ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಿವಿಲ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ದೈಹಿಕ ಪರೀಕ್ಷೆಯ ದಿನಾಂಕ ಮರು ನಿಗದಿಪಡಿಸಲಾಗಿದೆ...!
24 ಡಿಸೆಂಬರ್ 2019
Karnataka State Police
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಡಿಸೆಂಬರ್ 26, 2019 ರಿಂದ ಸಿವಿಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ದೈಹಿಕ ಮತ್ತು ಸಹಿಷ್ಟುತೆ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿ ಸಮಿತಿಗಳನ್ನು ರಚಿಸಿತ್ತು, ಆದರೆ ಕಾನೂನು ಸುವ್ಯವಸ್ಥೆ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಸದರಿ ಈ ಪರೀಕ್ಷೆಗಳನ್ನು ಮತ್ತೆ ಮುಂದೂಡಲಾಗಿತ್ತು.
ಪ್ರಸ್ತುತ ಇಲಾಖೆಯು ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ನಿಗದಿಪಡಿಸಿದ್ದು, ಪರಿಸ್ಕ್ರುತ ದಿನಾಂಕದಂತೆ ದೈಹಿಕ ಮತ್ತು ಸಹಿಷ್ಟುತೆ ಪರೀಕ್ಷೆಗಳು ಜನವರಿ 7, 2020 ರಿಂದ ಆರಂಭವಾಗಿ ಜನವರಿ 27 2020 ರವರೆಗೆ ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಯಲಿವೆ.
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ವಿವರವಾದ ಮಾಹಿತಿಯನ್ನು ಪಡೆಯಬಹುದಾಗಿದೆ.
* ಈ ಕುರಿತು ಅಧಿಕೃತವಾಗಿ ಇಲಾಖೆಯ ಜಾಲತಾಣದಲ್ಲಿ ಇನ್ನಷ್ಟೇ ಮಾಹಿತಿ ಪ್ರಕಟಗೊಳ್ಳಬೇಕಿದೆ