಮಕಾತಿಯ ಸಂಕ್ಷಿಪ್ತ ವಿವರಗಳು:
- ಸಂಸ್ಥೆಯ ಹೆಸರು : ಸಿ.ಎಸ್.ಐ.ಆರ್.-ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (CSIR-CFTRI), ಮೈಸೂರು
- ಹುದ್ದೆಯ ಹೆಸರು : ಟೆಕ್ನಿಷಿಯನ್ (Technician-1)
- ಒಟ್ಟು ಹುದ್ದೆಗಳು : 28 ಹುದ್ದೆಗಳು
- ವೇತನ ಶ್ರೇಣಿ : ಲೆವೆಲ್-2 (ರೂ. 19,900 - 63,200)
- ಉದ್ಯೋಗ ಸ್ಥಳ : ಮೈಸೂರು (ಹಾಗೂ ಹೈದರಾಬಾದ್, ಮುಂಬೈ, ಲಕ್ನೋ ರಿಸೋರ್ಸ್ ಸೆಂಟರ್ಗಳು)
ಪ್ರಮುಖ ದಿನಾಂಕಗಳು (Important Dates):
- ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19-10-2026 (ಬೆಳಿಗ್ಗೆ 10:00 ಗಂಟೆಯಿಂದ)
- ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-11-2026 (ರಾತ್ರಿ 11:59 ರವರೆಗೆ)
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 18-11-2026
- ಮುದ್ರಿತ ಹಾರ್ಡ್ ಕಾಪಿ (Hard Copy) ತಲುಪಲು ಕೊನೆಯ ದಿನಾಂಕ: 26-11-2026
ವರ್ಗವಾರು ಹುದ್ದೆಗಳ ಹಂಚಿಕೆ ವಿವರ:
- ಅನ್ರಿವರ್ವ್ಡ್ (UR): 09
- ಆರ್ಥಿಕವಾಗಿ ಹಿಂದುಳಿದ ವರ್ಗ (EWS): 05
- ಪರಿಶಿಷ್ಟ ಜಾತಿ (SC): 04
- ಪರಿಶಿಷ್ಟ ಪಂಗಡ (ST): 01
- ಇತರೆ ಹಿಂದುಳಿದ ವರ್ಗ (OBC - NCL): 09
- ಒಟ್ಟು ಹುದ್ದೆಗಳು : 28 ಹುದ್ದೆಗಳು
(ಗಮನಿಸಿ: ಒಟ್ಟು 28 ಹುದ್ದೆಗಳಲ್ಲಿ 2 ಹುದ್ದೆಗಳನ್ನು ಮಾಜಿ ಸೈನಿಕರಿಗೆ (ESM) ಹಾಗೂ 2 ಹುದ್ದೆಗಳನ್ನು ನಿರ್ದಿಷ್ಟ ಅಂಗವಿಕಲರಿಗೆ (PwBDs - "b" ಮತ್ತು "c" ವಿಭಾಗ) ಮೀಸಲಿಡಲಾಗಿದೆ).
ವಿದ್ಯಾರ್ಹತೆ (Educational Qualification):
ಅಭ್ಯರ್ಥಿಗಳು ಕನಿಷ್ಠ ಶೇ. 55% ಅಂಕಗಳೊಂದಿಗೆ ಎಸ್ಎಸ್ಸಿ / 10ನೇ ತರಗತಿ (Science subjects) ಹಾಗೂ ಸಂಬಂಧಿತ ಟ್ರೇಡ್ನಲ್ಲಿ ITI ಪ್ರಮಾಣಪತ್ರ ಅಥವಾ ನ್ಯಾಷನಲ್/ಸ್ಟೇಟ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು. (ಅಥವಾ ನಿಗದಿತ ಅನುಭವ/ಅಪ್ರೆಂಟಿಸ್ಶಿಪ್ ಪೂರ್ಣಗೊಳಿಸಿರಬೇಕು).
ಪ್ರಮುಖ ಟ್ರೇಡ್ಗಳು (Trades):
- Fitter
- Electronics Mechanic
- Instrument Mechanic
- Laboratory Assistant (Chemical Plant)
- Computer Operator and Programming Assistant (COPA)
- Information & Communication Technology System Maintenance
- Refrigeration & Air Conditioning Technician
- Electrician, Carpenter, Plumber, Sheet Metal Worker, Turner, Welder.
ವೇತನ ಶ್ರೇಣಿ (Salary & Pay Scale):
- ವೇತನ ಮಟ್ಟ: 7ನೇ ವೇತನ ಆಯೋಗದ Pay Level-2 (ರೂ. 19,900 - ರೂ. 63,200).
- ಅಂದಾಜು ಒಟ್ಟು ವೇತನ: ಮೈಸೂರು ಹೆಡ್ಕ್ವಾರ್ಟರ್ಸ್ ನಿಯಮಾನುಸಾರ ಮನೆ ಬಾಡಿಗೆ ಭತ್ಯೆ (HRA) ಸೇರಿದಂತೆ ತಿಂಗಳಿಗೆ ಅಂದಾಜು ರೂ. 37,260/- ದೊರೆಯಲಿದೆ.
ವಯೋಮಿತಿ (Age Limit):
- ಕನಿಷ್ಠ ವಯಸ್ಸು: 18 ವರ್ಷಗಳು.
- ಗರಿಷ್ಠ ವಯಸ್ಸು: 28 ವರ್ಷಗಳು (ದಿನಾಂಕ 18-11-2026ರನ್ವಯ).
- ವಯೋಮಿತಿ ಸಡಿಲಿಕೆ: ಸರ್ಕಾರದ ನಿಯಮಾನುಸಾರ SC/ST ಅಭ್ಯರ್ಥಿಗಳಿಗೆ 5 ವರ್ಷಗಳು, OBC ಅಭ್ಯರ್ಥಿಗಳಿಗೆ 3 ವರ್ಷಗಳು ಮತ್ತು PwBD/ಮಾಜಿ ಸೈನಿಕರಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಅರ್ಜಿ ಶುಲ್ಕ (Application Fee):
- ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ: ರೂ. 500/- (SBI Collect ಮೂಲಕ ಆನ್ಲೈನ್ನಲ್ಲಿ ಪಾವತಿಸಬೇಕು).
- SC / ST / PwBD / ಮಹಿಳೆಯರು / ಮಾಜಿ ಸೈನಿಕರಿಗೆ: ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ (ಶುಲ್ಕ ವಿನಾಯಿತಿ ಇದೆ).
ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ (Selection Procedure & Exam Plan): ಅಭ್ಯರ್ಥಿಗಳ ಆಯ್ಕೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:
1. ಸ್ಕ್ರೀನಿಂಗ್ ಮತ್ತು ಟ್ರೇಡ್ ಟೆಸ್ಟ್ (Trade Test): ಅರ್ಜಿ ಸಲ್ಲಿಸಿದವರನ್ನು ಸ್ಕ್ರೀನಿಂಗ್ ಕಮಿಟಿಯು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳನ್ನು ಸಂಬಂಧಿತ ಟ್ರೇಡ್ನಲ್ಲಿ 'ಟ್ರೇಡ್ ಟೆಸ್ಟ್'ಗೆ ಆಹ್ವಾನಿಸುತ್ತದೆ. ಇದು ಕೇವಲ ಅರ್ಹತಾ ಸ್ವರೂಪದ್ದಾಗಿರುತ್ತದೆ (Qualifying in nature).
2. ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ (Competitive Written Examination): ಟ್ರೇಡ್ ಟೆಸ್ಟ್ನಲ್ಲಿ ತೇರ್ಗಡೆಯಾದವರಿಗೆ OMR ಅಥವಾ ಕಂಪ್ಯೂಟರ್ ಆಧಾರಿತ ವಸ್ತುನಿಷ್ಠ ಮಾದರಿಯ ಪರೀಕ್ಷೆ ಇರುತ್ತದೆ. ಪರೀಕ್ಷೆಯಲ್ಲಿ ಒಟ್ಟು ಮೂರು ಪೇಪರ್ಗಳಿರುತ್ತವೆ:
- Paper-I (ಸಮಯ: 1 ಗಂಟೆ): ಮೆಂಟಲ್ ಎಬಿಲಿಟಿ ಟೆಸ್ಟ್ (Mental Ability Test) - 50 ಪ್ರಶ್ನೆಗಳು, 100 ಅಂಕಗಳು (ಪ್ರತಿ ಸರಿಯಾದ ಉತ್ತರಕ್ಕೆ 2 ಅಂಕಗಳು; ಯಾವುದೇ ನೆಗೆಟಿವ್ ಮಾರ್ಕ್ಸ್ ಇರುವುದಿಲ್ಲ).
- Paper-II (ಸಮಯ: 30 ನಿಮಿಷಗಳು): ಸಾಮಾನ್ಯ ಜ್ಞಾನ (General Awareness - 25 ಪ್ರಶ್ನೆಗಳು) ಹಾಗೂ ಇಂಗ್ಲಿಷ್ ಭಾಷೆ (English Language - 25 ಪ್ರಶ್ನೆಗಳು) - ಒಟ್ಟು 150 ಅಂಕಗಳು (ಪ್ರತಿ ತಪ್ಪಿಗೆ 1 ನೆಗೆಟಿವ್ ಮಾರ್ಕ್ ಇರುತ್ತದೆ).
- Paper-III (ಸಮಯ: 1 ಗಂಟೆ): ಸಂಬಂಧಿತ ವಿಷಯ/ಟ್ರೇಡ್ಗೆ ಸಂಬಂಧಿಸಿದ ಪ್ರಶ್ನೆಗಳು (Concerned Subject) - 50 ಪ್ರಶ್ನೆಗಳು, 150 ಅಂಕಗಳು (ಪ್ರತಿ ತಪ್ಪಿಗೆ 1 ನೆಗೆಟಿವ್ ಮಾರ್ಕ್ ಇರುತ್ತದೆ).
- ಅಂತಿಮ ಮೆರಿಟ್ ಪಟ್ಟಿ: ಮೊದಲ ಪೇಪರ್ನಲ್ಲಿ (Paper-I) ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸಿದವರ ಪೇಪರ್-II ಮತ್ತು ಪೇಪರ್-III ರ ಅಂಕಗಳ ಆಧಾರದ ಮೇಲೆ ಮಾತ್ರ ಅಂತಿಮ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.
ಇದನ್ನು ಓದಿ: ಬೆಳಗಾವಿ ಆರ್ಮಿ ಪಬ್ಲಿಕ್ ಸ್ಕೂಲ್ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ 2026: 12ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ!
ಅರ್ಜಿ ಸಲ್ಲಿಸುವ ವಿಧಾನ (How to Apply Online & Offline):
- ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ಸೈಟ್ https://www.cftri.res.in ಅಥವಾ https://recruitment.cftri.res.in ಗೆ ಭೇಟಿ ನೀಡಿ.
- 'Recruitment for the post of Technician (1)' ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಂದಣಿ (Registration) ಮಾಡಿಕೊಳ್ಳಿ.
- ಆನ್ಲೈನ್ ಅರ್ಜಿಯಲ್ಲಿ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ, ನಿಮ್ಮ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ, ಡಿಜಿಟಲ್ ಸಿಗ್ನೇಚರ್ ಹಾಗೂ ಲೈವ್ ಫೋಟೋ ಕ್ಯಾಪ್ಚರ್ ಪೂರ್ಣಗೊಳಿಸಿ.
- ಅಗತ್ಯವಿರುವ ಎಲ್ಲಾ ಶೈಕ್ಷಣಿಕ ದಾಖಲೆಗಳು, ಜಾತಿ ಪ್ರಮಾಣಪತ್ರ, ಅನುಭವದ ಪ್ರಮಾಣಪತ್ರ ಇತ್ಯಾದಿಗಳನ್ನು PDF ರೂಪದಲ್ಲಿ (1MB ಒಳಗೆ) ಅಪ್ಲೋಡ್ ಮಾಡಿ.
- SBI Collect ಲಿಂಕ್ ಬಳಸಿ ರೂ. 500/- ಅರ್ಜಿ ಶುಲ್ಕ ಪಾವತಿಸಿ ಇ-ರಸೀತಿಯನ್ನು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿ.
- ಆನ್ಲೈನ್ ಅರ್ಜಿ ಸಮಾಪ್ತಿಯ ನಂತರ ಅರ್ಜಿಯ ಮುದ್ರಿತ ಪ್ರತಿಯನ್ನು (Hard Copy) ಡೌನ್ಲೋಡ್ ಮಾಡಿ, ಸಹ ಮಾಡಿ ಅಗತ್ಯ ಸ್ವಯಂ-ದೃಢೀಕೃತ ದಾಖಲೆಗಳೊಂದಿಗೆ ಕೆಳಕಂಡ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟ್ರ್ ಪೋಸ್ಟ್ ಮೂಲಕ ಕಳುಹಿಸುವುದು ಕಡ್ಡಾಯವಾಗಿದೆ:
ಅರ್ಜಿ ಕಳುಹಿಸಬೇಕಾದ ವಿಳಾಸ:
Recruitment Section (E-I Section),
CSIR-Central Food Technological Research Institute,
Cheluvamba Mansion (Opposite to Rail Museum),
Mysuru - 570020, Karnataka.
- No. of posts
- 28
- End Date
- 18 ನವೆಂಬರ್ 2026
- Pay Scale
- 19900 - 63200 INR
- Employment Type
- FULL_TIME
- Organization
- CSIR-Central Food Technological Research Institute, Mysuru (Website)
- Location
- Cheluvamba Mansion, Mysuru, KA, 570020
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.

