ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನೇಮಕಾತಿಯ ಲಿಖಿತ ಪರೀಕ್ಷೆಯ ಪ್ರವೇಶ ಪತ್ರಗಳು ಪ್ರಕಟ
Published by Basavaraj Halli
31 ಜನವರಿ 2020
Others
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳ ನಿಯಮಿತ ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ವೇತನ ಶ್ರೇಣಿಯ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಆನ್ ಲೈನ್ ಮೂಲಕ ದಿನಾಂಕ 14 ಫೆಬ್ರುವರಿ 2019 ರಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು.
ಈ ನೇಮಕಾತಿಯು ಸಂಪಾದಕರು, ಸಾರ್ವಜನಿಕ ಸಂಪರ್ಕಾಧಿಕಾರಿ, ಉಪನ್ಯಾಸಕರು,,ಜಿಲ್ಲಾ ಸಹಕಾರ ಶಿಕ್ಷಕರು, ಮಹಿಳಾ ಸಹಕಾರ ಶಿಕ್ಷಕರು, ಶೀಘ್ರಲಿಪಿಕಾರರು, ಗ್ರಂಥಾಲಯ ಸಹಾಯಕರು, ವರದಿಗಾರರು ಮತ್ತು ಸ್ವಾಗತಕಾರ ಹುದ್ದೆಗಳ ನೇಮಕಾತಿಗಾಗಿ ಪ್ರಕ್ರಿಯೆ ನಡೆದಿದೆ.
ನ್ಯಾಯಾಲಯದ ತಡೆಯಿಂದ ಮುಂದೂಡಲಾಗಿದ್ದ ಈ ಲಿಖಿತ ಪರೀಕ್ಷೆಯನ್ನು ದಿನಾಂಕ 08 ಮತ್ತು 09 ಫೆಬ್ರವರಿ 2020 ರಂದು "ಮಹಾರಾಣಿ ಕ್ಲಸ್ಟರ್ ಯೂನಿವರ್ಸಿಟಿ, ಶೇಷಾದ್ರಿ ರಸ್ತೆ, ಸ್ವಾತಂತ್ರ್ಯ ಉದ್ಯಾನದ ಎದುರುಗಡೆ, ಬೆಂಗಳೂರು-560009" ಇಲ್ಲಿ ನಡೆಸಲು ತೀರ್ಮಾನಕೈಗೊಳ್ಳಲಾಗಿದ್ದು ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸುವ ಮೂಲಕ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಲಿಖಿತ ಲಿಖಿತ ಪರೀಕ್ಷೆಗೆ ಹಾಜರಾಗಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.