ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಇವರಿಂದ ಸ್ವಯಂ ಉದ್ಯೋಗ ನಡೆಸಲು ಅನುಕೂಲವಾಗುವಂತೆ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ
28 ಡಿಸೆಂಬರ್ 2019
Others
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ತಾಂಡಾಗಳ ಸಮಗ್ರ ಅಭಿವೃದ್ಧಿಗಾಗಿ ಸ್ಥಾಪನೆಯಾಗಿದೆ. ಪ್ರಸ್ತುತ ಲಂಬಾಣಿ ಜನಾಂಗದ ನಿರುದ್ಯೋಗಿ ಯುವಕ ಯುವತಿಯರು ಉದ್ಯೋಗ ಪಡೆಯಲು ಅಥವಾ ಸ್ವಯಂ ಉದ್ಯೋಗ ನಡೆಸಲು ಅನುಕೂಲವಾಗುವಂತೆ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನೀಡುತ್ತಿದೆ. 2019-20 ನೇ ಸಾಲಿನಲ್ಲಿ ನಿರುದ್ಯೋಗಿ ಯುವಕ ಯುವತಿಯರು ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಈ ಕೆಳಕಾಣಿಸಿದ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ
* ಸೈನಿಕ ಮತ್ತು ಸಂಬಂಧಿತ ಪೂರ್ವಭಾವಿ ತರಬೇತಿ
* ಲಘು ವಾಹನ ತರಬೇತಿ
* ಭಾರಿ ವಾಹನ ತರಬೇತಿ
- ತರಬೇತಿಗಳನ್ನು ರಾಜ್ಯ ಮಟ್ಟ, ತಾಲೂಕು ಮಟ್ಟ ಮತ್ತು ಆಯ್ದು KSRTC ತರಬೇತಿ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ
- ಸೈನಿಕ ಮತ್ತು ಸಂಬಂಧಿತ ಪೂರ್ವಭಾವಿ ತರಬೇತಿ ಪಡೆಯಲು ಅಭ್ಯರ್ಥಿಗಳು ಪಿಯುಸಿ ವಿದ್ಯಾರ್ಹತೆ ಹಾಗೂ ಗರಿಷ್ಠ 22 ವರ್ಷಗಳ ವಯೋಮಿತಿಯ ಒಳಗಿನವರಾಗಿರಬೇಕು.
- ಲಘು ಮತ್ತು ಭಾರಿ ವಾಹನ ತರಬೇತಿಗೆ ಅಭ್ಯರ್ಥಿಗಳು SSLC ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಗರಿಷ್ಠ 35 ವರ್ಷ ವಯೋಮಿತಿಯ ಒಳಗಿನವರಾಗಿರಬೇಕು.
ಈ ತರಬೇತಿ ಪಡೆಯಲು ಬಯಸುವ ಲಂಬಾಣಿ ಯುವಕ ಯುವತಿಯರು ಈ ಕೆಳಗೆ ನೀಡಿದ ನಿಗಮದ ವಿಳಾಸಕ್ಕೆ ಅಥವಾ ಇ ಮೇಲ್ ಮೂಲಕ ಅರ್ಜಿ ನಮೂನೆ ಮಾದರಿಯಲ್ಲಿ ಅರ್ಜಿಯ ಅರ್ಜಿಯನ್ನು ದಿನಾಂಕ 17 ಜನವರಿ 2020 ರ ಒಳಗಾಗಿ ಕೇಂದ್ರ ಕಚೇರಿ ತಲುಪುವಂತೆ ಕಳುಹಿಸಬೇಕು
ಕಚೇರಿ ವಿಳಾಸ :
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ,
ಸೈರ್ ಭಾಗ್, ನಂ 19/4, ಎರಡನೇ ಮಹಡಿ,
ಕನ್ನಿಂಗ್ಹ್ಯಾಮ್ ರಸ್ತೆ, ಬೆಂಗಳೂರು -560052
ಈ ಕುರಿತು ಹೆಚ್ಚಿನ ವಿವರಗಳಿಗೆ ಈ ಚಳಿಗೆ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಡೌನ್ ಲೋಡ್ ಮಾಡಿಕೊಂಡು ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿದೆ