ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by Bhagya R K
06 ಮೇ 2025 Others

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ತನ್ನ ನೂತನ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಅಧಿಕಾರಿ ಮತ್ತು ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳ ಸಂಖ್ಯೆ 20 ಆಗಿದ್ದು, ಉದ್ಯೋಗ ಸ್ಥಳವು ಮೈಸೂರು ಮತ್ತು ಬೆಂಗಳೂರು ಎಂದು ನಿಗದಿಯಾಗಿದೆ.

ಹುದ್ದೆಯ ವಿವರಗಳು :
ಹುದ್ದೆಯ ಹೆಸರು : ಅಧಿಕಾರಿ, ವ್ಯವಸ್ಥಾಪಕ
ಒಟ್ಟು ಹುದ್ದೆಗಳು : 20
ಉದ್ಯೋಗ ಸ್ಥಳ : ಮೈಸೂರು, ಬೆಂಗಳೂರು – ಕರ್ನಾಟಕ

ವಿದ್ಯಾರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಗಳಿಂದ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, GDM, MBA, MSW, MA ಮುಂತಾದ ವಿದ್ಯಾರ್ಹತೆಗಳನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ ಹಾಗೂ ಸಡಿಲಿಕೆ :
ವಯೋಮಿತಿಯ ವಿವರವನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ. ಸರ್ಕಾರದ ನಿಯಮಾನುಸಾರ ಕೆಳಗಿನ ಸಡಿಲಿಕೆಗಳು ಲಭ್ಯವಿದೆ:
ಒಬಿಸಿ (NCL): 03 ವರ್ಷ
SC/ST: 05 ವರ್ಷ
ಪಿಡಬ್ಲ್ಯೂಡಿ: 10 ವರ್ಷ

ಅರ್ಜಿಶುಲ್ಕ :
SC/ST/PWD ಅಭ್ಯರ್ಥಿಗಳು : ಶುಲ್ಕವಿಲ್ಲ
ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ : ₹500/- (ಆನ್‌ಲೈನ್ ಪಾವತಿ)

ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ ಮಾಸಿಕ ವೇತನ ₹40,000 ರಿಂದ ₹2,00,000 ವರೆಗೆ ನಿಗದಿಯಾಗಿರುತ್ತದೆ.

ಆಯ್ಕೆ ವಿಧಾನ :
ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ನಡೆಯಲಿದೆ.

ಅರ್ಜಿಸುವ ವಿಧಾನ :
ಆಸಕ್ತರು ಅಧಿಕೃತ ವೆಬ್‌ಸೈಟ್ [https://www.bemlindia.in/](https://www.bemlindia.in/) ಗೆ ಭೇಟಿ ನೀಡಿ, ಅಧಿಸೂಚನೆಯನ್ನು ಓದಿ, ಅರ್ಹತೆ ಪರಿಶೀಲಿಸಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಆರ್ಜಿ ಸಲ್ಲಿಸಲು ವಿಳಾಸ (ಆಫ್‌ಲೈನ್ ಮೂಲಕ) :
Senior Manager (Corporate Recruitment), Recruitment Cell, BEML Soudha No 23/1, 4th Main, S R Nagar, Bangalore-560027.

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 30-04-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-05-2025

ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ವಿಳಾಸ ಪರಿಶೀಲಿಸಿ. ಈ ಉತ್ತಮ ಅವಕಾಶವನ್ನು ತಪ್ಪಿಸಿಕೊಳ್ಳದೆ ಕೂಡಲೇ ಅರ್ಜಿ ಸಲ್ಲಿಸಿ.

Job Overview
End Date
14 ಮೇ 2025
Employment Type
FULL_TIME
Organization
KPSC Vaani (Website)
Location
KA,
To Download Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.