Others 14 ಜೂನ್ 2019 7 years ago

ಲೋಕೋಪಯೋಗಿ ಇಲಾಖೆಯಲ್ಲಿ 870 ಹುದ್ದೆಗಳ ಜೂನ್‌ 22ರಿಂದ 24ರ ವರೆಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ಕರೆಪತ್ರವನ್ನು ಪ್ರಕಟಿಸಲಾಗಿದೆ.

ಲೋಕೋಪಯೋಗಿ ಇಲಾಖೆಯಲ್ಲಿ 870 ಹುದ್ದೆಗಳ ಜೂನ್‌ 22ರಿಂದ 24ರ ವರೆಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ಕರೆಪತ್ರವನ್ನು ಪ್ರಕಟಿಸಲಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿಯಿರುವ 570 ಗ್ರೂಪ್‌ ಬಿ ದರ್ಜೆಯ ಸಹಾಯಕ ಎಂಜಿನಿಯರ್‌ (ಗ್ರೇಡ್‌-1) ಹುದ್ದೆ ಹಾಗೂ ಗ್ರೂಪ್‌ ಸಿ ದರ್ಜೆಯ 300 ಕಿರಿಯ ಎಂಜಿನಿಯರ್‌ ಹುದ್ದೆಗಳ ನೇಮಕಾತಿಗೆ ಜೂನ್‌ 22 ರಿಂದ ಜೂನ್‌ 24 ರವರೆಗೆ ನಡೆಯಲಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಭ್ಯರ್ಥಿಗಳಿಗೆ ಕರೆಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲಾಖಾ ವೆಬ್ಸೈಟ್ ನಲ್ಲಿ ತಿಳಿಸಲಾಗಿದೆ. ಕಿರಿಯ ಇಂಜಿನಿಯರ್‌ ============== ಜೂನ್‌ 22, 2019 ರಂದು ಕಿರಿಯ ಇಂಜಿನಿಯರ್‌ ಹುದ್ದೆಗೆ ಪರೀಕ್ಷೆ ನಡೆಯಲಿದೆ. 2 ಪೇಪರ್‌ಗಳಿದ್ದು, 1 ಸಾಮಾನ್ಯ ಜ್ಞಾನ, 2 ತಾಂತ್ರಿಕ ಪತ್ರಿಕೆ ಇರಲಿದೆ. ಸಾಮಾನ್ಯ ಜ್ಞಾನ ಪೇಪರ್‌ ಪರೀಕ್ಷೆಯು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30 ರವರೆಗೆ ನಡೆಯಲಿದೆ. ತಾಂತ್ರಿಕ ಪತ್ರಿಕೆ ಪರೀಕ್ಷೆಯು ಮಧ್ಯಾಹ್ನ 2.30ರಿಂದ ಸಂಜೆ 4.30ರ ವರೆಗೆ ನಡೆಯಲಿದೆ. ಸಹಾಯಕ ಇಂಜಿನಿಯರ್‌ ಗ್ರೇಡ್‌ - 1 ================== ಜೂನ್‌ 23, 2019 ರಂದು ಸಹಾಯಕ ಇಂಜಿನಿಯರ್‌ ಗ್ರೇಡ್‌ -1 ಪರೀಕ್ಷೆ ನಡೆಯಲಿದ್ದು, ಸಾಮಾನ್ಯ ಜ್ಞಾನ ಮತ್ತು ತಾಂತ್ರಿಕ ಪತ್ರಿಕೆ ಎಂಬ 2 ಪರೀಕ್ಷೆಗಳು ನಡೆಯಲಿವೆ. ಸಾಮಾನ್ಯ ಜ್ಞಾನ ಪೇಪರ್‌ ಪರೀಕ್ಷೆಯು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30 ರವರೆಗೆ ನಡೆಯಲಿದೆ. ತಾಂತ್ರಿಕ ಪತ್ರಿಕೆ ಪರೀಕ್ಷೆಯು ಮಧ್ಯಾಹ್ನ 2.30ರಿಂದ ಸಂಜೆ 4.30ರ ವರೆಗೆ ನಡೆಯಲಿದೆ. ಸಹಾಯಕ ಇಂಜಿನಿಯರ್‌ ಗ್ರೇಡ್‌ -1 ಅಥವಾ ಕಿರಿಯ ಇಂಜಿನಿಯರ್‌ ======================================= ಜೂನ್‌ 24, 2019 ರಂದು ಸಹಾಯಕ ಇಂಜಿನಿಯರ್‌ ಗ್ರೇಡ್‌ -1 ಅಥವಾ ಕಿರಿಯ ಇಂಜಿನಿಯರ್‌ ಹುದ್ದೆಗೆ ಪರೀಕ್ಷೆ ನಡೆಯಲಿದೆ. ಕನ್ನಡ ಭಾಷಾ ಪರೀಕ್ಷೆ (ವಿವರಾಣತ್ಮಕ ಲಿಖಿತ ಪರೀಕ್ಷೆ)ಯು ಬೆಳಗ್ಗೆ 10.30ರಿಂದ ಮಧ್ಯಾನ್ಹ 12.30ರ ವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: =================== https://cetonline.karnataka.gov.in/kea/PWD2019.aspx
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.