CRPF ಬೃಹತ್ ನೇಮಕಾತಿ 2026: 10ನೇ ತರಗತಿ, PUC ಪಾಸಾದವರಿಗೆ 521 ಕಾನ್ಸ್ಟೇಬಲ್ & ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕ್ರೀಡಾ ಕೋಟಾದಡಿ 521 ಹೆಡ್ ಕಾನ್ಸ್ಟೆಬಲ್ ಹಾಗೂ ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ನವೆಂಬರ್ 11 ಕೊನೆಯ ದಿನ.
ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ 'ಕೇಂದ್ರ ಮೀಸಲು ಪೊಲೀಸ್ ಪಡೆ' (CRPF) ಅತ್ಯುತ್ತಮ ಉದ್ಯೋಗಾವಕಾಶವನ್ನು ಒದಗಿಸಿದೆ. CRPF ನಲ್ಲಿ ಕ್ರೀಡಾ ಕೋಟಾ-2026 ರ (Sports Quota-2026) ಅಡಿಯಲ್ಲಿ ಖಾಲಿ ಇರುವ 521 ಹೆಡ್ ಕಾನ್ಸ್ಟೇಬಲ್ (HC) ಮತ್ತು ಕಾನ್ಸ್ಟೇಬಲ್ (CT) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.
ಭಾರತದ ಸಾಮಾನ್ಯ ನಿವಾಸಿಗಳಾಗಿರುವ ಅರ್ಹ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಂದ ಕೇವಲ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಕ್ಟೋಬರ್ 12, 2026 ರಿಂದ ಆರಂಭವಾಗಲಿರುವ ಅರ್ಜಿ ಸಲ್ಲಿಕೆಗೆ ನವೆಂಬರ್ 11, 2026 ರವರೆಗೆ ಅವಕಾಶ ನೀಡಲಾಗಿದೆ.
CRPF ಕ್ರೀಡಾ ಕೋಟಾ ನೇಮಕಾತಿಯ ಹುದ್ದೆಗಳ ವಿವರ, ವಿದ್ಯಾರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ವಿವರಗಳು ಇಲ್ಲಿವೆ.
ಹುದ್ದೆಗಳ ವಿಂಗಡಣೆ ಮತ್ತು ಆಕರ್ಷಕ ವೇತನ
ಈ ನೇಮಕಾತಿಯಲ್ಲಿ ಕ್ರೀಡಾ ಕೋಟಾದಡಿ ಒಟ್ಟು 521 ಗ್ರೂಪ್-ಸಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ:
- ಹೆಡ್ ಕಾನ್ಸ್ಟೇಬಲ್ (HC/GD): 182 ಹುದ್ದೆಗಳು (ಪುರುಷರು: 150, ಮಹಿಳೆಯರು: 32). ವೇತನ ಶ್ರೇಣಿ: ಲೆವೆಲ್-04 (ರೂ. 25,500 ರಿಂದ ರೂ. 81,100/-)
- ಕಾನ್ಸ್ಟೇಬಲ್ (CT/GD): 339 ಹುದ್ದೆಗಳು (ಪುರುಷರು: 258, ಮಹಿಳೆಯರು: 81). ವೇತನ ಶ್ರೇಣಿ: ಲೆವೆಲ್-03 (ರೂ. 21,700 ರಿಂದ ರೂ. 69,100/-)
- ಒಟ್ಟು ಹುದ್ದೆಗಳು: 521 ಹುದ್ದೆಗಳು
ಪ್ರಮುಖ ದಿನಾಂಕಗಳು
- ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ: 12 ಅಕ್ಟೋಬರ್ 2026 (ಬೆಳಿಗ್ಗೆ 9:00 ಗಂಟೆಗೆ)
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11 ನವೆಂಬರ್ 2026 (ರಾತ್ರಿ 23:59 ಗಂಟೆಯವರೆಗೆ)
- ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಅವಕಾಶ: 12 ನವೆಂಬರ್ ರಿಂದ 14 ನವೆಂಬರ್ 2026 ರವರೆಗೆ
ಶೈಕ್ಷಣಿಕ ಹಾಗೂ ಕ್ರೀಡಾ ಅರ್ಹತೆ
1 ಶೈಕ್ಷಣಿಕ ವಿದ್ಯಾರ್ಹತೆ:
- ಹೆಡ್ ಕಾನ್ಸ್ಟೇಬಲ್ ಹುದ್ದೆಗೆ: 10+2 (PUC/12ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಕಾನ್ಸ್ಟೇಬಲ್ ಹುದ್ದೆಗೆ: ಕನಿಷ್ಠ ಮೆಟ್ರಿಕ್ಯುಲೇಷನ್ (10ನೇ ತರಗತಿ/SSLC) ಪಾಸಾಗಿರಬೇಕು.
2 ಕ್ರೀಡಾ ಅರ್ಹತೆ:
ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವುದು, ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದಿರುವುದು, ಅಂತರ-ವಿಶ್ವವಿದ್ಯಾಲಯ ಅಥವಾ ಖೇಲೋ ಇಂಡಿಯಾ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳು ಅರ್ಹರಾಗಿರುತ್ತಾರೆ. (ಕ್ರೀಡಾ ಪ್ರಮಾಣಪತ್ರವು 30/09/2024 ರಿಂದ 30/09/2026 ರ ನಡುವಿನದಾಗಿರಬೇಕು).
ವಯೋಮಿತಿ ಮತ್ತು ದೈಹಿಕ ಮಾನದಂಡಗಳು
ವಯೋಮಿತಿ: 01.08.2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು 18 ರಿಂದ 23 ವರ್ಷಗಳೊಳಗಿರಬೇಕು (ಮೀಸಲಾತಿ ವರ್ಗದವರಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ).
ದೈಹಿಕ ಮಾನದಂಡಗಳು (PST): ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 170 ಸೆಂ.ಮೀ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 157 ಸೆಂ.ಮೀ ಇರಬೇಕು.
ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಶುಲ್ಕ (Selection & Fee)
- ಆಯ್ಕೆ ಪ್ರಕ್ರಿಯೆ:ದಾಖಲಾತಿ ಪರಿಶೀಲನೆ (Documentation): ಶೈಕ್ಷಣಿಕ, ಜಾತಿ ಮತ್ತು ಕ್ರೀಡಾ ಪ್ರಮಾಣಪತ್ರಗಳ ನೈಜತೆ ಪರಿಶೀಲನೆ.
- ದೈಹಿಕ ಮಾನದಂಡ ಪರೀಕ್ಷೆ (PST): ಎತ್ತರ, ಎದೆ ಮತ್ತು ತೂಕದ ಅಳತೆ.
- ಸ್ಪೋರ್ಟ್ಸ್ ಟ್ರಯಲ್ ಟೆಸ್ಟ್ (Sports Trial Test): ಕ್ರೀಡಾ ಸಾಮರ್ಥ್ಯದ ಪರೀಕ್ಷೆ. (ಇದಕ್ಕೆ ಪ್ರತ್ಯೇಕ ಅಂಕಗಳಿರುವುದಿಲ್ಲ, ಕೇವಲ ಅರ್ಹತಾ ಸ್ವರೂಪ).
- ಮೆಡಿಕಲ್ ಎಕ್ಸಾಮಿನೇಷನ್ (DME & RME): ಕ್ರೀಡಾ ಪ್ರಮಾಣಪತ್ರಗಳಿಗೆ ನಿಗದಿಪಡಿಸಿದ ಅಂಕಗಳ ಆಧಾರದ ಮೇಲೆ ಸಿದ್ಧಪಡಿಸಿದ ಮೆರಿಟ್ ಲಿಸ್ಟ್ ಪ್ರಕಾರ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು.
ಇದನ್ನು ಓದಿ : RRB NTPC ನೇಮಕಾತಿ 2026: 12ನೇ ತರಗತಿ ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ 1,688 ಹುದ್ದೆಗಳ ಅವಕಾಶ!
ಅರ್ಜಿ ಶುಲ್ಕ:
- ಸಾಮಾನ್ಯ (UR), OBC ಮತ್ತು EWS ವರ್ಗದ ಪುರುಷ ಅಭ್ಯರ್ಥಿಗಳಿಗೆ: ರೂ. 100/-.
- ಮಹಿಳಾ ಅಭ್ಯರ್ಥಿಗಳು, SC/ST ಮತ್ತು ಮಾಜಿ ಸೈನಿಕರಿಗೆ (Ex-servicemen): ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ (Exempted).
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಕ್ರೀಡಾಪಟುಗಳು ಕೇವಲ ಆನ್ಲೈನ್ ಮೂಲಕ CRPF ನ ಅಧಿಕೃತ ವೆಬ್ಸೈಟ್ https://rect.crpf.gov.in ಗೆ ಭೇಟಿ ನೀಡಿ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಬೇರೆ ಯಾವುದೇ ಮಾದರಿಯ (ಆಫ್ಲೈನ್) ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ.
ರಕ್ಷಣಾ ಇಲಾಖೆಯ ಉದ್ಯೋಗ ಅಪ್ಡೇಟ್ಗಳು ಮತ್ತು ನಿಖರ ಮಾಹಿತಿಗಾಗಿ KPSCVaani.com ಅನ್ನು ನಿರಂತರವಾಗಿ ವೀಕ್ಷಿಸಿ.
- No. of posts
- 521
- Start Date
- 12 ಅಕ್ಟೋಬರ್ 2026
- End Date
- 11 ನವೆಂಬರ್ 2026
- Pay Scale
- 25500 - 81100 INR
- Employment Type
- FULL_TIME
- Organization
- CRPF (Website)
- Location
- CRPF Directorate General, Block No. 1, C.G.O. Complex, Lodhi Road,, New Delhi, DL, 110003

Comments