ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ನಾಗರೀಕ (Civil) ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಲಿಖಿತ ಪರೀಕ್ಷಾ ದಿನಾಂಕ ನಿಗದಿ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ನಾಗರೀಕ (Civil) ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಲಿಖಿತ ಪರೀಕ್ಷಾ ದಿನಾಂಕ ನಿಗದಿ
Published by Basavaraj Halli
15 ಫೆಬ್ರವರಿ 2020 Karnataka State Police
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ದಿನಾಂಕ 16 ಅಕ್ಟೋಬರ್ 2019 ರಂದು ಅಧಿಸೂಚನೆ ಹೊರಡಿಸಿದ ನಾಗರಿಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನ 300 ಹುದ್ದೆಗಳಿಗೆ ಈಗಾಗಲೇ ದೈಹಿಕ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ದೈಹಿಕ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲು ದಿನಾಂಕ 08 ಮಾರ್ಚ್ 2020 ರಂದು ತಾತ್ಕಾಲಿಕವಾಗಿ ದಿನಾಂಕ ನಿಗದಿಪಡಿಸಿದೆ. ದಿನಾಂಕ 08 ಮಾರ್ಚ್ 2020 ರಂದು ಬೆಳಿಗ್ಗೆ 10:00 ರಿಂದ 11:30 ಮತ್ತು ರವರೆಗೆ ಪತ್ರಿಕೆ-1 ಹಾಗೂ ಅದೇ ದಿನ ಮಧ್ಯಾಹ್ನ 01:00 ಗಂಟೆಯಿಂದ 02:30 ರವರೆಗೆ ಪತ್ರಿಕೆ-2ರ ಲಿಖಿತ ಪರೀಕ್ಷೆಯನ್ನು ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಪರೀಕ್ಷೆಯನ್ನು ರಾಜ್ಯದ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಬಳ್ಳಾರಿ ನಗರಗಳ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. - ಈ ಕುರಿತು ಇನ್ನಷ್ಟೇ ಪೊಲೀಸ್ ಇಲಾಖೆಯ ಜಾಲತಾಣದಲ್ಲಿ ಅಧಿಕೃತವಾಗಿ ಪ್ರಕಟಗೊಳ್ಳಬೇಕಿದ್ದು ಅಭ್ಯರ್ಥಿಗಳು ಮಾಹಿತಿಗಾಗಿ ಕಾಯಬೇಕು. note: PSI ಲಿಖಿತ ಪರೀಕ್ಷಾ ಉತ್ತಮ ತಯಾರಿಗಾಗಿ ಪ್ರಸಿದ್ಧ ಲೇಖಕರ ಪುಸ್ತಕಗಳನ್ನು KPSC Vaani ಜಾಲತಾಣದಲ್ಲಿ ಆನ್ಲೈನ್ ಮೂಲಕ ಖರೀದಿಸಿ ಉತ್ತಮ ತಯಾರಿ ನಡೆಸಿ ಪುಸ್ತಕ ಖರೀದಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
Discussion & Comments (3)

Have a query or feedback about this update?

C
Chethan
15 ಫೆಬ್ರವರಿ 2020, 11:06 ಅಪರಾಹ್ನ

When will be the PSI 200post results .

V
Vishnu Tm
15 ಫೆಬ್ರವರಿ 2020, 09:29 ಅಪರಾಹ್ನ

Police constable recruitment date

K
Kiran B P
15 ಫೆಬ್ರವರಿ 2020, 09:27 ಅಪರಾಹ್ನ

Is this date final?? Is there any chance of postpone of exam date??

Stay Updated with KPSC Vaani

Get instant notifications for exam alerts, question papers, syllabus, and results directly on your phone.