KPSC ಯಿಂದ ಸಾರಿಗೆ ಇಲಾಖೆಯಲ್ಲಿನ ಮೋಟಾರ್ ವಾಹನ ನಿರೀಕ್ಷಕರು ಹುದ್ದೆಗಳ ಪರೀಕ್ಷಾ ಪ್ರವೇಶ ಪತ್ರಗಳು ಇದೀಗ ಪ್ರಕಟ | ಈ ಕುರಿತು ಮಾಹಿತಿ ನಿಮಗಾಗಿ

KPSC ಯಿಂದ ಸಾರಿಗೆ ಇಲಾಖೆಯಲ್ಲಿನ ಮೋಟಾರ್ ವಾಹನ ನಿರೀಕ್ಷಕರು ಹುದ್ದೆಗಳ ಪರೀಕ್ಷಾ ಪ್ರವೇಶ ಪತ್ರಗಳು ಇದೀಗ ಪ್ರಕಟ | ಈ ಕುರಿತು ಮಾಹಿತಿ ನಿಮಗಾಗಿ
Published by Bhagya R K
08 ಮೇ 2025 Others

ಕರ್ನಾಟಕ ಲೋಕಸೇವಾ ಆಯೋಗವು (KPSC) ದಿನಾಂಕ 14-03-2024ರಂದು ಅಧಿಸೂಚಿಸಿದ ಸಾರಿಗೆ ಇಲಾಖೆಯ ಗ್ರೂಪ್ "ಸಿ" ವರ್ಗದ ಮೋಟಾರು ವಾಹನ ನಿರೀಕ್ಷಕರು (70 ಹುದ್ದೆಗಳು) ಉಳಿಕೆ ಮೂಲ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

                 ಅಭ್ಯರ್ಥಿಗಳು ತಮ್ಮ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ದಿನಾಂಕ: 13-05-2025 ಮತ್ತು ಸ್ಪರ್ಧಾತ್ಮಕ ಪರೀಕ್ಷೆಯು ದಿನಾಂಕ: 14-05-2025 ರಂದು ನಡೆಯಲಿದ್ದು, ಕರ್ನಾಟಕ ಲೋಕಸೇವಾ ಆಯೋಗ(KPSC)ವು ಇದೀಗ ಪರೀಕ್ಷೆಯ ಪ್ರವೇಶ ಪತ್ರವನ್ನು ದಿನಾಂಕ : 06-05-2025ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಪ್ರವೇಶ ಪತ್ರವನ್ನು ಆಯೋಗದ ಅಧಿಕೃತ ವೆಬ್‌ಸೈಟ್ [http://kpsc.kar.in](http://kpsc.kar.in) ನಿಂದ ಪಡೆದುಕೊಳ್ಳಬಹುದಾಗಿದೆ. ಪರೀಕ್ಷೆಗಳ ಸಂಪೂರ್ಣ ವೇಳಾಪಟ್ಟಿಯು ಕೂಡ ಆಯೋಗದ ಅಂತರ್ಜಾಲದಲ್ಲಿ ಲಭ್ಯವಿದೆ.

ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಸಮಯಕ್ಕೆ ಪೂರ್ವದಲ್ಲಿ ಡೌನ್‌ಲೋಡ್ ಮಾಡಿಕೊಂಡು, ಪರೀಕ್ಷೆಗೆ ಹಾಜರಾಗಲು ಸಕಾಲದಲ್ಲಿ ತಯಾರಾಗಬೇಕು ಎಂದು ಆಯೋಗವು ತಿಳಿಸಿದೆ.

ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ: [http://kpsc.kar.in](http://kpsc.kar.in)

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.