ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ

ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Published by Bhagya R K
26 ಏಪ್ರಿಲ್ 2025 Others

ಕರ್ನಾಟಕ ಕಂದಾಯ ಇಲಾಖೆ ತನ್ನ 2025ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿಯಲ್ಲಿ ಒಟ್ಟು 06 ಹುದ್ದೆಗಳಿವೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ, ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 

ಇಲಾಖೆ ಹೆಸರು : ಕರ್ನಾಟಕ ಕಂದಾಯ ಇಲಾಖೆ  
ಒಟ್ಟು ಹುದ್ದೆಗಳ ಸಂಖ್ಯೆ : 06  
ಉದ್ಯೋಗ ಸ್ಥಳ : ಬೆಂಗಳೂರು – ಕರ್ನಾಟಕ  
ಅಪ್ಲಿಕೇಶನ್ ಮೋಡ್ : ಆಫ್‌ಲೈನ್

ಹುದ್ದೆಗಳ ವಿವರ :
- ಸಹಾಯಕ ನಿಯಂತ್ರಕ – 01  
- ಲೆಕ್ಕಪರಿಶೋಧನಾ ಅಧಿಕಾರಿ – 01  
- ಲೆಕ್ಕಪತ್ರ ಅಧೀಕ್ಷಕರು – 01  
- ಕಾನೂನು ಅಧಿಕಾರಿ ಮತ್ತು ಕಾನೂನು ಸಲಹೆಗಾರ – 01  
- ಆಪ್ತ ಕಾರ್ಯದರ್ಶಿ – 01  
- ಐಟಿ ಸಿಬ್ಬಂದಿ-ll, ಜೂನಿಯರ್ ಪ್ರೋಗ್ರಾಮರ್ ಮತ್ತು ನೆಟ್‌ವರ್ಕಿಂಗ್ ಮ್ಯಾನೇಜರ್ – 01  

ಶೈಕ್ಷಣಿಕ ಅರ್ಹತೆ :
- ಸಹಾಯಕ ನಿಯಂತ್ರಕ / ಲೆಕ್ಕಪರಿಶೋಧನಾ ಅಧಿಕಾರಿ / ಲೆಕ್ಕಪತ್ರ ಅಧೀಕ್ಷಕರು – ಬಿ.ಕಾಂ, ಎಂ.ಕಾಂ  
- ಕಾನೂನು ಅಧಿಕಾರಿ ಮತ್ತು ಕಾನೂನು ಸಲಹೆಗಾರ – ಎಲ್‌ಎಲ್‌ಬಿ ಅಥವಾ ಎಲ್‌ಎಲ್‌ಎಂ  
- ಆಪ್ತ ಕಾರ್ಯದರ್ಶಿ – ಯಾವುದೇ ಪದವಿ  
- ಐಟಿ ಸಿಬ್ಬಂದಿ-ll ಮತ್ತು ಇತರರು – ಬಿಇ (ಕಂಪ್ಯೂಟರ್, ಐಟಿ)

ಸಂಬಳದ ವಿವರ : 
ಪ್ರತಿ ತಿಂಗಳು ರೂ. 35,000/- ರಿಂದ ರೂ. 75,000/- ವರೆಗೆ ವೇತನವನ್ನು ನೀಡಲಾಗುತ್ತದೆ.

ವಯೋಮಿತಿ :
ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ನಿರ್ದಿಷ್ಟ ವಯೋಮಿತಿ ಇರುತ್ತದೆ.

ಆಯ್ಕೆ ವಿಧಾನ :
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ :
ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ ಕಚೇರಿ, ಪೋಡಿಯಂ ಬ್ಲಾಕ್, 3 ನೇ ಮಹಡಿ, ವಿಶ್ವೇಶ್ವರಯ್ಯ ಟವರ್, ಬೆಂಗಳೂರು - 560001

ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.  
2. ಸೂಚನೆಯನ್ನು ಸಂಪೂರ್ಣ ಓದಿ.  
3. ಅಪ್ಲಿಕೇಶನ್ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.  
4. ಅಗತ್ಯವಿದ್ದರೆ ಶುಲ್ಕ ಪಾವತಿ ಮಾಡಿ.  
5. ಸಂಬಂಧಿಸಿದ ದಾಖಲೆಗಳು, ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.  
6. ಫಾರ್ಮ್ ಅನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.  
7. ಮುದ್ರಿಸಿ, ಭದ್ರವಾಗಿ ಇಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು :
- ಅರ್ಜಿಗಳನ್ನು ಸಲ್ಲಿಸಲು ಪ್ರಾರಂಭ ದಿನಾಂಕ : 24 ಏಪ್ರಿಲ್ 2025  
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05 ಮೇ 2025  

ಹೆಚ್ಚಿನ ಮಾಹಿತಿಗೆ ಹಾಗೂ ಅಧಿಕೃತ ಅಧಿಸೂಚನೆಗೆ ಭೇಟಿ ನೀಡಿ: [ಕರ್ನಾಟಕ ಕಂದಾಯ ಇಲಾಖೆ ಅಧಿಕೃತ ವೆಬ್‌ಸೈಟ್]

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.