Others 22 ಆಗಸ್ಟ್‍ 2025 1 year ago
Published by Bhagya R K

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ನೇಮಕಾತಿ 2025 : ಜೆಆರ್‌ಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ನೇಮಕಾತಿ 2025 : ಜೆಆರ್‌ಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO)ಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏರಿಯಲ್ ಡೆಲಿವರಿ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಶ್‌ಮೆಂಟ್ (ADRDE), ಆಗ್ರಾ ಘಟಕದಲ್ಲಿ ಖಾಲಿ ಇರುವ 5 ಜೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ವಿವರ :
ಹುದ್ದೆಗಳ ಹೆಸರು: ಜೂನಿಯರ್ ರಿಸರ್ಚ್ ಫೆಲೋ (JRF)
ಒಟ್ಟು ಹುದ್ದೆಗಳು: 5
ನೇಮಕಾತಿ ವಿಧಾನ: ಸ್ವೀಕೃತ ಅರ್ಜಿ ಪರಿಶೀಲನೆ ಬಳಿಕ ಸಂದರ್ಶನದ ಮೂಲಕ ಆಯ್ಕೆ

ಹುದ್ದೆಗಳ ವಿವರಗಳು :
- ಮೆಕಾನಿಕಲ್ ಎಂಜಿನಿಯರಿಂಗ್ – 2 ಹುದ್ದೆಗಳು
- ಏರೋಸ್ಪೇಸ್ ಎಂಜಿನಿಯರಿಂಗ್ – 1 ಹುದ್ದೆ
- ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ – 1 ಹುದ್ದೆ
- ಟೆಕ್ಸ್ಟೈಲ್ ಎಂಜಿನಿಯರಿಂಗ್ – 1 ಹುದ್ದೆ

ಅರ್ಹತಾ ಮಾನದಂಡ:
ಗರಿಷ್ಠ 28 ವರ್ಷ (SC/ST/OBC ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಸಡಿಲಿಕೆ).

ಶೈಕ್ಷಣಿಕ ಅರ್ಹತೆ :
- BE/B.Tech (ಪ್ರಥಮ ದರ್ಜೆಯಲ್ಲಿ) ಮತ್ತು NET/GATE ಉತ್ತೀರ್ಣರಾಗಿರಬೇಕು ಅಥವಾ
- ME/M.Tech (ಪ್ರಥಮ ದರ್ಜೆಯಲ್ಲಿ) ಸಂಬಂಧಿತ ಶಾಖೆಯಲ್ಲಿ ಪೂರೈಸಿರಬೇಕು.
- ಎಲ್ಲಾ ವಿದ್ಯಾರ್ಹತೆಗಳು ಪ್ರಥಮ ದರ್ಜೆಯಲ್ಲಿ ಇರಬೇಕು.

ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹37,000/- ಸ್ಟೈಪೆಂಡ್ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ : 
- ಆಸಕ್ತರು ಅಧಿಕೃತ ವೆಬ್‌ಸೈಟ್ www.drdo.gov.in ನಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿಗೊಳಿಸಬೇಕು.
- ಭರ್ತಿಗೊಳಿಸಿದ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
Director, ADRDE Agra, DRDO, Post Box No. 51, Station Road, Agra Cantt – 282001
- ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಲಿಂಕ್: https://tinyurl.com/bdz7xdwu

ಆಯ್ಕೆ ಪ್ರಕ್ರಿಯೆ :
- ಅರ್ಜಿ ಪರಿಶೀಲನೆ ನಂತರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ

- ಡಿಆರ್‌ಡಿಒದಲ್ಲಿ ಸಂಶೋಧನಾ ಹುದ್ದೆಗಳಲ್ಲಿ ಕೆಲಸ ಮಾಡಲು ಬಯಸುವವರಿಗೆ ಇದು ಅತ್ಯುತ್ತಮ ಅವಕಾಶ. ಸದುಪಯೋಗಪಡಿಸಿಕೊಳ್ಳಿ!

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.