ಗಡಿ ರಸ್ತೆ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಗಡಿ ರಸ್ತೆ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by Bhagya R K
24 ಜನವರಿ 2025 Others

ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) 2025 ನೇ ಸಾಲಿನ ನೇಮಕಾತಿಯನ್ನು ಪ್ರಕಟಿಸಿದ್ದು, MSW ಕುಕ್‌, ವೈಟರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿಯುಳ್ಳ ಹಾಗೂ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನದಿಂದ ಓದಿ, ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರಗಳು : 411
- MSW ಕುಕ್ : 153 ಹುದ್ದೆಗಳು
- MSW ಮೇಸನ್ : 172 ಹುದ್ದೆಗಳು
- MSW ಕಮ್ಮಾರ : 75 ಹುದ್ದೆಗಳು
- MSW ಮೆಸ್ ವೇಟರ್ : 11 ಹುದ್ದೆಗಳು

ವಿದ್ಯಾರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ ಹಾಗೂ ITI (Industrial Training Institute) ಪೂರ್ಣಗೊಳಿಸಿರುವಿರಬೇಕು.

ವಯೋಮಿತಿ :
- ಕನಿಷ್ಠ ವಯೋಮಿತಿ: 18 ವರ್ಷ
- ಗರಿಷ್ಠ ವಯೋಮಿತಿ: 25 ವರ್ಷ
(ಅಭ್ಯರ್ಥಿಗಳು 25-02-2025 ರಂತೆ ಈ ವಯೋಮಿತಿಯೊಳಗೆ ಇರಬೇಕು)

ವಯೋಮಿತಿ ಸಡಿಲಿಕೆ :
- OBC ಅಭ್ಯರ್ಥಿಗಳಿಗೆ: 3 ವರ್ಷ
- SC/ST ಅಭ್ಯರ್ಥಿಗಳಿಗೆ: 5 ವರ್ಷ
- PWBD ಅಭ್ಯರ್ಥಿಗಳಿಗೆ: 10 ವರ್ಷ

ಅರ್ಜಿಶುಲ್ಕ :
- ಸಾಮಾನ್ಯ, OBC, EWS ಅಭ್ಯರ್ಥಿಗಳಿಗೆ : ₹50 ಶುಲ್ಕ ಪಾವತಿಸಬೇಕು.
- SC, ST, PWD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.

ಪಾವತಿ ವಿಧಾನ :
SBI ಕಲೆಕ್ಟ್ ಮೂಲಕ ಪಾವತಿ ಮಾಡಬಹುದು.

ವೇತನ ಶ್ರೇಣಿ :
ನಿಗದಿಪಡಿಸಲಾದ ಮಾಸಿಕ ವೇತನವನ್ನು ಆಯ್ಕೆಗೊಂಡ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.

ಆಯ್ಕೆ ವಿಧಾನ :
- ಲಿಖಿತ ಪರೀಕ್ಷೆ
- ದೈಹಿಕ ದಕ್ಷತೆಯ ಪರೀಕ್ಷೆ
- ಪ್ರಾಯೋಗಿಕ ಪರೀಕ್ಷೆ
- ಪ್ರಾಥಮಿಕ ವೈದ್ಯಕೀಯ ಪರೀಕ್ಷೆ
- ಸಂದರ್ಶನ

ಅರ್ಜಿಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಮತ್ತು ಅಗತ್ಯ ದಾಖಲೆಗಳನ್ನು GREF Centre, Dighi Camp, Pune-411015 ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಕಳುಹಿಸಬೇಕು. 

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು :
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 11-01-2025
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-02-2025

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಅಧಿಸೂಚನೆಯನ್ನು ಪರಿಶೀಲಿಸಿ.

Job Overview
No. of posts
411
Start Date
24 ಜನವರಿ 2025
End Date
24 ಫೆಬ್ರುವರಿ 2025
Employment Type
FULL_TIME
Organization
KPSC Vaani (Website)
Location
KA,
To Download Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.