Karnataka State Police 28 ಮೇ 2018 7 years ago

ಕರ್ನಾಟಕ ಸಿವಿಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯ ಮರು ಅಧಿಸೂಚನೆ ಪ್ರಕಟಿಸಲಾಗಿದೆ

ಕರ್ನಾಟಕ ಸಿವಿಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯ ಮರು ಅಧಿಸೂಚನೆ ಪ್ರಕಟಿಸಲಾಗಿದೆ
ಉಲ್ಲೇಖಿತ ಅಧಿಸೂಚನೆಗಳ ಅನ್ವಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿವಿಲ್ (ಪುರುಷ ಮತ್ತು ಮಹಿಳಾ) ಹಾಗೂ ಸಶಸ್ತ್ರ ಮೀಸಲು ಸಬ್ ಇನ್ಸ್ಪೆಕ್ಟರ್ (ಸಿಎಆರ್/ಡಿಎಆರ್) ಪುರುಷ ಸೇವೆಯಲ್ಲಿರುವವರು ಒಳಗೊಂಡಂತೆ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ವಿಧಾನಸಭೆ ಮಾದರಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ಅರ್ಜಿ ಸಲ್ಲಿಸುವ ಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಲು ತೀರ್ಮಾನಿಸಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 28/05/2018 ರಿಂದ 11/06/2018 ರವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಚೇರಿಗಳ ವೇಳೆಯಲ್ಲಿ ಪಾವತಿಸಲು ದಿನಾಂಕವನ್ನು 13/06/2018 ರವರೆಗೆ ವಿಸ್ತರಿಸಲಾಗಿದೆ. ಆಡಳಿತಾತ್ಮಕ ಕಾರಣಗಳಿಂದ 26 ಪೊಲೀಸ್ ಸಬ್ಇನ್ಸ್ ಪೆಕ್ಟರ್ ಸಿವಿಲ್ ಹುದ್ದೆಗಳನ್ನು ಪ್ರಸಕ್ತ ಅರ್ಜಿ ಸೂಚಿಸಲಾದ 164 ಹುದ್ದೆಗಳೊಂದಿಗೆ ಹಾಗೂ 20 ಸಶಸ್ತ್ರ ಮೀಸಲು ಸಬ್ಇನ್ಸ್ಪೆಕ್ಟರ್ (ಸಿಎಆರ್/ಡಿಎಆರ್) ಹುದ್ದೆಗಳನ್ನು ಪ್ರಸ್ತುತ ಅಧಿಸೂಚಿಸಲಾದ 38 ಹುದ್ದೆ ಗಳೊಂದಿಗೆ ಸೇರಿಸಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು. ಈ ಹಿಂದೆ ಪ್ರಕಟಿಸಲಾದ ಅಧಿಸೂಚನೆಯಲ್ಲಿನ ಇತರೆ ಅರ್ಹತಾ ಸುತ್ತಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಅಧಿಸೂಚನೆಯ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ಕಿಸುವ ಮೂಲಕ ಪಡೆಯಬಹುದು.
Official Notifications & Links
to view date extened notification
Official notification attachment
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.