KPSCಯಿಂದ ಪಶು ಸಂಗೋಪನೆ & ಮೀನುಗಾರಿಕೆ ಇಲಾಖೆಯಲ್ಲಿನ ಹುದ್ದೆಗಳ ಪರೀಕ್ಷೆಯ ದಿನಾಂಕ ಮುಂದೂಡಲಾಗಿದೆ..| ಈ ಕುರಿತು ಮಾಹಿತಿ ನಿಮಗಾಗಿ

KPSCಯಿಂದ ಪಶು ಸಂಗೋಪನೆ & ಮೀನುಗಾರಿಕೆ ಇಲಾಖೆಯಲ್ಲಿನ ಹುದ್ದೆಗಳ ಪರೀಕ್ಷೆಯ ದಿನಾಂಕ ಮುಂದೂಡಲಾಗಿದೆ..| ಈ ಕುರಿತು ಮಾಹಿತಿ ನಿಮಗಾಗಿ
Published by Bhagya R K
02 ಏಪ್ರಿಲ್ 2025 Others

ಕರ್ನಾಟಕ ಲೋಕಸೇವಾ ಆಯೋಗವು ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ 29/07/2024 ರಂದು ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 

                       ಪಶು ಸಂಗೋಪನೆ & ಮೀನುಗಾರಿಕೆ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದ 400 (342+58 Backlog) ಪಶುವೈದ್ಯಾಧಿಕಾರಿ (Veterinary Officers) ಹುದ್ದೆಗಳ ನೇಮಕಾತಿಗೆ 2025 ಏಪ್ರಿಲ್-08 & 09 ರಂದು ನಡೆಸಲು ಉದ್ದೇಶಿಸಲಾಗಿದ್ದ ಕನ್ನಡ ಭಾಷಾ & ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಡಳಿತಾತ್ಮಕ ಕಾರಣಗಳಿಂದ ಇದೀಗ ಮುಂದೂಡಿ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.!!

ಹುದ್ದೆಗಳ ವಿವರ :  
ಪಶುವೈದ್ಯಾಧಿಕಾರಿ | 400 (342+58 Backlog) |

ಪ್ರಮುಖ ಮಾಹಿತಿ :  
ಪಶು ಸಂಗೋಪನೆ & ಮೀನುಗಾರಿಕೆ ಇಲಾಖೆ ಪ್ರಕಟಿಸಿದ ಅಧಿಕೃತ ಮಾಹಿತಿಯಂತೆ, ಈ ಹುದ್ದೆಗಳ ಕನ್ನಡ ಭಾಷಾ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು ನಿರ್ದಿಷ್ಟ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿವೆ. ಹೊಸ ದಿನಾಂಕಗಳನ್ನು ಬಹುತೇಕ ಶೀಘ್ರದಲ್ಲೇ ಪ್ರಕಟಿಸಲಾಗುವುದು.

ನೀವು ಮಾಡಬೇಕಾದುದು : 
- ಅಧಿಕೃತ ವೆಬ್‌ಸೈಟ್‌ನ ಮೇಲೆ ನೋಟಿಫಿಕೇಶನ್ ನಿರೀಕ್ಷಿಸಿ.
- ಹೊಸ ದಿನಾಂಕಗಳು ಪ್ರಕಟಗೊಂಡಾಗ ತಕ್ಷಣವೇ ಸಿದ್ಧಗೊಳ್ಳಿ.
- ನಿಮ್ಮ ಅಧ್ಯಯನ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿ.

ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಯಾವುದೇ ಗೊಂದಲಕ್ಕೀಡಾಗದೆ ಅಧಿಕೃತ ಮಾಹಿತಿಯನ್ನು ಮಾತ್ರ ಅವಲಂಬಿಸಬೇಕು. ಪರೀಕ್ಷೆಯ ಹೊಸ ದಿನಾಂಕ ಪ್ರಕಟವಾದ ತಕ್ಷಣವೇ ಮಾಹಿತಿ ನೀಡಲಾಗುವುದು.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.