ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ UPSC/ KAS/ ಬ್ಯಾಂಕಿಂಗ್ ನ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿಗಾಗಿ ನಡೆಸಲಾಗುವ ಪರೀಕ್ಷೆಯ ದಿನಾಂಕ ನಿಗದಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ UPSC/ KAS/ ಬ್ಯಾಂಕಿಂಗ್ ನ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿಗಾಗಿ ನಡೆಸಲಾಗುವ ಪರೀಕ್ಷೆಯ ದಿನಾಂಕ ನಿಗದಿ
23 ಆಗಸ್ಟ್ 2019 Backward Classes welfare/Minority Department
ವಿವಿಧ ಇಲಾಖೆಗಳಿಂದ ಯುಪಿಎಸ್ಸಿ, ಕೆಎಎಸ್, ಎಸ್ಎಸ್ಸಿ, ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ನೀಡಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಂಬಂಧ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ಸರ್ಕಾರವು ಆದೇಶಿಸುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ 08-09-2019 ರಂದು ಈ ಕೆಳಗಿನ ವೇಳಾಪಟ್ಟಿಯಂತೆ ನಡೆಸಲಾಗುವುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ದಿನಾಂಕ 30-08-2019 ರಿಂದ ಪ್ರಾಧಿಕಾರದ ಜಾಲತಾಣದಿಂದ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು. * UPSC, Group A, B, C ಮತ್ತು KAS ಹುದ್ದೆಗಳ ಉಚಿತ ತರಬೇತಿಗಾಗಿ ದಿನಾಂಕ 08-09-2019 ರಂದು ಬೆಳಿಗ್ಗೆ 10:30 ರಿಂದ ಆರಂಭವಾಗಿ 12:30 ರವರೆಗೆ 100 ಅಂಕಗಳ ಪರೀಕ್ಷೆ ನಡೆಯುತ್ತದೆ. * SSC / RRB / Banking ಹುದ್ದೆಗಳ ಉಚಿತ ತರಬೇತಿಗಾಗಿ ದಿನಾಂಕ 08-09-2019 ರಂದು ಮಧ್ಯಾನ್ಹ 02:30 ರಿಂದ ಆರಂಭವಾಗಿ 04:30 ರವರೆಗೆ 100 ಅಂಕಗಳ ಪರೀಕ್ಷೆ ನಡೆಯುತ್ತದೆ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ವಿವಿಧ ಇತಿಹಾಸದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.