Others 25 ಸೆಪ್ಟೆಂಬರ್ 2025 1 year ago
Published by Bhagya R K

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಸಂಗ್ರಹಾಲಯ (VITM) ನೇಮಕಾತಿ 2025: 12 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಸಂಗ್ರಹಾಲಯ (VITM) ನೇಮಕಾತಿ 2025: 12 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ನಾಲಾಜಿಕಲ್ ಮ್ಯೂಸಿಯಂ (VITM) ಸಂಸ್ಥೆ ತನ್ನ 2025 ರ ಅಧಿಸೂಚನೆಯ ಮೂಲಕ ಆಫೀಸ್ ಅಸಿಸ್ಟೆಂಟ್ ಹಾಗೂ ಟೆಕ್ನಿಷಿಯನ್ ಹುದ್ದೆಗಳ ಒಟ್ಟು 12 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಕಾಲಿಕಟ್ (ಕೇರಳ), ತಿರುಪತಿ (ಆಂಧ್ರ ಪ್ರದೇಶ), ಕಲಬುರಗಿ ಹಾಗೂ ಬೆಂಗಳೂರು (ಕರ್ನಾಟಕ) ಶಾಖೆಗಳಿಗೆ ಸಂಬಂಧಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2025ರ ಅಕ್ಟೋಬರ್ 20ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ : 
ಎಕ್ಸಿಬಿಷನ್ ಅಸಿಸ್ಟೆಂಟ್ A : 01
ಟೆಕ್ನಿಷಿಯನ್ A : 06
ಆಫೀಸ್ ಅಸಿಸ್ಟೆಂಟ್ (ಗ್ರೇಡ್-III) : 05

ವಯೋಮಿತಿ :
ಎಕ್ಸಿಬಿಷನ್ ಅಸಿಸ್ಟೆಂಟ್ A : ಗರಿಷ್ಠ 35 ವರ್ಷ
ಟೆಕ್ನಿಷಿಯನ್ A : ನಿಯಮಾನುಸಾರ
ಆಫೀಸ್ ಅಸಿಸ್ಟೆಂಟ್ (ಗ್ರೇಡ್-III) : ಗರಿಷ್ಠ 25 ವರ್ಷ

ವೇತನ ಶ್ರೇಣಿ :
ಎಕ್ಸಿಬಿಷನ್ ಅಸಿಸ್ಟೆಂಟ್ A : ₹59,600/-
ಟೆಕ್ನಿಷಿಯನ್ A : ₹38,908/-
ಆಫೀಸ್ ಅಸಿಸ್ಟೆಂಟ್ (ಗ್ರೇಡ್-III) : ₹36,220 – ₹38,908/-

ಶೈಕ್ಷಣಿಕ ಅರ್ಹತೆಗಳು : 
- ಎಕ್ಸಿಬಿಷನ್ ಅಸಿಸ್ಟೆಂಟ್ A – ಪದವಿ
- ಟೆಕ್ನಿಷಿಯನ್ A – 10ನೇ ತರಗತಿ, ITI
- ಆಫೀಸ್ ಅಸಿಸ್ಟೆಂಟ್ (ಗ್ರೇಡ್-III) – 12ನೇ ತರಗತಿ

ಅರ್ಜಿದಾರರ ಆಯ್ಕೆ ವಿಧಾನ : 
- ಲಿಖಿತ/ಕೌಶಲ್ಯ ಪರೀಕ್ಷೆ
- ಸಂದರ್ಶನ

ಅರ್ಜಿಶುಲ್ಕ : 
- ಸಾಮಾನ್ಯ/OBC ಅಭ್ಯರ್ಥಿಗಳು: ₹885/-
- SC/ST/PWD/ಹಿಂದಿನ ಸೈನಿಕರು: ಶುಲ್ಕವಿಲ್ಲ

ಅರ್ಜಿ ಸಲ್ಲಿಸುವ ವಿಧಾನ :
- VITM ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
- ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡುವ ಮುನ್ನ ಇಮೇಲ್ ಐಡಿ, ಮೊಬೈಲ್ ನಂಬರ್ ಹಾಗೂ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ.
- ಅರ್ಜಿಯಲ್ಲಿ ಅಗತ್ಯ ಮಾಹಿತಿಗಳನ್ನು ನಮೂದಿಸಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಶುಲ್ಕ ಪಾವತಿಸಿ (ಅಗತ್ಯವಿದ್ದರೆ).
- ಅರ್ಜಿಯನ್ನು ಸಲ್ಲಿಸಿ ಮತ್ತು ಅರ್ಜಿಯ ಸಂಖ್ಯೆ/ರಸೀದಿ ಸಂಖ್ಯೆ ಕಾಪಿ ಮಾಡಿಕೊಂಡಿರಲಿ.

ಪ್ರಮುಖ ದಿನಾಂಕಗಳು : 
- ಅರ್ಜಿ ಪ್ರಾರಂಭ ದಿನಾಂಕ: 20-ಸೆಪ್ಟೆಂಬರ್-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-ಅಕ್ಟೋಬರ್-2025

👉 ಸರ್ಕಾರಿ ಹುದ್ದೆಗಾಗಿ ಕಾಯುತ್ತಿರುವವರಿಗೆ ಇದು ಉತ್ತಮ ಅವಕಾಶ. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು VITM ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಎಕ್ಸಿಬಿಷನ್ ಅಸಿಸ್ಟೆಂಟ್ A ಹುದ್ದೆಗೆ ಅರ್ಜಿ ಸಲ್ಲಿಸಲು ಎಲ್ಲಿ ಕ್ಲಿಕ್ ಮಾಡಿ.

ಟೆಕ್ನಿಷಿಯನ್ A ಹುದ್ದೆಗೆ ಅರ್ಜಿ ಸಲ್ಲಿಸಲು ಎಲ್ಲಿ ಕ್ಲಿಕ್ ಮಾಡಿ.

ಆಫೀಸ್ ಅಸಿಸ್ಟೆಂಟ್ (ಗ್ರೇಡ್-III) ಹುದ್ದೆಗೆ ಅರ್ಜಿ ಸಲ್ಲಿಸಲು ಎಲ್ಲಿ ಕ್ಲಿಕ್ ಮಾಡಿ.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.