ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ GPSTR ಪರೀಕ್ಷೆಯ ತಾತ್ಕಾಲಿಕ ಪಟ್ಟಿಗಳು ಇದೀಗ ಪ್ರಕಟ | ಈ ಕುರಿತ ಮಾಹಿತಿ ನಿಮಗಾಗಿ

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ GPSTR ಪರೀಕ್ಷೆಯ ತಾತ್ಕಾಲಿಕ ಪಟ್ಟಿಗಳು ಇದೀಗ ಪ್ರಕಟ | ಈ ಕುರಿತ ಮಾಹಿತಿ ನಿಮಗಾಗಿ
Published by Basavaraj Halli
28 ಸೆಪ್ಟೆಂಬರ್ 2022 KTET & GPSTR

ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಇತ್ತೀಚೆಗೆ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಯಶಸ್ವಿಯಾಗಿ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಅಂಕಗಳನ್ನು ಕೂಡ ಪ್ರಕಟಿಸಿತ್ತು, ಸದರಿ ನೇಮಕಾತಿಗೆ ಸಂಬಂಧಿಸಿದಂತೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ ಒಂದು ಅನುಪಾತ ಎರಡರ (1:2) ಅಭ್ಯರ್ಥಿಗಳ ಬೆಂಗಳೂರು ವಿಭಾಗದ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ಇದೀಗ ಪ್ರಕಟಿಸಿದ್ದು, ಬೆಳಗಾವಿ, ಮೈಸೂರು ಮತ್ತು ಕಲಬುರಗಿ ವಿಭಾಗದ ಪಟ್ಟಿಗಳನ್ನು ಕ್ರಮವಾಗಿ ಈ ಕೆಳಗೆ ಕಂಡಂತೆ ಪ್ರಕಟಿಸುವುದಾಗಿ ಇಲಾಖಾ ಜಾಲತಾಣದಲ್ಲಿ ಪ್ರಕಟನೆಯನ್ನು ಹೊರಡಿಸಲಾಗಿರುತ್ತದೆ. 

* ಬೆಳಗಾವಿ ವಿಭಾಗ : 28 ಸೆಪ್ಟಂಬರ್ 2022 
* ಮೈಸೂರು ವಿಭಾಗ : 29 ಸೆಪ್ಟಂಬರ್ 2022 
* ಕಲಬುರಗಿ ವಿಭಾಗ : 29 ಸೆಪ್ಟಂಬರ್ 2022

- ಅಭ್ಯರ್ಥಿಗಳು 1:2 ರ ಪರಿಶೀಲನಾ ಪಟ್ಟಿ ಹಾಗೂ ಇಲಾಖಾ ಪ್ರಕಟಣೆಯನ್ನು ವೀಕ್ಷಿಸಲು ಈ ಕೆಳಗೆ ನೀಡಿರುವ ಲಿಂಕ್ ಗಳಿಗೆ ಭೇಟಿ ನೀಡಬಹುದು.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.