Canara Bank Recruitment 2026-27: ದೇಶಾದ್ಯಂತ 3,500 ಉದ್ಯೋಗಾವಕಾಶ; ಕರ್ನಾಟಕದಲ್ಲಿ 581 ಹುದ್ದೆಗಳು– ಕೂಡಲೇ ಅರ್ಜಿ ಸಲ್ಲಿಸಿ!
ಬ್ಯಾಂಕಿಂಗ್ ರಂಗದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಕೆನರಾ ಬ್ಯಾಂಕ್ ಭರ್ಜರಿ ಸಿಹಿ ಸುದ್ದಿ ನೀಡಿದೆ. ಅಪ್ರೆಂಟಿಸ್ ಕಾಯ್ದೆ 1961ರ ಅಡಿಯಲ್ಲಿ ದೇಶಾದ್ಯಂತ ಒಟ್ಟು 3,500 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ನೇಮಕಾತಿ ಅಧಿಸೂಚನೆ ಹೊರಬಿದ್ದಿದೆ.
ವಿಶೇಷವೆಂದರೆ ನಮ್ಮ ಕರ್ನಾಟಕದ ಯುವಕ-ಯುವತಿಯರಿಗಾಗಿಯೇ 581 ಹುದ್ದೆಗಳು ಕಾಯ್ದಿರಿಸಲ್ಪಟ್ಟಿವೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ 01 ಅಕ್ಟೋಬರ್ 2026 ರಿಂದ ಪ್ರಾರಂಭವಾಗಲಿದ್ದು, 17 ಅಕ್ಟೋಬರ್ 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ NATS ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಅರ್ಹತೆಯ ಹೆಚ್ಚಿನ ವಿವರಗಳು, ವಯೋಮಿತಿ ಸಡಿಲಿಕೆ, ಅರ್ಜಿ ಶುಲ್ಕ ಮತ್ತು ಆನ್‌ಲೈನ್ ಅರ್ಜಿ ಸಲ್ಲಿಸುವ ನೇರ ಲಿಂಕ್ ಸೇರಿದಂತೆ ಸಂಪೂರ್ಣ ಮಾಹಿತಿಗಾಗಿ KPSCVAANI.COM ವೆಬ್‌ಸೈಟ್‌ಗೆ ಭೇಟಿ ನೀಡಿ.
ಕೆನರಾ ಬ್ಯಾಂಕ್ ನೇಮಕಾತಿಯ ಪ್ರಮುಖ ವಿವರಗಳು:
- ಸಂಸ್ಥೆಯ ಹೆಸರು (Organization): ಕೆನರಾ ಬ್ಯಾಂಕ್ (Canara Bank)
- ಹುದ್ದೆಯ ಹೆಸರು (Post Name): ಗ್ರಾಜುಯೇಟ್ ಅಪ್ರೆಂಟಿಸ್ (Graduate Apprentice)
- ಒಟ್ಟು ಖಾಲಿ ಹುದ್ದೆಗಳು (Total Vacancies): 3,500 (ಕರ್ನಾಟಕದಲ್ಲಿ: 581)
- ಅಧಿಕೃತ ವೆಬ್‌ಸೈಟ್ (Official Website): canarabank.bank.in
ಪ್ರಮುಖ ದಿನಾಂಕಗಳು (Important Dates):
- ಆನ್‌ಲೈನ್ ನೋಂದಣಿ ಪ್ರಾರಂಭದ ದಿನಾಂಕ: 01 ಅಕ್ಟೋಬರ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ಅಕ್ಟೋಬರ್ 2026
ಇದನ್ನು ಓದಿ: ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2026: Block Coordinator ಹುದ್ದೆಗಳಿಗೆ ಅರ್ಜಿ ಆಹ್ವಾನ
ಹುದ್ದೆಗಳ ವಿವರ ಹಾಗೂ ಮೀಸಲಾತಿ (Vacancies in Karnataka): ಕೆನರಾ ಬ್ಯಾಂಕ್ ದೇಶಾದ್ಯಂತ ಒಟ್ಟು 3,500 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದ್ದು, ಕರ್ನಾಟಕದಲ್ಲಿ ಕನ್ನಡ ಸ್ಥಳೀಯ ಭಾಷೆ ತಿಳಿದಿರುವ ಅಭ್ಯರ್ಥಿಗಳಿಗೆ 581 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ:
- ಸಾಮಾನ್ಯ (UR): 235
- OBC: 156
- SC: 92
- ST: 40
- EWS: 58
- ಒಟ್ಟು ಹುದ್ದೆಗಳು : 581 ಹುದ್ದೆಗಳು
ಶೈಕ್ಷಣಿಕ ಅರ್ಹತೆ (Educational Qualification):
ಭಾರತ ಸರ್ಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduation Degree) ಪಡೆದಿರಬೇಕು.
ಅಭ್ಯರ್ಥಿಗಳು 01-01-2023 ರಿಂದ 01-09-2026 ರ ನಡುವೆ ತಮ್ಮ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ (Age Limit - As on 01.09.2026):
- ಕನಿಷ್ಠ ವಯಸ್ಸು: 20 ವರ್ಷಗಳು
- ಗರಿಷ್ಠ ವಯಸ್ಸು: 28 ವರ್ಷಗಳು (ಅಭ್ಯರ್ಥಿಗಳು 02.09.1998 ಮತ್ತು 01.09.2006 ರ ನಡುವೆ ಜನಿಸಿರಬೇಕು).
ವಯೋಮಿತಿ ಸಡಿಲಿಕೆ (Age Relaxation):
- SC / ST ಅಭ್ಯರ್ಥಿಗಳಿಗೆ: 5 ವರ್ಷಗಳು
- OBC (NCL) ಅಭ್ಯರ್ಥಿಗಳಿಗೆ: 3 ವರ್ಷಗಳು
- PwBD (ವಿಶೇಷ ಚೇತನ) ಅಭ್ಯರ್ಥಿಗಳಿಗೆ: 10 ವರ್ಷಗಳು
ಸ್ಟೈಪೆಂಡ್/ಮಾಸಿಕ ವೇತನ (Monthly Stipend): ಆಯ್ಕೆಯಾದ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹16,650/- ಸ್ಟೈಪೆಂಡ್ ನೀಡಲಾಗುತ್ತದೆ.
- ಕೆನರಾ ಬ್ಯಾಂಕ್‌ನಿಂದ ನೇರವಾಗಿ: ₹10,500/-
- ಕೇಂದ್ರ ಸರ್ಕಾರದ DBT ಮೂಲಕ: ₹6,150/-
ಆಯ್ಕೆ ಪ್ರಕ್ರಿಯೆ (Selection Process):
- ಅಂಕಗಳ ಆಧಾರದ ಮೇಲೆ (Merit List): 12 ನೇ ತರಗತಿ / ಡಿಪ್ಲೊಮಾ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ (Percentage) ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ. (ಕನಿಷ್ಠ 60% ಅಂಕ ಕಡ್ಡಾಯ, SC/ST/PwBD ಅಭ್ಯರ್ಥಿಗಳಿಗೆ 55%).
- ದಾಖಲೆಗಳ ಪರಿಶೀಲನೆ (Document Verification).
- ಸ್ಥಳೀಯ ಭಾಷಾ ಪರೀಕ್ಷೆ (Local Language Test): SSLC ಅಥವಾ 12 ನೇ ತರಗತಿಯಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ವ್ಯಾಸಂಗ ಮಾಡಿದ್ದಲ್ಲಿ ಭಾಷಾ ಪರೀಕ್ಷೆಯಿಂದ ವಿನಾಯಿತಿ ಇರುತ್ತದೆ.
ಅರ್ಜಿ ಶುಲ್ಕ (Application Fee:
- SC / ST / PwBD ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ (NIL)
- ಸಾಮಾನ್ಯ, OBC ಮತ್ತು EWS ಅಭ್ಯರ್ಥಿಗಳಿಗೆ: ₹500/-
ಅರ್ಜಿ ಸಲ್ಲಿಸುವುದು ಹೇಗೆ? (How to Apply Online):
- ಮೊದಲಿಗೆ ಸರ್ಕಾರದ NATS Portal (nats.education.gov.in) ನಲ್ಲಿ ನೋಂದಾಯಿಸಿಕೊಂಡು 100% ಪ್ರೊಫೈಲ್ ಪೂರ್ಣಗೊಳಿಸಿ, Enrollment ID ಪಡೆಯಬೇಕು.
- ನಂತರ ಕೆನರಾ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ canarabank.bank.in ಗೆ ಭೇಟಿ ನೀಡಿ, Careers → Recruitment ವಿಭಾಗಕ್ಕೆ ಹೋಗಿ.
- "Engagement of Graduate Apprentices in Canara Bank 2026-27" ಲಿಂಕ್ ಕ್ಲಿಕ್ ಮಾಡಿ ಆನ್‌ಲೈನ್ ಅರ್ಜಿ ಭರ್ತಿ ಮಾಡಿ.
- ಫೋಟೋ, ಸಹಿ, ಎಡಗೈ ಹೆಬ್ಬೆರಳ ಗುರುತು ಮತ್ತು ಸ್ವಯಂ ಘೋಷಣಾಪತ್ರವನ್ನು ನಿಯಮಾವಳಿಯಂತೆ ಅಪ್‌ಲೋಡ್ ಮಾಡಿ, ಅರ್ಜಿ ಶುಲ್ಕ ಪಾವತಿಸಿ.
- No. of posts
- 3500
- Start Date
- 1 ಅಕ್ಟೋಬರ್ 2026
- End Date
- 17 ಅಕ್ಟೋಬರ್ 2026
- Employment Type
- FULL_TIME
- Organization
- canara bank (Website)
- Location
- Nagarathpet, Bengaluru, KA, 560002
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.

