ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. SSLC, ಪಿಯುಸಿ, ಐಟಿಐ, ಡಿಪ್ಲೊಮಾ ಹಾಗೂ ಯಾವುದೇ ಪದವಿ (Degree) ಮುಗಿಸಿದ ನಿರುದ್ಯೋಗಿ ಯುವಕ-ಯುವತಿಯರು ಸಂದರ್ಶನದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿರುವಂತೆ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಜೂನ್ 5 ರಂದೇ ನೇರ ನೇಮಕಾತಿ ಪ್ರಕ್ರಿಯೆ ಮೂಲಕ ವಿವಿಧ ಕಂಪನಿಗಳಲ್ಲಿ ಉದ್ಯೋಗದ ಅವಕಾಶ ಸಿಗಲಿದೆ.
ಆಸಕ್ತ ಅಭ್ಯರ್ಥಿಗಳು ಜೂನ್ 5 ರಂದು ತಮ್ಮ ಎಲ್ಲಾ ಮೂಲ ದಾಖಲಾತಿಗಳು (Original Documents), ಕನಿಷ್ಠ 4 ಸೆಟ್ ಬಯೋಡಾಟಾ (Resume) ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಕಲಬುರಗಿಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಭೇಟಿ ನೀಡಿ ಸಂದರ್ಶನ ಎದುರಿಸಬಹುದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ತಕ್ಷಣವೇ ಕೆಲಸ ಗಿಟ್ಟಿಸಿಕೊಳ್ಳಲು ಇದುವೇ ಬೆಸ್ಟ್ ಚಾನ್ಸ್ ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸ್ಥಳೀಯ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. KPSCVAANI.COM ಓದುಗರು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!
ನಿಮ್ಮ ಸ್ನೇಹಿತರಲ್ಲಿ ಉದ್ಯೋಗ ಹುಡುಕುತ್ತಿರುವ ಕಲಬುರಗಿ ಭಾಗದ ಯುವಕ-ಯುವತಿಯರಿದ್ದರೆ ಈ ತಕ್ಷಣವೇ ಈ ಸುದ್ದಿಯನ್ನು ಅವರೊಂದಿಗೆ ಹಂಚಿಕೊಳ್ಳಿ!

ಉದ್ಯೋಗ ಮೇಳದ ಸಂಪೂರ್ಣ ವಿವರಗಳು :
- ಕಾರ್ಯಕ್ರಮದ ಹೆಸರು: ಮಿನಿ ಉದ್ಯೋಗ ಮೇಳ 2026 (Mini Job Fair)
- ಆಯೋಜಕರು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕಲಬುರಗಿ
- ಸಂದರ್ಶನ ನಡೆಯುವ ದಿನಾಂಕ: ಜೂನ್ 5, 2026 (ಶುಕ್ರವಾರ)
- ಸಮಯ: ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ
- ಸ್ಥಳ (Venue): ಸಹಾಯಕ ನಿರ್ದೇಶಕರ ಕಚೇರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸರ್ಕಾರಿ ಐಟಿಐ ಕಾಲೇಜು ಹಿಂಭಾಗ, ಕಲಬುರಗಿ.ಅಧಿಕೃತ ಫೋನ್ ಸಂಖ್ಯೆ08472-274846
ಎಸ್‌ಎಸ್‌ಎಲ್‌ಸಿ (SSLC), ಪಿಯುಸಿ (PUC), ಐಟಿಐ (ITI), ಡಿಪ್ಲೊಮಾ (Diploma) ಹಾಗೂ ಯಾವುದೇ ಪದವಿ (Any Degree) ತನಕ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು.
ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 30 ವರ್ಷದೊಳಗಿರಬೇಕು. (ಯುವ ಜನತೆಗೆ ಹೆಚ್ಚಿನ ಆದ್ಯತೆ ನೀಡಲು ಈ ವಯೋಮಿತಿ ನಿಗದಿಪಡಿಸಲಾಗಿದೆ).
ಉದ್ಯೋಗ ಮೇಳಕ್ಕೆ ಹೋಗುವ ಮುನ್ನ ಈ ಸಿದ್ಧತೆ ಮಾಡಿಕೊಳ್ಳಿ!
- ಬಯೋಡಾಟಾ/ರೆಸ್ಯೂಮ್ (Resume): ಕನಿಷ್ಠ 3 ರಿಂದ 4 ಸೆಟ್ ಅಪ್‌ಡೇಟೆಡ್ ರೆಸ್ಯೂಮ್‌ಗಳನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ. ಏಕೆಂದರೆ ಅಲ್ಲಿ ಒಂದಕ್ಕಿಂತ ಹೆಚ್ಚು ಕಂಪನಿಗಳು ಭಾಗವಹಿಸುವ ಸಾಧ್ಯತೆ ಇರುತ್ತದೆ.
- ಶೈಕ್ಷಣಿಕ ದಾಖಲೆಗಳು: ನಿಮ್ಮ SSLC, PUC ಅಥವಾ ಪದವಿಯ ಅಂಕಪಟ್ಟಿಗಳ (Marks Card) ಜೆರಾಕ್ಸ್ ಪ್ರತಿಗಳು ಮತ್ತು ಮೂಲ ದಾಖಲೆಗಳನ್ನು ಜೊತೆಯಲ್ಲಿಟ್ಟುಕೊಳ್ಳಿ.
- ಗುರುತಿನ ಚೀಟಿ: ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ಹಾಗೂ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋಗಳನ್ನು ಮರೆಯದೇ ತೆಗೆದುಕೊಂಡು ಹೋಗಿ.
- ಗಮನಿಸಿ: ಇದು ಉಚಿತ ಉದ್ಯೋಗ ಮೇಳವಾಗಿದ್ದು, ಯಾವುದೇ ರೀತಿಯ ಪ್ರವೇಶ ಶುಲ್ಕ ಇರುವುದಿಲ್ಲ. ಮಧ್ಯವರ್ತಿಗಳ ಆಮಿಷಕ್ಕೆ ಒಳಗಾಗಬೇಡಿ.
ಈ ಉದ್ಯೋಗ ಮೇಳದ ಕುರಿತು ಯಾವುದೇ ಹೆಚ್ಚಿನ ಮಾಹಿತಿ, ಭಾಗವಹಿಸುವ ಕಂಪನಿಗಳ ವಿವರ ಅಥವಾ ನೋಂದಣಿ ಪ್ರಕ್ರಿಯೆಯ ಬಗ್ಗೆ ಗೊಂದಲಗಳಿದ್ದರೆ, ಅಭ್ಯರ್ಥಿಗಳು ನೇರವಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬಹುದು. ಅಥವಾ ಕಚೇರಿಯ ಅಧಿಕೃತ ದೂರವಾಣಿ ಸಂಖ್ಯೆ 08472-274846 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಉದ್ಯೋಗದ ಹೊಸ ಅಧಿಸೂಚನೆಗಳು ಈಗ ನಿಮ್ಮ ಮೊಬೈಲ್‌ನಲ್ಲಿ! ಇಂದೇ 'KPSCVaani' ಆಪ್ ಡೌನ್‌ಲೋಡ್ ಮಾಡಿ.
Comments