Backward Classes welfare/Minority Department 30 ಜುಲೈ 2019 7 years ago

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸೇನೆಗೆ ಸೇರ ಬಯಸುವ ಅಭ್ಯರ್ಥಿಗಳಿಗೆ ಪೂರ್ವಸಿದ್ಧತೆಗಾಗಿ ಉಚಿತ (ಊಟ + ವಸತಿ) ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸೇನೆಗೆ ಸೇರ ಬಯಸುವ ಅಭ್ಯರ್ಥಿಗಳಿಗೆ ಪೂರ್ವಸಿದ್ಧತೆಗಾಗಿ ಉಚಿತ (ಊಟ + ವಸತಿ) ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ
ಭಾರತೀಯ ಸೈನಿಕ ಹುದ್ದೆಗಳ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಇದೋ ಸುವರ್ಣಾವಕಾಶ..! ಶೀಘ್ರದಲ್ಲೇ ಕೊಪ್ಪಳ ಮತ್ತು ಕೊಡಗು ಜಿಲ್ಲೆಗಳಲ್ಲಿ ಸೈನಿಕ ಹುದ್ದೆಗಳ ಭರ್ತಿಗೆ ರ್ಯಾಲಿ ನಡೆಯಲಿದೆ ಮತ್ತು ಈ ರ್ಯಾಲಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಉಚಿತ ತರಬೇತಿ ನೀಡುತ್ತಿದ್ದು ಅರ್ಹ ಅಭ್ಯರ್ಥಿಯಾಗಿನಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿದೆ. ಈ ಕೆಳಗೆ ನೀಡಿರುವ ಲಿಂಕ್ ನಲ್ಲಿ ಈ ಕುರಿತ ಸಂಪೂರ್ಣ ಮಾಹಿತಿ ನಿಮಗಾಗಿ ಭಾರತೀಯ ಸೇನೆಗೆ ಸೇರಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅವಿವಾಹಿತ ಅರ್ಹ ಪುರುಷ ಅಭ್ಯರ್ಥಿಗಳಿಗೆ ಸೇನಾ ಹುದ್ದೆಗಳ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಯನ್ನು ಉಚಿತ ಊಟ ಮತ್ತು ವಸತಿ ಸೌಲಭ್ಯದೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಲಾಖೆಯು 2019-20 ನೇ ಸಾಲಿಗೆ ನೀಡುತ್ತಿದ್ದು, ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(A), 3(A) & 3(B) ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ಲೈನ್ ಮೂಲಕ ಆಹ್ವಾನಿಸಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08.08.2019, ಸಂಜೆ 5 ಗಂಟೆ ಆಗಿದೆ. * ಈ ತರಬೇತಿಗಳನ್ನು ಕೊಡಗು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಶೀಘ್ರದಲ್ಲೇ ನಡೆಯುವ ಸೈನಿಕ ರ್ಯಾಲಿಗಳನ್ನು ಗಮನದಲ್ಲಿರಿಸಿಕೊಂಡು ನಡೆಸಲಾಗುತ್ತಿದೆ. * ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ಇಲಾಖಾ ವೆಬ್ ಸೈಟ್ ನೋಡಬಹುದು ಅಥವಾ ಸಹಾಯವಾಣಿ : 080-8050770004 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಈ ರಕ್ಷಾ ಬಂಧನದಲ್ಲಿ ಉತ್ತಮ ದರ್ಜೆಯ ರಾಖಿಗಳನ್ನು amazon ನಿಂದ ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಿ

Stay Updated with KPSC Vaani

Get instant notifications for exam alerts, question papers, syllabus, and results directly on your phone.

Comments