ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ವಿವಿಧ ಪೊಲೀಸ್ ಕಾನ್ ಸ್ಟೆಬಲ್ ಹುದ್ದೆಗಳ ಲಿಖಿತ ಪರೀಕ್ಷೆ ದಿನಾಂಕ ನಿಗದಿ..!
25 ಅಕ್ಟೋಬರ್ 2019
Karnataka State Police
2019-20 ನೇ ಸಾಲಿನ ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ) 2013 ಹುದ್ದೆಗಳು, ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಆರ್ ಪಿ) (HK) 218 ಹುದ್ದೆಗಳು, ಮತ್ತು ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ (ಸಿಎಆರ್ / ಡಿಎಆರ್) 1013 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂಧ ಅಧಿಸೂಚನೆಯನ್ನು ಪೊಲೀಸ್ ಇಲಾಖೆ ಹೊರಡಿಸುತ್ತದೆ. ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ ಹುದ್ದೆಗಳಿಗೆ ದಿನಾಂಕ 17 ನವೆಂಬರ್ 2019 ರಂದು, ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (KSRP) ಹುದ್ದೆಗಳಿಗೆ ದಿನಾಂಕ 24 ನವೆಂಬರ್ 2019 ಮತ್ತು ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ (CAR / DAR) ಹುದ್ದೆಗಳಿಗೆ ದಿನಾಂಕ 01 ಡಿಸೆಂಬರ್ 2019 ರಂದು ಲಿಖಿತ ಪರೀಕ್ಷೆಗಳನ್ನು ರಾಜ್ಯದ ವಿವಿಧ ಘಟಕಗಳಲ್ಲಿ ನಡೆಸಲು ರಾಜ್ಯ ಪೊಲೀಸ್ ಇಲಾಖೆಯು ತೀರ್ಮಾನ ಕೈಗೊಂಡಿದ್ದು ಇನ್ನೇನು ಕೆಲವೇ ದಿನದಲ್ಲಿ ಈ ಕುರಿತ ಅಧಿಕೃತ ಅಧಿಸೂಚನೆ ಪ್ರಕಟಗೊಳ್ಳಲಿದೆ.