ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
ಬೈಲಹೊಂಗಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಬೈಲಹೊಂಗಲವು ತನ್ನ ಶಾಖೆಗಳಲ್ಲಿ ಖಾಲಿ ಇರುವ ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ವಿವರ :
ಕಿರಿಯ ಸಹಾಯಕರ ಹುದ್ದೆಗಳು : 06
- ವಿದ್ಯಾರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ದ್ವಿತೀಯ ಪಿ.ಯು.ಸಿ / ಬಿ.ಕಾಂ / ಬಿ.ಸಿ.ಎ / ಎಮ್.ಸಿ.ಎ / ಬಿ.ಇ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
- ಕೌಶಲ್ಯ: ಕಂಪ್ಯೂಟರ್, ಬ್ಯಾಂಕಿಂಗ್, ಲೆಕ್ಕಶಾಸ್ತ್ರ, ವಹಿವಾಟು ಮತ್ತು ಮಾರ್ಕೆಟಿಂಗ್ ಪರಿಚಯ, ಕನ್ನಡ ಮತ್ತು ಇಂಗ್ಲಿಷ್ ಓದಲು, ಬರೆಯಲು, ಮಾತನಾಡಲು ಬರಬೇಕು.
- ವೇತನ ಶ್ರೇಣಿ: ₹27,650/- ರೂ ಗಳಿಂದ ₹52,650/- ರೂ ಗಳ ವರೆಗೆ
ಕಛೇರಿ ಸಹಾಯಕರ (ಸಿಪಾಯಿ) ಹುದ್ದೆಗಳು - 02
- ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ/ಹತ್ತನೇ ತರಗತಿ ಉತ್ತೀರ್ಣ.
- ಕೌಶಲ್ಯ: ಕನ್ನಡ ಮತ್ತು ಇಂಗ್ಲಿಷ್ ಓದಲು, ಬರೆಯಲು, ತಿಳಿದುಕೊಳ್ಳಲು ಮತ್ತು ಮಾತನಾಡಲು ಬರಬೇಕು.
- ವೇತನ ಶ್ರೇಣಿ: 19,950/- ರೂ ಗಳಿಂದ 37,900/- ರೂ ಗಳ ವರೆಗೆ
ಅರ್ಹತೆ :
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಟ 18 ವರ್ಷಗಳಾಗಿರಬೇಕು.
ವಯೋಮಿತಿ:
- ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ - 1 :ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ
- ಸಾಮಾನ್ಯ ವರ್ಗದ ಅಭ್ಯರ್ಥಿಗಳು: 18 ರಿಂದ 35 ವರ್ಷ
- ಹಿಂದುಳಿದ ವರ್ಗದ ಅಭ್ಯರ್ಥಿಗಳು: 18 ರಿಂದ 38 ವರ್ಷ
ಅರ್ಜಿ ಶುಲ್ಕ :
- ಕಿರಿಯ ಸಹಾಯಕ ಹುದ್ದೆಗೆ : ₹1000/-
- ಸಿಪಾಯಿ ಹುದ್ದೆಗೆ : ₹500/- ಅರ್ಜಿ ಶುಲ್ಕ
- ಅರ್ಜಿ ಶುಲ್ಕವನ್ನು ಡಿ.ಡಿ/ಪೊಸ್ಟಲ್ ಆರ್ಡರನ್ನು"ದಿ ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕ್ ಲಿ . ಬೈಲಹೊಂಗಲ ಈ ಹೆಸರಿನಲ್ಲಿ ಪಾವತಿಯಾಗುವಂತೆ ನೀಡಬೇಕೆ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ 50% ರಿಯಾಯತಿ ಇರಲಿದೆ.
ಆಯ್ಕೆ ಪ್ರಕ್ರಿಯೆ: ಲೇಖಿತ ಪರೀಕ್ಷೆ ಮತ್ತು ಮೌಖಿಕ ಸಂದರ್ಶನ
ಅರ್ಜಿ ಸಲ್ಲಿಕೆ ವಿಳಾಸ: ಬೈಲಹೊಂಗಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಬೈಲಹೊಂಗಲ
ಅರ್ಜಿ ಸಲ್ಲಿಕೆಗೆ ಮಹತ್ವದ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 31-01-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-02-2025
ಈ ಉದ್ಯೋಗಾವಕಾಶವನ್ನು ಬಳಸಿಕೊಂಡು ಅರ್ಹ ಅಭ್ಯರ್ಥಿಗಳು ತಮ್ಮ ಭವಿಷ್ಯ ನಿರ್ಮಿಸಿಕೊಳ್ಳಬಹುದು.
- End Date
- 15 ಫೆಬ್ರುವರಿ 2025
- Employment Type
- FULL_TIME
- Organization
- KPSC Vaani (Website)
- Location
- KA,
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.