ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತವು ಸಹಾಯಕ ನೆಡುತೋಪು ಅಧೀಕ್ಷಕ ಹಾಗೂ ಅರಣ್ಯ ರಕ್ಷಕ ಹುದ್ದೆಗಳಿಗೆ ದೈಹಿಕ ಪರೀಕ್ಷೆಗೆ ಅಭ್ಯರ್ಥಿಗಳ ಪಟ್ಟಿ ಹಾಗೂ ಪ್ರವೇಶ ಪತ್ರಗಳನ್ನು ಬಿಡುಗಡೆಗೊಳಿಸಿದೆ

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತವು ಸಹಾಯಕ ನೆಡುತೋಪು ಅಧೀಕ್ಷಕ ಹಾಗೂ ಅರಣ್ಯ ರಕ್ಷಕ ಹುದ್ದೆಗಳಿಗೆ ದೈಹಿಕ ಪರೀಕ್ಷೆಗೆ ಅಭ್ಯರ್ಥಿಗಳ ಪಟ್ಟಿ ಹಾಗೂ ಪ್ರವೇಶ ಪತ್ರಗಳನ್ನು ಬಿಡುಗಡೆಗೊಳಿಸಿದೆ
19 ಸೆಪ್ಟೆಂಬರ್ 2019 Karnataka Forest Department
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿ 23 ಸಹಾಯಕ ನೆಡುತೋಪು ಅಧೀಕ್ಷಕ ಹಾಗೂ 22 ಅರಣ್ಯ ರಕ್ಷಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಅರ್ಜಿಗಳನ್ನು ಸ್ವೀಕರಿಸಿ ಆಗಿದೆ. ಪ್ರಸ್ತುತ ಅರ್ಜಿ ಸ್ವೀಕರಿಸಲಾದ ಅಭ್ಯರ್ಥಿಗಳಿಗೆ ದೇಹದಾರ್ಡ್ಯತೆ, ದೈಹಿಕ ತಾಳ್ವಿಕೆ ಹಾಗೂ ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗೆ ಮೆರಿಟ್ ಹಾಗೂ ರೋಸ್ಟರ್ ಬಿಂದುಗಳಂತೆ ಅರ್ಹತೆ ಪಡೆದ ಅಭ್ಯರ್ಥಿಗಳ 1:20 ಪಟ್ಟಿಯನ್ನು ನಿಗಮವು ಈಗಾಗಲೇ ಪ್ರಕಟಿಸಿದೆ. ಅರಣ್ಯ ರಕ್ಷಕ ಹುದ್ದೆಗಳಿಗೆ ದಿನಾಂಕ 23/09/2019 ರಂದು ಹಾಗೂ ಸಹಾಯಕ ನೆಡುತೋಪು ಅಧೀಕ್ಷಕ ಹುದ್ದೆಗಳಿಗೆ ದಿನಾಂಕ 25/09/2019 ರಂದು ದೈಹಿಕ ದಾರ್ಢ್ಯತೆ ಹಾಗೂ ದೈಹಿಕ ತಾಳ್ವಿಕೆ ಪರೀಕ್ಷೆಯನ್ನು ನಡೆಸಲು ಇಲಾಖೆಯು ತೀರ್ಮಾನ ಕೈಗೊಂಡಿದೆ. ಸದರಿ 1:20 ರಂತೆ ಪಟ್ಟಿಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ನಿಗಮದ ಅಧಿಕೃತ ಜಾಲತಾಣದಿಂದ ತಮ್ಮ ಪರೀಕ್ಷಾ ಪತ್ರಗಳನ್ನು ಡೌನ್ಲೋಡ್ ಮಾಡಿಕೊಂಡು ಸರ್ಕಾರಿ ಗುರುತಿನ ಚೀಟಿಯೊಂದಿಗೆ ಖುದ್ದು ನಿಗದಿಪಡಿಸಿದ ದಿನಾಂಕಗಳಂದು ದೈಹಿಕ ಪರೀಕ್ಷೆಗೆ ಹಾಜರಾಗಲು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 1:20 ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿ ಹಾಗೂ ಅರ್ಹತೆ ಪಡೆದ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗೆ ನೀಡಿರುವ ಲಿಂಕ್ ಗಳನ್ನು ಬಳಸಬಹುದಾಗಿದೆ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಭಾರತದ ಸಂವಿಧಾನದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.