ಕರ್ನಾಟಕ ಲೋಕಸೇವಾ ಆಯೋಗದಿಂದ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಎರಡನೇ ಹೆಚ್ಚುವರಿ ಆಯ್ಕೆಪಟ್ಟಿ ಇದೀಗ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದಿಂದ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಎರಡನೇ ಹೆಚ್ಚುವರಿ ಆಯ್ಕೆಪಟ್ಟಿ ಇದೀಗ ಪ್ರಕಟ
Published by Bhagya R K
26 ಮಾರ್ಚ್ 2025 KPSC

ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 14 ಮೇ 2020 ರಂದು ಅಧಿಸೂಚಿಸಿದ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ-1122 ಕಿರಿಯ ಸಹಾಯಕರು / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 09-01-2023ರಂದು ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿತ್ತು, ಹಾಗೂ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿ ದಿನಾಂಕ: 14-03-2023 ರಂದು ಮತ್ತು ನಂತರದ ಹೆಚ್ಚುವರಿ ಪಟ್ಟಿಯನ್ನು ದಿನಾಂಕ: 05-05-2023 ಮತ್ತು 11-06-2024 ರಂದು ಪ್ರಕಟಿಸಲಾಗಿತ್ತು.

ಹೊಸ ಹೆಚ್ಚುವರಿ ಆಯ್ಕೆಪಟ್ಟಿ 2025 :
                        ಪ್ರಸ್ತುತ, 11 ಇಲಾಖೆಗಳಿಂದ ಸ್ವೀಕೃತವಾದ ಪ್ರಸ್ತಾವನೆಯ ಕಾಲಾನುಕ್ರಮದನುಸಾರ 134 ಹುದ್ದೆಗಳ ಎರಡನೇ ಹೆಚ್ಚುವರಿ ಆಯ್ಕೆಪಟ್ಟಿಯನ್ನು KPSC ಇಲಾಖೆಯು ಪ್ರಕಟಿಸಿದೆ. ಈ ಆಯ್ಕೆಪಟ್ಟಿಯು ದಿನಾಂಕ: 25-03-2025 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

ಅಧಿಸೂಚನೆ ವಿವರಗಳು :
- ಅಧಿಸೂಚನೆ ಸಂಖ್ಯೆ: (3)800/2019-20/22, ದಿನಾಂಕ: 29-02-2020
- ಸೇರ್ಪಡೆ ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ/ಇ(3)4(A)/2020-21, ದಿನಾಂಕ: 14-05-2020

ಹುದ್ದೆಗಳ ವಿವರ :
- ಹುದ್ದೆಗಳ ಒಟ್ಟು ಸಂಖ್ಯೆ: 134 (2ನೇ ಹೆಚ್ಚುವರಿ ಆಯ್ಕೆಪಟ್ಟಿ)
- ಹುದ್ದೆಯ ಹೆಸರು: ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರು
- ಆಯ್ಕೆ ಪ್ರಕ್ರಿಯೆ: ಮೌಲ್ಯಮಾಪನದ ಕಟ್‌ಆಫ್ ಅಂಕಗಳ ಆಧಾರದ ಮೇಲೆ

ಅಧಿಕೃತ ವೆಬ್‌ಸೈಟ್ :
ಅಭ್ಯರ್ಥಿಗಳು ಆಯ್ಕೆಪಟ್ಟಿಯ ಸಂಪೂರ್ಣ ಮಾಹಿತಿಯನ್ನು ಮತ್ತು ಕಟ್‌ಆಫ್ ಅಂಕಗಳ ಪಟ್ಟಿಯನ್ನು https://kpsc.kar.nic.in/ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.

ಈ ಹೆಚ್ಚುವರಿ ಆಯ್ಕೆಪಟ್ಟಿಯು ಹಲವಾರು ಅಭ್ಯರ್ಥಿಗಳಿಗೆ ಹೊಸ ಅವಕಾಶವನ್ನು ನೀಡಲಿದೆ. ಆಯ್ಕೆಗೊಂಡ ಅಭ್ಯರ್ಥಿಗಳು ತಮ್ಮ ಕಡೆಯ ಹಂತದ ದಾಖಲೆ ಪರಿಶೀಲನೆಗೆ ಸಿದ್ಧವಾಗಬೇಕು.

ಹೆಚ್ಚುವರಿ ಮಾಹಿತಿಗಾಗಿ KPSC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ!

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.