ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳಾ) 300 ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ ಮತ್ತೊಮ್ಮೆ ಮುಂದೂಡಲಾಗಿದೆ.
Published by Basavaraj Halli
07 ಜನವರಿ 2020
Karnataka State Police
ದಿನಾಂಕ 16-ಅಕ್ಟೋಬರ್-2019 ರಂದು ರಾಜ್ಯ ಪೊಲೀಸ್ ಇಲಾಖೆಯು ಸುಮಾರು 300 ಪೊಲೀಸ್ ಸಬ್ ಇನ್ಸ್ಪೆಕ್ಟರ್(ಸಿವಿಲ್) (ಪುರುಷ & ಮಹಿಳಾ) ಹುದ್ದೆಗಳ ಭರ್ತಿಯ ಸಂಬಂಧ ಅಧಿಸೂಚನೆ ಹೊರಡಿಸಿತ್ತು, ಸದರಿ ಈ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 08 ಜನವರಿ 2020 ನಡೆಯಬೇಕಾದ ದೈಹಿಕ ಮತ್ತು ಸಹಿಷ್ಟುತೆ ಪರೀಕ್ಷೆಯನ್ನು ಭಾರತ ಬಂಧ್ ಸಲುವಾಗಿ ಮತ್ತೊಮ್ಮೆ ಮುಂದೂಡಿ ದಿನಾಂಕ 13 ಜನವರಿ 2020 ರಂದು ನಡೆಸಲು ಮರು ದಿನಾಂಕ ನಿಗದಿಪಡಿಸಿ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿದೆ
ಅಭ್ಯರ್ಥಿಗಳು ಪರಿಸ್ಕ್ರುತ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಂಡು ದೈಹಿಕ ಮತ್ತು ಸಹಿಷ್ಟುತೆ ಪರೀಕ್ಷೆಗೆ ಹಾಜರಾಗಲು ಇಲಾಖೆಯು ತನ್ನ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿದೆ