Loading..!

IBPS Clerk Recruitment 2026: ಅರ್ಜಿ ಸಲ್ಲಿಕೆ ಅವಧಿ ಆ.28ರವರೆಗೆ ವಿಸ್ತರಣೆ, ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಂದು ಅವಕಾಶ!
Published by: Heena Sheregar | Date:24 ಆಗಸ್ಟ್ 2026
IBPS Clerk Recruitment 2026: ಅರ್ಜಿ ಸಲ್ಲಿಕೆ ಅವಧಿ ಆ.28ರವರೆಗೆ ವಿಸ್ತರಣೆ, ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಂದು ಅವಕಾಶ!

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕಸ್ಟಮರ್ ಸರ್ವೀಸ್ ಅಸೋಸಿಯೇಟ್ (CSA / Clerk) ಹುದ್ದೆಗಳನ್ನು ಆಕಾಂಕ್ಷಿಸುತ್ತಿರುವ ಅಭ್ಯರ್ಥಿಗಳಿಗೆ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸಿಲೆಕ್ಷನ್ (IBPS) ಸುವರ್ಣಾವಕಾಶ ಕಲ್ಪಿಸಿದೆ. ತಾಂತ್ರಿಕ ತೊಂದರೆ ಅಥವಾ ಸಮಯದ ಅಭಾವದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಆಗಸ್ಟ್ 28, 2026 ರವರೆಗೆ ವಿಸ್ತರಿಸಲಾಗಿದೆ. ಈ ಮೊದಲು ಅರ್ಜಿ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನವಾಗಿತ್ತು.

 

ದೇಶಾದ್ಯಂತ ಒಟ್ಟು 11 ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 11,403 ಹುದ್ದೆಗಳಭರ್ತಿಗೆ ಈ ಬೃಹತ್ ನೇಮಕಾತಿ ಅಭಿಯಾನ ನಡೆಯುತ್ತಿದ್ದು, ಕರ್ನಾಟಕದ ಅಭ್ಯರ್ಥಿಗಳಿಗೆ ಅತ್ಯಧಿಕ ಹುದ್ದೆಗಳು ಲಭ್ಯವಿವೆ.

 

ನೇಮಕಾತಿಯ ಸಮಗ್ರ ವಿವರಗಳು:

  • ನೇಮಕಾತಿ ಸಂಸ್ಥೆ: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸಿಲೆಕ್ಷನ್ (IBPS)
  • ಹುದ್ದೆಯ ಹೆಸರು: ಕಸ್ಟಮರ್ ಸರ್ವೀಸ್ ಅಸೋಸಿಯೇಟ್ (CSA) / ಬ್ಯಾಂಕ್ ಕ್ಲರ್ಕ್
  • ಒಟ್ಟು ಹುದ್ದೆಗಳು (ದೇಶಾದ್ಯಂತ): 11,403 ಹುದ್ದೆಗಳು
  • ಕರ್ನಾಟಕದಲ್ಲಿ ಲಭ್ಯವಿರುವ ಹುದ್ದೆಗಳು: 1,414 ಹುದ್ದೆಗಳು
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ಆಗಸ್ಟ್ 2026
  • ಪೂರ್ವಭಾವಿ ಪರೀಕ್ಷೆ (Prelims): ನವೆಂಬರ್ 2026 

 

 

ರಾಜ್ಯವಾರು ಹಾಗೂ ಬ್ಯಾಂಕ್‌ವಾರು ಹುದ್ದೆಗಳ ವಿವರ:

  • ಕರ್ನಾಟಕದಲ್ಲಿ ಒಟ್ಟು 1,414 ಹುದ್ದೆಗಳು ಲಭ್ಯವಿದ್ದು, ಕನ್ನಡಿಗರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಇದು ಅತ್ಯುತ್ತಮ ಅವಕಾಶವಾಗಿದೆ.
  • ಕೆನರಾ ಬ್ಯಾಂಕ್ (Canara Bank): 800 ಹುದ್ದೆಗಳು (ರಾಜ್ಯದಲ್ಲಿ ಅತ್ಯಧಿಕ)
  • ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB): 234 ಹುದ್ದೆಗಳು
  • ಇತರ ರಾಷ್ಟ್ರೀಕೃತ ಬ್ಯಾಂಕ್‌ಗಳು: ಉಳಿದ 380 ಹುದ್ದೆಗಳು

 

ಶೈಕ್ಷಣಿಕ ಅರ್ಹತೆ:

  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ (Arts, Commerce, Science, Engineering, etc.) ಪದವಿ (Bachelor's Degree) ಪೂರ್ಣಗೊಳಿಸಿರಬೇಕು.
  • ಕಂಪ್ಯೂಟರ್ ಕಾರ್ಯಾಚರಣೆಯ ಮೂಲಭೂತ ಜ್ಞಾನ ಹೊಂದಿರಬೇಕು.
  • ರಾಜ್ಯದ ಅಧಿಕೃತ ಭಾಷೆಯಾದ ಕನ್ನಡದಲ್ಲಿ ಓದಲು, ಬರೆಯಲು ಮತ್ತು ಮಾತನಾಡಲು ತಿಳದಿರಬೇಕು.

 

ವಯೋಮಿತಿ:

  • ಕನಿಷ್ಠ ವಯಸ್ಸು: 20 ವರ್ಷ
  • ಗರಿಷ್ಠ ವಯಸ್ಸು: 28 ವರ್ಷ
  • ಅಭ್ಯರ್ಥಿಗಳು 02-ಆಗಸ್ಟ್-1998 ಮತ್ತು 01-ಆಗಸ್ಟ್-2006 ರ ನಡುವೆ ಜನಿಸಿರಬೇಕು.
  • (ನಿಯಮಾನುಸಾರ SC/ST, OBC ಹಾಗೂ PwD ಅಭ್ಯರ್ಥಿಗಳಿಗೆ ವಯೋಸಡಿಕೆಯಲ್ಲಿ ವಿನಾಯಿತಿ ಇರುತ್ತದೆ).

 

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಹಂತಗಳು:

  • ಆನ್‌ಲೈನ್ ಪೂರ್ವಭಾವಿ ಪರೀಕ್ಷೆ (Prelims Exam): ನವೆಂಬರ್ 2026 ರಲ್ಲಿ ನಡೆಯಲಿದೆ.
  • ಮುಖ್ಯ ಪರೀಕ್ಷೆ (Mains Exam): ಡಿಸೆಂಬರ್ 2026 / ಜನವರಿ 2027 ರಲ್ಲಿ ನಡೆಸಲಾಗುತ್ತದೆ.
  • ದಾಖಲೆಗಳ ಪರಿಶೀಲನೆ (Document Verification): ಅಂತಿಮ ಹಂತದ ಆಯ್ಕೆ.

 

ಅರ್ಜಿ ಸಲ್ಲಿಸುವ ಹಂತಗಳು:

  • IBPS ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • "Click here for New Registration" ಆಯ್ಕೆ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಮೂಲಕ ನೋಂದಾಯಿಸಿ.
  • ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
  • ಭಾವಚಿತ್ರ, ಸಹಿ, ಎಡಗೈ ಹೆಬ್ಬೆರಳಿನ ಗುರುತು ಹಾಗೂ ಕೈಬರಹದ ಘೋಷಣೆಯನ್ನು ಅಪ್‌ಲೋಡ್ ಮಾಡಿ.
  • ಆನ್‌ಲೈನ್ ಮೂಲಕ ಶುಲ್ಕ ಪಾವತಿಸಿ, ಅರ್ಜಿಯ ಪ್ರಿಂಟ್‌ಔಟ್ ತೆಗೆದಿಟ್ಟುಕೊಳ್ಳಿ.

ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ನ್ಯೂಸ್: IBPS Clerk 11,403 ಹುದ್ದೆಗಳ ಬೃಹತ್ ನೇಮಕಾತಿ! ಕರ್ನಾಟಕದಲ್ಲೇ 1,414 ಪೋಸ್ಟ್!

Comments