ಈ ನೇಮಕಾತಿಯಲ್ಲಿ ಕಂಪನಿ ಸೆಕ್ರೆಟರಿ ಸೇರಿದಂತೆ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಹುದ್ದೆಗಳಿಗೆ ಅನುಗುಣವಾಗಿ ಕಾನೂನು ಪದವಿ, ಐಸಿಎಸ್‌ಐ ಸದಸ್ಯತ್ವ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ನಿಗದಿತ ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ನಿಗಮದ ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಗಳ ಸಂಖ್ಯೆ, ವಯೋಮಿತಿ ಸಡಿಲಿಕೆ, ಅರ್ಜಿ ಶುಲ್ಕ ಹಾಗೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂತಹ ಸಂಪೂರ್ಣ ಪ್ರಮುಖ ಮಾಹಿತಿಗಳ ವಿವರಗಳಿಗಾಗಿ ಮತ್ತು ಅಧಿಕೃತ ನೋಟಿಫಿಕೇಶನ್ ಲಿಂಕ್‌ಗಾಗಿ ಈಗಲೇ ನಮ್ಮ ವೆಬ್‌ಸೈಟ್ KPSCVAANI.COM ಗೆ ಭೇಟಿ ನೀಡಿ.
ಹುದ್ದೆಯ ವಿವರಗಳು (VJNL Recruitment 2026 Details):
- ನೇಮಕಾತಿ ಸಂಸ್ಥೆ: ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (VJNL - Government of Karnataka)
- ಹುದ್ದೆಯ ಹೆಸರು: ಕಂಪನಿ ಕಾರ್ಯದರ್ಶಿ ಗ್ರೇಡ್-11 (Company Secretary Grade-11) ಅಥವಾ ಸಹಾಯಕ ಕಂಪನಿ ಕಾರ್ಯದರ್ಶಿ (Assistant Company Secretary).
- ಉದ್ಯೋಗ ಸ್ಥಳ: ಬೆಂಗಳೂರು (Bengaluru)
- ಅರ್ಜಿ ಸಲ್ಲಿಸುವ ವಿಧಾನ: ಆಫ್‌ಲೈನ್ (ನೋಂದಾಯಿತ ಅಂಚೆ - Registered Post ಮೂಲಕ)
- ಅಧಿಸೂಚನೆ ಪ್ರಕಟವಾದ ದಿನಾಂಕ: 17.07.2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14.08.2026 (ಸಂಜೆ 5.30 ರ ಒಳಗಾಗಿ)
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ನಿಗಮದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ನೋಂದಾಯಿತ ಕಛೇರಿಗೆ ನೋಂದಾಯಿತ ಅಂಚೆ (Registered Post) ಮೂಲಕ ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ತಲುಪಿಸಬೇಕಾಗಿ ವಿನಂತಿ.
ಅಧಿಕೃತ ವೆಬ್‌ಸೈಟ್: https://vjnl.karnataka.gov.in
ಸಂಪರ್ಕ ಸಂಖ್ಯೆ: 080-22256688, 080-22289966
ಕಛೇರಿ ವಿಳಾಸ:
ನಂ.148, ನೆಲ ಮಹಡಿ, ಎಂಬಸ್ಸಿ ಸ್ಟೇರ್,
ಇನ್‌ಫಾಂಟ್ರಿ ರಸ್ತೆ,
ಬೆಂಗಳೂರು-560001.
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ


Comments