ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಕಲಬುರಗಿಯಲ್ಲಿ ಉದ್ಯೋಗ ಮೇಳ | 5000 ಕ್ಕೂ ಅಧಿಕ ಹುದ್ದೆಗಳ ನೇಮಕ | ಆಸಕ್ತರು ಭಾಗವಹಿಸಿ

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಕಲಬುರಗಿಯಲ್ಲಿ ಉದ್ಯೋಗ ಮೇಳ | 5000 ಕ್ಕೂ ಅಧಿಕ ಹುದ್ದೆಗಳ ನೇಮಕ | ಆಸಕ್ತರು ಭಾಗವಹಿಸಿ
Published by Savita Halli
05 ಫೆಬ್ರವರಿ 2022 Others

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಫೆಬ್ರವರಿ 12ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಕಲಬುರಗಿ ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

* ಬಿ.ಇ, ಬಿ.ಕಾಂ, ಬಿ.ಎಸ್ಸಿ, ಬಿ.ಎ, ಬಿಸಿಎ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೋಮಾ ಮತ್ತು ಐಟಿಐ ವಿದ್ಯಾರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಬಹುದು.

* ಪ್ರಮುಖ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಲಿದ್ದು, 5 ಸಾವಿರಕ್ಕೂ ಅಧಿಕ ಉದ್ಯೋಗಗಳ ನೇಮಕಾತಿಯನ್ನು ನಡೆಸಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಶೈಕ್ಷಣಿಕ ದಾಖಲೆಗಳ ಜೆರಾಕ್ಸ್ ಪ್ರತಿ, 2 ಫೋಟೋ, ಆಧಾರ್ ಕಾರ್ಡ್ ಹಾಗೂ ಐದು ಸೆಟ್ ಸ್ವವಿವರದ ಅರ್ಜಿಗಳನ್ನು ತೆಗೆದುಕೊಂಡು ಹೋಗಬೇಕಿರುತ್ತದೆ. ಅರ್ಹತೆಗಳು, ವಯೋಮಿತಿ, ವೇತನ ಮತ್ತು ಉದ್ಯೋಗದ ಸಂಪೂರ್ಣ ವಿವರಗಳನ್ನು ಸಂದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಪಡೆದುಕೊಳ್ಳಬಹುದು. 

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 8277895931 

ಉದ್ಯೋಗ ಮೇಳ ನಡೆಯುವ ಸ್ಥಳ : ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯ, ಐವನ್ನ-ಎ-ಶಾಹಿ, ಶಂಭೋಜಿನಲ್ಲಿ, ಕಲಬುರ್ಗಿ-585102 ಆಸಕ್ತರು ಮತ್ತು ಮೇಳದಲ್ಲಿ ಭಾಗವಹಿಸಲು ಇಚ್ಚಿಸುವವರು ಕೆಳಗೆ ನೀಡಿರುವ ಲಿಂಕ್ ಬಳಸಿ ತಮ್ಮ ಹೆಸರನ್ನು ಈ ಕೂಡಲೇ ನೊಂದಾಯಿಸಿಕೊಳ್ಳಿ. ಅಭ್ಯರ್ಥಿಗಳು ತಮ್ಮ ರೇಸುಮೆ (Resume)ಯನ್ನು ksdc.recruitment@gmail.com ವಿಳಾಸಕ್ಕೆ ಮೇಲ್ ಕೂಡ ಮಾಡಬಹುದು.

Discussion & Comments (2)

Have a query or feedback about this update?

U
User
23 ಫೆಬ್ರವರಿ 2022, 09:04 ಪೂರ್ವಾಹ್ನ

Manju s badiger at chinnikatti TQ byadgi di Haveri mo91643917

U
User
23 ಫೆಬ್ರವರಿ 2022, 09:04 ಪೂರ್ವಾಹ್ನ

Manju s badiger at chinnikatti TQ byadgi di Haveri mo91643917

Stay Updated with KPSC Vaani

Get instant notifications for exam alerts, question papers, syllabus, and results directly on your phone.