ಕರ್ನಾಟಕ ರಾಜ್ಯ ಲೋಕಸೇವಾ ಆಯೋಗ (KPSC) ದಿಂದ ವಿವಿಧ ನ್ಯಾಯಾಲಯದಲ್ಲಿ ಖಾಲಿ ಇರುವ FDA ಪರೀಕ್ಷೆಯ ಪರಿಷ್ಕೃತ ಕೀ ಉತ್ತರಗಳು ಪ್ರಕಟ
16 ಸೆಪ್ಟೆಂಬರ್ 2019
KPSC
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ(KPSC) ದಿನಾಂಕ 09-06-2019 ರಂದು ನಡೆದ ವಿವಿಧ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರು ಹುದ್ದೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆ-III ಹಾಗೂ ಸಾಮಾನ್ಯ ಕನ್ನಡ ಪತ್ರಿಕೆ-II ಮತ್ತು ಸಾಮಾನ್ಯ ಇಂಗ್ಲಿಷ್ ಪತ್ರಿಕೆ-II ಗಳಿಗೆ ಸಂಬಂಧಿಸಿದಂತೆ ದಿನಾಂಕ 25-06-2019 ರಂದು ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು. ಹಾಗೂ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಕೀ ಉತ್ತರಗಳಲ್ಲಿ ಏನಾದರೂ ಆಕ್ಷೇಪಣೆಗಳಿದ್ದಲ್ಲಿ, ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆಕ್ಷೇಪಣಾ ಅರ್ಜಿಗಳನ್ನು ಪರಿಶೀಲಿಸಿ ವಿಷಯ ತಜ್ಞರುಗಳ ಸಮಿತಿಯ ಅಭಿಪ್ರಾಯದಂತೆ ಪರಿಷ್ಕೃತವಾದ ಕೀ ಉತ್ತರಗಳನ್ನು KPSC ಯು ಇಂದು ಪ್ರಕಟಿಸಿದೆ.
* ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಭ್ಯರ್ಥಿಗಳು ಪರಿಷ್ಕೃತ ಹಾಗೂ ಅಂತಿಮ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಂಡು ಪರೀಕ್ಷಿಸಬಹುದಾಗಿದೆ.