ಪೊಲೀಸ್ ಕಾನ್ಸ್ ಟೇಬಲ್ ಹುದ್ದೆ ಅಕಾಂಕ್ಷಿಗಳಿಗೆ ಶುಭ ಸುದ್ದಿ, ವಯೋಮಿತಿ ಸಡಲಿಕೆಗೆ ನಿರ್ಧಾರ ಈ ಕುರಿತ ಮಾಹಿತಿ ನಿಮಗಾಗಿ

ಪೊಲೀಸ್ ಕಾನ್ಸ್ ಟೇಬಲ್ ಹುದ್ದೆ ಅಕಾಂಕ್ಷಿಗಳಿಗೆ ಶುಭ ಸುದ್ದಿ, ವಯೋಮಿತಿ ಸಡಲಿಕೆಗೆ ನಿರ್ಧಾರ ಈ ಕುರಿತ ಮಾಹಿತಿ ನಿಮಗಾಗಿ
Published by Basavaraj Halli
03 ನವೆಂಬರ್ 2022 Karnataka State Police
ಇತ್ತೀಚೆಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಅಧಿಸೂಚಿಸಿದ ಪೋಲಿಸ್ ಕಾನ್ಸ್ಟೇಬಲ್ ಸಿವಿಲ್ ಮತ್ತು ಸಿಎಆರ್/ಡಿಎಆರ್ ಹುದ್ದೆಗಳಿಗೆ ನಿಗದಿಪಡಿಸಿದ ಗರಿಷ್ಠ ವಯೋಮಿತಿಯನ್ನು ಕೇವಲ ಒಂದು ಬಾರಿಗೆ ಅನ್ವಯಿಸುವಂತೆ ಎರಡು ವರ್ಷಗಳಿಗೆ ಹೆಚ್ಚಿಸಿ ಇದೀಗ ರಾಜ್ಯ ಸರ್ಕಾರವು ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ.
ಕಳೆದ 3 ವರ್ಷಗಳಿಂದ ಕೋವಿಡ್-19 ಕಾರಣದಿಂದಾಗಿ ನಿಯಮಿತವಾಗಿ ನೇಮಕಾತಿ ನಡೆಯದ ಪ್ರಯುಕ್ತ ಆಕಾಂಕ್ಷಿತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ವಂಚಿತರಾಗಿರುವುದರಿಂದ ವಯೋಮಿತಿಯಲ್ಲಿ 2 ವರ್ಷಗಳ ವಿನಾಯಿತಿ ನೀಡುವಂತೆ ಹಲವಾರು ಮನವಿಗಳು ಸ್ವೀಕೃತವಾಗಿರುವದನ್ನು ಪರಿಗಣಿಸಿ ರಾಜ್ಯ ಪೊಲೀಸ್ ಇಲಾಖೆಯು ಕೇವಲ ಒಂದು ಬಾರಿಗೆ ಅನ್ವಯಿಸುವಂತೆ  2022-23ನೇ ಸಾಲಿನಲ್ಲಿ ಅಧಿಸೂಚಿಸಲಾದ ಪೊಲೀಸ್ ಕಾನ್ಸ್ಟೇಬಲ್ ಸಿವಿಲ್ ಮತ್ತು ಸಿಎಆರ್/ಡಿಎಆರ್ ಹುದ್ದೆಗಳಿಗೆ ನಿಗದಿಪಡಿಸಿದ ಗರಿಷ್ಠ ವಯೋಮಿತಿಯನ್ನು 2 ವರ್ಷ ಗಳಿಗೆ ಹೆಚ್ಚಿಸುವಂತೆ ಆದೇಶಿಸಲಾಗುತ್ತದೆ.
ಈ ಕುರಿತ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ಪಡೆಯಬಹುದಾಗಿದೆ.
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.