ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ | ಕೂಡಲೇ ಅರ್ಜಿ ಸಲ್ಲಿಸಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ | ಕೂಡಲೇ ಅರ್ಜಿ ಸಲ್ಲಿಸಿ
Published by Surekha Halli
24 ಫೆಬ್ರವರಿ 2021 Others
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹಿರಿಯ ವೈದ್ಯಾಧಿಕಾರಿ ತಜ್ಞರು ಹಾಗೂ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
* ಹುದ್ದೆಗಳ ವಿವರ :
- ಹಿರಿಯ ವೈದ್ಯಾಧಿಕಾರಿ / ತಜ್ಞರು (ಪ್ರಸೂತಿ ಮತ್ತು ಸ್ತ್ರೀರೋಗ) - 18
- ಹಿರಿಯ ವೈದ್ಯಾಧಿಕಾರಿ / ತಜ್ಞರು (ಮಕ್ಕಳ ತಜ್ಞರು) -19
- ಹಿರಿಯ ವೈದ್ಯಾಧಿಕಾರಿ / ತಜ್ಞರು (ಅರವಳಿಕೆ) - 13
- ಹಿರಿಯ ವೈದ್ಯಾಧಿಕಾರಿ /ತಜ್ಞರು (ಜನರಲ್ ಮೆಡಿಸಿನ್) - 70
ಪ್ರಮುಖ ದಿನಾಂಕಗಳು :
- ಅರ್ಜಿಗಳನ್ನು ಸಲ್ಲಿಸಲು ಪ್ರಾರಂಭ ದಿನಾಂಕ : 23-02-2021
- ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 24-03-2021
- ಶುಲ್ಕ ಪಾವತಿಸಲು ಕೊನೆಯ ದಿನಾಂಕ : 25-03-2021
Job Overview
No. of posts
120
Start Date
23 ಫೆಬ್ರುವರಿ 2021
End Date
24 ಮಾರ್ಚ್ 2021
Last Payment
25 ಮಾರ್ಚ್ 2021
Employment Type
FULL_TIME
Organization
KPSC Vaani (Website)
Location
ಬೆಂಗಳೂರು ನಗರ, KA,
Qualification:
- ಹುದ್ದೆಗಳಿಗನುಗುಣವಾಗಿ ಭಾರತದಲ್ಲಿ ಕಾನೂನಿನಿಂದ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯ ಅಥವಾ ವೈದ್ಯಕೀಯ ಮಂಡಳಿಯಿಂದ ಗುರುತಿಸಲ್ಪಟ್ಟ  ಗೈನೆಕಾಲಜಿ / ಪೀಡಿಯಾಟ್ರಿಕ್ಸ್ / ಅರಿವಳಿಕೆಯಲ್ಲಿ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಪದವಿಯನ್ನು ಹೊಂದಿರಬೇಕು.
Fee:
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ - 1000/-
- ಪ್ರವರ್ಗ- 2ಎ 2ಬಿ 3ಎ 3ಬಿ ವರ್ಗದ ಅಭ್ಯರ್ಥಿಗಳಿಗೆ ರೂ - 500/-
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ -100/- 
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
Age Limit:
* ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಈ ಕೆಳಕಂಡ ವಯೋಮಿತಿಯನ್ನು ಹೊಂದಿರಬೇಕು.
- ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ 26 ವರ್ಷ ಗರಿಷ್ಟ 42 ವರ್ಷ ಹೊಂದಿರಬೇಕು.
- ಪ್ರವರ್ಗ- 2ಎ 2ಬಿ 3ಎ 3ಬಿ ವರ್ಗದ ಅಭ್ಯರ್ಥಿಗಳು ಕನಿಷ್ಠ 26 ವರ್ಷ ಗರಿಷ್ಟ 45 ವರ್ಷ ಹೊಂದಿರಬೇಕು.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ವರ್ಗದ ಅಭ್ಯರ್ಥಿಗಳು ಕನಿಷ್ಠ 26 ವರ್ಷ ಗರಿಷ್ಟ 47 ವರ್ಷ ಹೊಂದಿರಬೇಕು.

* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 
To Download Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.