KREIS/Murarji Desai/Navodaya/Adarsha
27 ನವೆಂಬರ್ 2018
7 years ago
KPSC ಯಿಂದ "ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ" ಇಲ್ಲಿ ಖಾಲಿ ಇರುವಂತಹ ಸ್ಟಾಫ್ ನರ್ಸ್ ಹುದ್ದೆಗಳ ಅರ್ಹತಾ ಪಟ್ಟಿ ಪ್ರಕಟ
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(KRIES) ಇಲ್ಲಿ ಖಾಲಿ ಇರುವಂತಹ ಸ್ಟಾಫ್ ನರ್ಸ್ ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್ಸಿ(KPSC) ವತಿಯಿಂದ ದಿನಾಂಕ 23 /06 /2017 ರಂದು ನೇಮಕಾತಿ ಆದೇಶ ಹೊರಡಿಸಲಾಗಿತ್ತು, ಹಾಗೂ ಕಳೆದ ವರ್ಷ ಅಕ್ಟೋಬರ್ ನಲ್ಲಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಪ್ರಸ್ತುತ ಈ ಹುದ್ದೆಗಳಿಗೆ 1:3 ಅನುಪಾತದಲ್ಲಿ ಅರ್ಹತಾ ಪಟ್ಟಿಯನ್ನು ಕೆಪಿಎಸ್ಸಿಯು ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅರ್ಹತಾ ಪಟ್ಟಿಯನ್ನು ವೀಕ್ಷಿಸಬಹುದು.
ಅರ್ಹತೆ ಪಡೆದ ಅಭ್ಯರ್ಥಿಗಳು ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದುದರಿಂದ ತಮ್ಮ ದಾಖಲೆಗಳನ್ನೂ ಈಗಲೇ ಸಿದ್ಧಪಡಿಸಿಕೊಳ್ಳಿ.