ಬಾಗಲಕೋಟ ಜಿಲ್ಲೆಯ ಖಾಸಗಿ ಸಹಕಾರಿ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ

Tags: Degree
Published by: Bhagya R K
|
ಬಾಗಲಕೋಟ ಜಿಲ್ಲೆಯ ಖಾಸಗಿ ಸಹಕಾರಿ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ

ಬಾಗಲಕೋಟೆ ಜಿಲ್ಲೆಯ ಬೀಳಗಿಯ ಪ್ರಮುಖ ಖಾಸಗಿ ಸಹಕಾರಿ ಬ್ಯಾಂಕ್ ಆಗಿರುವ ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ, ಬೀಳಗಿ ಸಂಸ್ಥೆಯು ಜಮಖಂಡಿ, ಮುದೋಳ, ಬನಹಟ್ಟಿ, ಗುಳೇದಗುಡ್ಡ ಮತ್ತು ಇಲಕಲ್ಲ ನಲ್ಲಿತನ್ನ ಶಾಖೆಗಳನ್ನು ಹೊಂದಿದ್ದು, ಈ ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ :
ಹಿರಿಯ ಸಹಾಯಕರು - 10
ಸಿಪಾಯಿ - 05 

ಅರ್ಹತೆ ಮತ್ತು ಬೇಡಿಕೆಗಳು :
ಅಭ್ಯರ್ಥಿಗಳು ತಮ್ಮ ಸ್ವಂತ ಹಸ್ತಾಕ್ಷರದೊಂದಿಗೆ ಅರ್ಜಿಯನ್ನು ಭರ್ತಿ ಮಾಡಬೇಕು.

 ಅಭ್ಯರ್ಥಿಯ ವಯೋಮಿತಿ :

- ಸಾಮಾನ್ಯ ಅಭ್ಯರ್ಥಿಗಳಿಗೆ :  35 ವರ್ಷ
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ :  38 ವರ್ಷ
- ಇತರ ಹಿಂದುಳಿದ ವರ್ಗದವರಿಗೆ : 40 ವರ್ಷ ಮೀರಿರಬಾರದು.

ಶೈಕ್ಷಣಿಕ ಅರ್ಹತೆ :
 - ಹಿರಿಯ ಸಹಾಯಕರು : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (ಅರ್ಹತೆಯಲ್ಲಿ ಕನಿಷ್ಠ 60%) ಪೂರೈಸಿದವರು ಅರ್ಜಿಸಲ್ಲಿಸಬಹುದು.
- ಸಿಪಾಯಿ : ಕನಿಷ್ಠ 10ನೇ ತರಗತಿ ಪಾಸ್ ಆಗಿ ಅದರಲ್ಲಿ 50% ಹಾಗೂ ಮೇಲ್ಪಟ್ಟ ಅಂಕ ಪಡೆದ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ :

- ಅರ್ಜಿದಾರರು ತಮ್ಮ ಅರ್ಜಿಯನ್ನು 25/02/2025 ರೊಳಗೆ ಸಲ್ಲಿಸಬೇಕು.
- ಅಭ್ಯರ್ಥಿಗಳು ತಮ್ಮ ದಾಖಲೆಗಳ ನಕಲನ್ನು ಸೇರಿಸಿ ಸಲ್ಲಿಸಬೇಕು.
ಅರ್ಜಿ ಶುಲ್ಕ : ರೂ. 500/- (ನಿಗದಿತ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು).

 ಆಯ್ಕೆ ಪ್ರಕ್ರಿಯೆ :
- ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
- ಸಂದರ್ಶನದ ದಿನಾಂಕವನ್ನು ಅರ್ಜಿದಾರರಿಗೆ ಪ್ರತ್ಯೇಕವಾಗಿ ತಿಳಿಸಲಾಗುವುದು.

ಅರ್ಜಿ ಸಲ್ಲಿಕೆ:
- ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು 2025ರ ಫೆಬ್ರವರಿ 25ರ ಒಳಗೆ ಸಲ್ಲಿಸಬೇಕು.

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಿ ಈ ಅವಕಾಶವನ್ನು ಪ್ರಯೋಜನಪಡಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ :
- ಮೊಬೈಲ್ : 9071430302 / 9513431104
- ಇಮೇಲ್ : svspsnbilagi@gmail.com

Job Overview
End Date
25 ಫೆಬ್ರುವರಿ 2025
Employment Type
FULL_TIME
Organization
KPSC Vaani (Website)
Location
KA,
To Download Official Notification
Related Tags: Degree
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.