K-SET 02 ಸೆಪ್ಟೆಂಬರ್ 2025 1 year ago
Published by Bhagya R K

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯ (KSET) ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ ಪಠ್ಯಕ್ರಮ ಇದೀಗ ಪ್ರಕಟ

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯ (KSET) ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ ಪಠ್ಯಕ್ರಮ ಇದೀಗ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಸ್ತುತ ವರ್ಷದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET) 2025ಕ್ಕೆ ಸಂಬಂಧಿಸಿದಂತೆ ಪಠ್ಯಕ್ರಮವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಪರೀಕ್ಷೆ ನವೆಂಬರ್ 2, 2025 ರಂದು ನಡೆಯಲಿದೆ. ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈಗ ವಿಷಯವಾರು ಪಠ್ಯಕ್ರಮವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

K-SET ಪರೀಕ್ಷೆಗೆ ಅರ್ಜಿ ಆಹ್ವಾನ ಈಗಾಗಲೇ ನೀಡಲಾಗಿದ್ದು, ಅಭ್ಯರ್ಥಿಗಳು ತಕ್ಷಣ ತಮ್ಮ ಪಠ್ಯಕ್ರಮವನ್ನು ಪರಿಶೀಲಿಸಿ ತಯಾರಿ ಪ್ರಾರಂಭಿಸಲು ಸಲಹೆ ನೀಡಲಾಗಿದೆ. ಪ್ರತಿ ವಿಷಯಕ್ಕೆ ಪ್ರತ್ಯೇಕವಾಗಿ ಸಿಲಬಸ್‌ ಲಿಂಕ್‌ಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ.

ಆಧಿಸೂಚನೆ ಮತ್ತು ಪ್ರಸ್ತುತ ಪರಿಸ್ಥಿತಿ : 
- ಕೆಸೆಟ್ ಅಧಿಸೂಚನೆ ಆಗಸ್ಟ್ 22ರಂದು ಪ್ರಕಟಗೊಂಡಿತ್ತು.
- ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಆಗಸ್ಟ್ 28ರಿಂದ ಅವಕಾಶ ನೀಡಲಾಗುವುದು ಎಂದು ಹೇಳಲಾಗಿತ್ತು.
- ಆದರೆ ತಾಂತ್ರಿಕ ಕಾರಣದಿಂದಾಗಿ ಅರ್ಜಿ ಪ್ರಕ್ರಿಯೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಲಾಯಿತು.
- ಈಗ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗದೆ ಐದು ದಿನಗಳಿಂದ ಅಭ್ಯರ್ಥಿಗಳು ಕಾಯುತ್ತಿದ್ದಾರೆ.

ಪಠ್ಯಕ್ರಮ ಡೌನ್‌ಲೋಡ್ ವಿವರಗಳು:
- ಕೆ-ಸೆಟ್‌ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು, ವಿಷಯವಾರು ಪಠ್ಯಕ್ರಮವನ್ನು ಕೆಇಎ ಅಧಿಕೃತ ಜಾಲತಾಣದಲ್ಲಿ ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪರೀಕ್ಷಾರ್ಥಿಗಳಿಗೆ ಸೂಚನೆ:
- ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ‘K-SET Syllabus’ ಲಿಂಕ್‌ನಲ್ಲಿ ಪಿಡಿಎಫ್ ಡೌನ್‌ಲೋಡ್ ಮಾಡಿ.
- ಎಲ್ಲಾ 33 ವಿಷಯಗಳ ಪಠ್ಯಕ್ರಮ ಲಭ್ಯವಿದೆ.
- ತಯಾರಿಯ ಸಮಯದಲ್ಲಿ ಅಧಿಕೃತ ಪಠ್ಯಕ್ರಮವನ್ನೇ ಆಧಾರವನ್ನಾಗಿ ಮಾಡಿಕೊಂಡು ಅಭ್ಯಾಸ ಮಾಡುವುದು ಮಹತ್ವದ್ದು.

ಅಭ್ಯರ್ಥಿಗಳು ತಮ್ಮ ಆಯ್ಕೆ ಮಾಡಿದ ವಿಷಯಗಳಿಗೆ ಹೊಂದಿಕೊಳ್ಳುವಂತೆ ಸಿಲಬಸ್‌ನ್ನು ಡೌನ್‌ಲೋಡ್ ಮಾಡಿಕೊಂಡು ಅಧ್ಯಯನ ಪ್ರಾರಂಭಿಸಬೇಕು. ವಿವರವಾದ ಮಾಹಿತಿ ಮತ್ತು ಸಿಲಬಸ್ ಪಡೆಯಲು K-SET ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.