ರೈಲ್ವೆ ಇಂಡಿಯಾ ಟೆಕ್ನಿಕಲ್ & ಎಕನಾಮಿಕ್ಸ್ ಸರ್ವಿಸ್ (RITES) ಸಂಸ್ಥೆಯು 2025ನೇ ಸಾಲಿನ ನೇಮಕಾತಿ ಅಧಿಸೂಚನೆಯು ಬಿಡುಗಡೆ ಮಾಡಿದ್ದು, ಬೆಂಗಳೂರು ಶಾಖೆಯಲ್ಲಿ ಮೂರು (03) ವೈಯಕ್ತಿಕ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸರ್ಕಾರದ ಉದ್ಯೋಗಾವಕಾಶ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 18 ಮೇ 2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಹುದ್ದೆಯ ವಿವರಗಳು :
- ಸಂಸ್ಥೆ ಹೆಸರು : Rail India Technical and Economic Services (RITES)
- ಒಟ್ಟು ಹುದ್ದೆಗಳ ಸಂಖ್ಯೆ : 03
- ಹುದ್ದೆ ಹೆಸರು : ವೈಯಕ್ತಿಕ ಸಲಹೆಗಾರ (Individual Consultant)
- ಉದ್ಯೋಗ ಸ್ಥಳ : ಬೆಂಗಳೂರು – ಕರ್ನಾಟಕ
ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 80,000/- ರಿಂದ ರೂ. 85,000/- ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಹತಾ ವಿವರಗಳು :
- ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation), ಎಂ.ಎ (M.A) ಅಥವಾ ಎಂ.ಎಸ್.ಸಿ (M.Sc) ಪದವಿಯನ್ನು ಹೊಂದಿರಬೇಕು.
- ವಯೋಮಿತಿ :
ಅಭ್ಯರ್ಥಿಗಳು ಗರಿಷ್ಟ ವಯಸ್ಸು 63 ವರ್ಷ. (RITES ನಿಯಮಾವಳಿಯ ಪ್ರಕಾರ ವಯೋಸಡಲಿಕೆ ಅನ್ವಯಿಸುತ್ತದೆ)
ಅರ್ಜಿ ಶುಲ್ಕ :
- ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ :
- ಅಭ್ಯರ್ಥಿಗಳನ್ನು ಡಾಕ್ಯುಮೆಂಟ್ ಪರಿಶೀಲನೆ, ದೃಢೀಕರಣ ಪ್ರಕ್ರಿಯೆ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ಅರ್ಹತೆ ಪರಿಶೀಲಿಸಿ.
2. ಆನ್‌ಲೈನ್ ಅರ್ಜಿಯ ಆರಂಭಕ್ಕೆ ಮೊದಲು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸಿದ್ಧಮಾಡಿಕೊಳ್ಳಿ.
3. ಕೆಳಗಿನ ಲಿಂಕ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಿ.
4. ಅಗತ್ಯವಿರುವ ದಾಖಲೆಗಳ ಸ್ಕಾನ್ ನಕಲು ಮತ್ತು ಪಾಸ್ಪೋರ್ಟ್ ಸೈಜಿನ ಫೋಟೋ ಅಪ್ಲೋಡ್ ಮಾಡಿ.
5. ಅರ್ಜಿ ಸಲ್ಲಿಸಿ ಮತ್ತು ಅಪ್ಲಿಕೇಶನ್ ಸಂಖ್ಯೆಯನ್ನು ಭದ್ರಪಡಿಸಿಕೊಳ್ಳಿ.
ಸಂದರ್ಶನ ಸ್ಥಳ :
- Industry House, 5ನೇ ಮಹಡಿ, 45, ಫೇರ್‌ಫೀಲ್ಡ್ ಲೇಔಟ್, ರೇಸ್ ಕೋರ್ಸ್ ರೋಡ್, ಬೆಂಗಳೂರು – 560001
ಪ್ರಮುಖ ದಿನಾಂಕಗಳು :
- ಆನ್‌ಲೈನ್ ಅರ್ಜಿ ಆರಂಭ ದಿನಾಂಕ : 24-04-2025
- ಆನ್‌ಲೈನ್ ಅರ್ಜಿ ಕೊನೆ ದಿನಾಂಕ : 18-05-2025
- ಸಂದರ್ಶನ ದಿನಾಂಕ : 20 ಮತ್ತು 21 ಮೇ 2025