Others 16 ಸೆಪ್ಟೆಂಬರ್ 2025 1 year ago
Published by Bhagya R K

ಕರ್ನಾಟಕ ಜೀವವೈವಿಧ್ಯ ಮಂಡಳಿ ನೇಮಕಾತಿ 2025: ಸಲಹೆಗಾರ (ಸಸ್ಯಶಾಸ್ತ್ರ) ಹುದ್ದೆಗೆ ಅರ್ಜಿ ಆಹ್ವಾನ

ಕರ್ನಾಟಕ ಜೀವವೈವಿಧ್ಯ ಮಂಡಳಿ ನೇಮಕಾತಿ 2025: ಸಲಹೆಗಾರ (ಸಸ್ಯಶಾಸ್ತ್ರ) ಹುದ್ದೆಗೆ ಅರ್ಜಿ ಆಹ್ವಾನ

ಕರ್ನಾಟಕ ಜೀವವೈವಿಧ್ಯ ಮಂಡಳಿ 2025 ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದು, ಸಲಹೆಗಾರ (ಸಸ್ಯಶಾಸ್ತ್ರ) ಹುದ್ದೆಯ ಒಂದು ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆ ಬೆಂಗಳೂರಲ್ಲಿ ಲಭ್ಯವಿದ್ದು, ಸರ್ಕಾರೀ ಸೇವೆಗೆ ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದೆ. ಅರ್ಜಿದಾರರು 2025ರ ಸೆಪ್ಟೆಂಬರ್ 20ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರಗಳು : 
ಸಂಸ್ಥೆ ಹೆಸರು: ಕರ್ನಾಟಕ ಜೀವವೈವಿಧ್ಯ ಮಂಡಳಿ 
ಹುದ್ದೆಗಳ ಸಂಖ್ಯೆ: 01
ಹುದ್ದೆಯ ಹೆಸರು: ಸಲಹೆಗಾರ (ಸಸ್ಯಶಾಸ್ತ್ರ)
ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
ವೇತನ: ಪ್ರತಿ ತಿಂಗಳು ₹60,000/-

ಅರ್ಹತೆಗಳು : 
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Ph.D (ಸಸ್ಯಶಾಸ್ತ್ರ) ಪದವಿ ಪಡೆದಿರಬೇಕು.

ವಯೋಮಿತಿ : 
ಗರಿಷ್ಠ ವಯಸ್ಸು: 50 ವರ್ಷ (ಮಂಡಳಿಯ ನಿಯಮಾನುಸಾರ ಸಡಿಲಿಕೆ ಅನ್ವಯವಾಗುತ್ತದೆ).

ಆಯ್ಕೆ ವಿಧಾನ : 
- ಅರ್ಹತೆ
- ಅನುಭವ
- ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ : 
- ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳ ಸ್ವಯಂ-ಪ್ರಮಾಣಿತ ಪ್ರತಿಗಳನ್ನು ಸೇರಿಸಿ, ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
ವಿಳಾಸ : 
Administrative Officer, Karnataka Biodiversity Board, 
Ground Floor, Vanavikas, 18th Cross, Malleshwaram, 
Bengaluru – 560003

ಅರ್ಜಿಯನ್ನು ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಇತರೆ ಸೇವೆಗಳ ಮೂಲಕ ಕಳುಹಿಸಬೇಕು.

ಪ್ರಮುಖ ದಿನಾಂಕಗಳು : 
- ಅರ್ಜಿ ಪ್ರಾರಂಭ ದಿನಾಂಕ: 15-09-2025
- ಅಂತಿಮ ದಿನಾಂಕ: 20-09-2025

👉 ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ, ತಮ್ಮ ಅರ್ಹತೆ ದೃಢಪಡಿಸಿಕೊಂಡ ನಂತರವೇ ಅರ್ಜಿ ಸಲ್ಲಿಸುವುದು ಸೂಕ್ತ.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.