ರಾಷ್ಟ್ರೀಯ ಮಿಲಿಟರಿ ಶಾಲೆ ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮಿಲಿಟರಿ ಶಾಲೆ ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by Bhagya R K
01 ಫೆಬ್ರವರಿ 2025 Others

ರಾಷ್ಟ್ರೀಯ ಮಿಲಿಟರಿ ಶಾಲೆ ಬೆಂಗಳೂರು (RMS Bengaluru) ಇಲ್ಲಿ ಖಾಲಿ ಇರುವ 04 ಸಹಾಯಕ ಮಾಸ್ಟರ್ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.

ಹುದ್ದೆಯ ವಿವರಗಳು : 04
ಸಹಾಯಕ ಮಾಸ್ಟರ್ (ಭೌತಶಾಸ್ತ್ರ) - 1 
ಸಹಾಯಕ ಮಾಸ್ಟರ್ (ರಸಾಯನಶಾಸ್ತ್ರ) - 2 
ಸಹಾಯಕ ಮಾಸ್ಟರ್ (ಇಂಗ್ಲಿಷ್) - 1 

ಉದ್ಯೋಗ ಸ್ಥಳ :
ಬೆಂಗಳೂರು – ಕರ್ನಾಟಕ

ವಿದ್ಯಾರ್ಹತೆ :
RMS ಬೆಂಗಳೂರು ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಬಿ.ಎಡ್ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ :
- ಗರಿಷ್ಠ ವಯಸ್ಸು 30 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ವಯೋಮಿತಿ ಸಡಿಲಿಕೆ :
  - ಸರ್ಕಾರಿ ನೌಕರರು: 05 ವರ್ಷಗಳು

ಅರ್ಜಿಶುಲ್ಕ :
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
- SC ಅಭ್ಯರ್ಥಿಗಳಿಗೆ: 50/-
- UR/OBC/ESM ಅಭ್ಯರ್ಥಿಗಳಿಗೆ: ₹100/-
- ಪಾವತಿಯ ವಿಧಾನ : ಡಿಮ್ಯಾಂಡ್ ಡ್ರಾಫ್ಟ್/ಕ್ರಾಸ್ಡ್ ಇಂಡಿಯನ್ ಪೋಸ್ಟಲ್ ಆರ್ಡರ್

ವೇತನ ಶ್ರೇಣಿ :
RMS ಬೆಂಗಳೂರು ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಮಾಸಿಕ ₹44,900-/- ರೂ ಗಳಿಂದ 1,42,400/- ರೂ ಗಳ ವರೆಗೆ ವೇತನವನ್ನು ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ :
- ದಾಖಲೆಗಳ ಪರಿಶೀಲನೆ
- ಬೋಧನಾ ಅಭ್ಯಾಸ
- ಸಂದರ್ಶನ

ಅರ್ಜಿ ಸಲ್ಲಿಸಲು ವಿಳಾಸ :
Principal, Rashtriya Military School, PB No 25040, Museum Road PO, Opp. Johnson Market, Hosur Road, Bengaluru-560025

ಪ್ರಮುಖ ದಿನಾಂಕಗಳು : 
- ಆಫ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 25-01-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-03-2025

ಇನ್ನು ಹೆಚ್ಚಿನ ಮಾಹಿತಿ ಹಾಗೂ ಅರ್ಜಿಯ ಮಾದರಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಭ್ಯರ್ಥಿಗಳು ಈ ಅವಕಾಶವನ್ನು ಸದ್ವಿನಿಯೋಗಪಡಿಸಿಕೊಳ್ಳಿ!

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.