ರೈಲ್ವೆ ಇಲಾಖೆಯ RRC ಗ್ರೂಪ್ D ಹುದ್ದೆಗಳಿಗೆ ಮತ್ತೊಮ್ಮೆ ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಲು ಅವಕಾಶ

ರೈಲ್ವೆ ಇಲಾಖೆಯ RRC ಗ್ರೂಪ್ D ಹುದ್ದೆಗಳಿಗೆ ಮತ್ತೊಮ್ಮೆ ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಲು ಅವಕಾಶ
17 ಆಗಸ್ಟ್ 2019 Indian Railway
ಭಾರತೀಯ ರೈಲ್ವೆ ಇಲಾಖೆಯು ಖಾಲಿ ಇರುವ ಸುಮಾರು ಒಂದು ಲಕ್ಷಕ್ಕೂ ಅಧಿಕ ಗ್ರೂಪ್-ಡಿ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 23-02-2019 ರಂದು ಅಧಿಸೂಚನೆಯನ್ನು ಪ್ರಕಟಿಸಿತ್ತು ಹಾಗೂ ಅರ್ಜಿ ಸಲ್ಲಿಕೆಗೆ ದಿನಾಂಕ 12-03-2019 ರಿಂದ ಆರಂಭವಾಗಿ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 12-04-2019 ರ ವರೆಗೆ ಅವಕಾಶ ನೀಡಲಾಗಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಲು ರೈಲ್ವೆ ಇಲಾಖೆಯು ಕೆಲ ದಿನಗಳ ಹಿಂದಷ್ಟೇ ಅರ್ಜಿ ಸ್ಥಿತಿ ತಿಳಿಯಲು ಅವಕಾಶ ನೀಡಲಾಗಿತ್ತು. ಇಲ್ಲಿ ಹಾಗೂ ಅಲ್ಲಿ ತಪ್ಪು ಮಾಹಿತಿ ನೀಡಿದಂತಹ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸಿ ಅಂತಹ ಅಭ್ಯರ್ಥಿಗಳಿಗೆ ಎಸ್ಎಂಎಸ್ ಮೂಲಕ ಅರ್ಜಿ ಸ್ಥಿತಿಯನ್ನು ತಿಳಿಸಲಾಗಿತ್ತು. ಪ್ರಸ್ತುತ ರೈಲ್ವೆ ಇಲಾಖೆಯು ಅರ್ಜಿ ತಿರಸ್ಕೃತಗೊಂಡ ಅಭ್ಯರ್ಥಿಗಳಿಗೆ ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಲು ಮತ್ತೊಂದು ಅವಕಾಶ ನೀಡಲಾಗಿದೆ ಈ ಅವಕಾಶವು ಕೇವಲ ಅಭ್ಯರ್ಥಿಗಳ ವಿವರದಲ್ಲಿ ಫೋಟೊ ಅಥವಾ ಸಹಿಯಿಂದ ತಿರಸ್ಕೃತಗೊಂಡಲ್ಲಿ ಮಾತ್ರ ಅನ್ವಯಿಸುತ್ತದೆ ಇತರೆ ಕಾರಣಗಳಿಂದ ಅರ್ಜಿ ತಿರಸ್ಕೃತಗೊಂಡಲ್ಲಿ ಅಭ್ಯರ್ಥಿಗಳಿಗೆ ಮರು ಅವಕಾಶ ಇರುವುದಿಲ್ಲ. ಫೋಟೋ ಅಥವಾ ಸಹಿಯ ಕಾರಣದಿಂದ ಅರ್ಜಿ ತಿರಸ್ಕೃತಗೊಂಡ ಅಭ್ಯರ್ಥಿಗಳಿಗೆ ಮತ್ತೊಮ್ಮೆ ತಮ್ಮ ಭಾವಚಿತ್ರ ಹಾಗೂ ಸಹಿಯನ್ನು ಅಪ್ಲೋಡ್ ಮಾಡಲು ರೈಲ್ವೆ ಇಲಾಖೆ ಅವಕಾಶ ಒದಗಿಸಿಕೊಟ್ಟಿದೆ ಈ ಅವಕಾಶವು ದಿನಾಂಕ 17-08-2019 ರಿಂದ ಆರಂಭವಾಗಿ ದಿನಾಂಕ 23-08-2019 ರವರೆಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಈ ನಿಗದಿಪಡಿಸಿದ ದಿನಾಂಕದೊಳಗಾಗಿ ತಮ್ಮ ಭಾವಚಿತ್ರ ಹಾಗೂ ಸಹಿಯನ್ನು ಪರಿಶೀಲಿಸಿ ಮತ್ತೊಮ್ಮೆ ಅಪ್ಲೋಡ್ ಮಾಡಿ ಪರೀಕ್ಷೆಗೆ ಅರ್ಹತೆ ಪಡೆಯಬೇಕು.
ನೀವು ಪೊಲೀಸ್ ಕಾನ್ಸಟೇಬಲ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.