Karnataka State Police
02 ಮೇ 2019
7 years ago
ಕರ್ನಾಟಕ ರಾಜ್ಯ ಕಾರಾಗೃಹ ಇಲಾಖೆಯ ಜೈಲರ್ ಮತ್ತು ವಾರ್ಡೆರ್ ಹುದ್ದೆಗಳ ಪರೀಕ್ಷಾ ದಿನಾಂಕ ಪ್ರಕಟ
Jailer and Warder Exam Dates
ಕರ್ನಾಟಕ ರಾಜ್ಯ ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ ಜೈಲರ್ ಮತ್ತು ವಾರ್ಡೆರ್ ಹುದ್ದೆಗಳ ನೇಮಕಾತಿಗಾಗಿ ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು ಮತ್ತು ಸಾವಿರಾರು ಅಭ್ಯರ್ಥಿಗಳು ಈಗಾಗಲೇ ಅರ್ಜಿ ಸಲ್ಲಿಸಿ ಆಗಿದೆ ಈಗ ಈ ಹುದ್ದೆಗಳಿಗೆ ನಡೆಯುವ ಲಿಖಿತ ಪರೀಕ್ಷೆಯ ದಿನಾಂಕವನ್ನು ಇಲಾಖೆಯು ನಿಗದಿಪಡಿಸಿದ್ದು ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ. ದಿನಾಂಕ 19-ಮೇ-2019 ರಂದು ಪರೀಕ್ಷೆ ನಡೆಯಲಿದ್ದು ಕರೆ ಪತ್ರಗಳನ್ನು ಶೀಘ್ರದಲ್ಲಿ ಅಪ್ಲೋಡ್ ಮಾಡಲಾಗುವುದೆಂದು ತಿಳಿಸಿದೆ.
ಈ ಪರೀಕ್ಷೆಯು ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ, ವಾರ್ಡೆರ್ ಹುದ್ದೆಗಳ ಲಿಖಿತ ಪರೀಕ್ಷೆಯು ಬೆಳಿಗ್ಗೆ 11:00 ರಿಂದ 12:30 ರವರೆಗೆ ನಡೆಯಲಿದೆ ಮತ್ತು ಜೈಲರ್ ಹುದ್ದೆಗಳಿಗೆ ಅದೇ ದಿನ ಮದ್ಯಾಹ್ನ 2:30 ರಿಂದ 4:00 ಗಂಟೆಯ ವರೆಗೆ ಪರೀಕ್ಷೆ ನಡೆಯಲಿದೆ.
Jailer and Warder Exam Dates