KSRTC ಯಿಂದ ಅರ್ಟಿಸನ್ (artisan) ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳ ಕೌನ್ಸಲಿಂಗ್ (counselling) ಗಾಗಿ ದಿನಾಂಕ ಪ್ರಕಟ

KSRTC ಯಿಂದ ಅರ್ಟಿಸನ್ (artisan) ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳ ಕೌನ್ಸಲಿಂಗ್ (counselling) ಗಾಗಿ ದಿನಾಂಕ ಪ್ರಕಟ
24 ಜುಲೈ 2019 BMTC/KSRTC
KSRTC ಯಿಂದ 2016 ರಲ್ಲಿ ವಿವಿಧ ವಿಭಾಗಗಳ ಕುಶಲಕರ್ಮಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿಸಲಾಗಿತ್ತು ಮತ್ತು ಈ ಹುದ್ದೆಗಳಿಗೆ ಕಳೆದ ವರ್ಷ(2018) ಅಕ್ಟೋಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. ಕಳೆದ ತಿಂಗಳು ಈ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಕೂಡ ಪ್ರಕಟಿಸಲಾಗಿದ್ದು. ಪ್ರಸ್ತುತ ಕುಶಲಕರ್ಮಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯಲ್ಲಿ (Final selection List) ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳನಿಯೋಜನೆಗಾಗಿ (counselling ) ಕೆಎಸ್ಆರ್ಟಿಸಿಯು ದಿನಾಂಕ ನಿಗದಿಪಡಿಸಿದೆ. ದಿನಾಂಕ 31/07/2019 ರಂದು ಬೆಳಿಗ್ಗೆ 9:00 ಗಂಟೆಯಿಂದ ಶಾಂತಿನಗರದ ಕಚೇರಿಯಲ್ಲಿ ಸ್ಥಳ ನಿಯೋಜನೆ ಕಾರ್ಯ ನಡೆಯಲಿದ್ದು, ಈಗಾಗಲೇ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊಬೈಲ್ ಮೂಲಕ ಸಂದೇಶ ರವಾನಿಸಲಾಗಿದೆ. ನಿಗದಿಪಡಿಸಿದ ದಿನಾಂಕದಂದು ಅಭ್ಯರ್ಥಿಗಳು ಗೈರು ಹಾಜರಾದರೆ ಅವರ ಸ್ಥಳ ನಿಯೋಜನೆ ಅವಕಾಶವನ್ನು ಕಳೆದುಕೊಳ್ಳುವರು.
ನಿಮ್ಮ ಮೊಬೈಲ್ ಫೋನಿಗೆ ಬೇಕಾದ ಅತ್ಯವಶ್ಯಕ ಉಪಕರಣಗಳನ್ನು ಅತಿ ಕಡಿಮೆ ಬೆಲೆಗೆ amazon ಜಾಲತಾಣದಿಂದ ಖರೀದಿಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.