ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ನೇಮಕಾತಿಗಳ ಆಯ್ಕೆಪಟ್ಟಿಗಳು ಇದೀಗ ಕಟ್ ಆಫ್ ಅಂಕಗಳೊಂದಿಗೆ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ನೇಮಕಾತಿಗಳ ಆಯ್ಕೆಪಟ್ಟಿಗಳು ಇದೀಗ ಕಟ್ ಆಫ್ ಅಂಕಗಳೊಂದಿಗೆ ಪ್ರಕಟ
Published by Basavaraj Halli
16 ಡಿಸೆಂಬರ್ 2021 KPSC

ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ದಿನಾಂಕಗಳಂದು ಅಧಿಸೂಚಿಸಿದ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಕಟ್ ಆಫ್ ಅಂಕಗಳನ್ನು ದಿನಾಂಕ 15 ಡಿಸೆಂಬರ್ 2021 ರಂದು ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದ್ದು, ಅವುಗಳ ವಿವರ ಈ ಕೆಳಕಂಡಂತೆ ಇರುತ್ತದೆ. 
* ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಜಿಲ್ಲಾ ವ್ಯವಸ್ಥಾಪಕರು ಗ್ರೇಡ್ - ಎ 
* ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಜಿಲ್ಲಾ ವ್ಯವಸ್ಥಾಪಕರು ಗ್ರೇಡ್ - ಬಿ
* ಕರ್ನಾಟಕ ಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ತಾಲ್ಲೂಕು ಅಭಿವೃದ್ಧಿ ಅಧಿಕಾರಿ
* ಜಲಸಂಪನ್ಮೂಲ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು ಡಿವಿಷನ್ -1 ( ಮೆಕ್ಯಾನಿಕಲ್ ) 
* ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿ ಸಹಾಯಕ ನಿರ್ದೇಶಕರು 
* ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿನ ಸಹಾಯಕ ನಿರ್ದೇಶಕರು / ಪತ್ರಾಂಕಿತ ವ್ಯವಸ್ಥಾಪಕರು / ವ್ಯವಸ್ಥಾಪಕರು ರವೀಂದ್ರ ಕಲಾಕ್ಷೇತ್ರ 
* ಔಷಧ ನಿಯಂತ್ರಣ ಇಲಾಖೆಯಲ್ಲಿನ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು (ಫಾರ್ಮಾಸ್ಯುಟಿಕ್ಸ್ ) 
ಈ ತಾತ್ಕಾಲಿಕ ಆಯ್ಕೆ ಆಯ್ಕೆ ಪಠ್ಯಗಳಲ್ಲಿ ಏನಾದರೂ ಆಕ್ಷೇಪಣೆ ಇದ್ದಲ್ಲಿ ದಿನಾಂಕ ಆಯ್ಕೆಪಟ್ಟಿ ಪ್ರಕಟಗೊಂಡ 7 ದಿನಗಳೊಳಗಾಗಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿರುತ್ತದೆ. 
ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಬೇಕಾದ ವಿಳಾಸ : ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560001 

Discussion & Comments (1)

Have a query or feedback about this update?

H
Hanumanthappa Cr
17 ಡಿಸೆಂಬರ್ 2021, 02:27 ಅಪರಾಹ್ನ

Ok

Stay Updated with KPSC Vaani

Get instant notifications for exam alerts, question papers, syllabus, and results directly on your phone.