ಡಾ. ರಾಜಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವಿಸಸ್ ಸಂಸ್ಥೆಯಿಂದ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ

ಡಾ. ರಾಜಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವಿಸಸ್ ಸಂಸ್ಥೆಯಿಂದ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ
Published by Basavaraj Halli
31 ಮಾರ್ಚ್ 2021 Others
ಬೆಂಗಳೂರಿನಲ್ಲಿರುವ ಡಾ ರಾಜಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವಿಸಿಸ್ ಸಂಸ್ಥೆಯು ಐಎಎಸ್ ಪರೀಕ್ಷಾರ್ಥಿಗಳಿಗಾಗಿ ಉಚಿತ ತರಬೇತಿಗಾಗಿ ವಿದ್ಯಾರ್ಥಿ ವೇತನ ಪರೀಕ್ಷೆಯನ್ನು ನಡೆಸಲು ಯೋಜಿಸಿದೆ.
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಗುವದು. ಈ ಪರೀಕ್ಷೆಯನ್ನು ಕರ್ನಾಟಕದ ಬೆಂಗಳೂರು, ಮೈಸೂರು, ಧಾರವಾಡ, ಬೆಳಗಾವಿ, ಕಲಬುರಗಿ ಮತ್ತು ಮಂಗಳೂರು ಹಾಗೂ ಹೈದರಾಬಾದ್, ಚೆನ್ನೈ, ತಿರುವನಂತಪುರ, ದೆಹಲಿ ಹಾಗೂ ಗುಹಾವತಿಯಲ್ಲಿ ಪರೀಕ್ಷೆಗಳನ್ನು ಆಯೋಜಿಸಿದ್ದು, ಅಭ್ಯರ್ಥಿಗಳು ತಮಗೆ ಸಮೀಪದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
- ಈ ಸಂಸ್ಥೆಯಲ್ಲಿ ಉಚಿತ ಐಎಎಸ್ ತರಬೇತಿಯನ್ನು ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ದಿನಾಂಕ 20 ಏಪ್ರಿಲ್ 2021ರೊಳಗಾಗಿ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.
- ಈ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು UPSC ನಾಗರಿಕ ಸೇವೆಗಳ ಪರೀಕ್ಷೆ 2021 ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಗಾಗಿ ಈ ಸಂಸ್ಥೆಯ ಬೋಧನಾ ಶುಲ್ಕದಲ್ಲಿ ಶೇಕಡಾ 100 ವರೆಗೆ ರಿಯಾಯಿತಿ, ಕೋರ್ಸ್ ಮುಗಿಯುವವರೆಗೆ ಉಚಿತ ತರಬೇತಿ ಹಾಗೂ ವಸತಿ ಸೌಲಭ್ಯ, ಸ್ಟೈಪಂಡ್, ಆನ್ ಲೈನ್ ತರಬೇತಿ, ಟೆಸ್ಟ್ ಸರಣಿ ಸೇರಿ ವಿವಿಧ ಸೌಲಭ್ಯ ಪಡೆಯಬಹುದಾಗಿದೆ.
- ಅಭ್ಯರ್ಥಿಗಳು ಈ ಪರೀಕ್ಷೆ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಸಂಸ್ಥೆಯ ಅಧಿಕೃತ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು ಹಾಗೂ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಕೂಡಲೇ ಇಲ್ಲಿ ಕ್ಲಿಕ್ ಮಾಡಿ
Discussion & Comments (5)

Have a query or feedback about this update?

D
Dayananda H
02 ಏಪ್ರಿಲ್ 2021, 02:20 ಅಪರಾಹ್ನ

How to apply Sir free couching...

R
Ramesh Devaraj Badiger
31 ಮಾರ್ಚ್ 2021, 11:06 ಅಪರಾಹ್ನ

Sir, nanu Bcom final year student sir

R
Ramesh Devaraj Badiger
31 ಮಾರ್ಚ್ 2021, 11:06 ಅಪರಾಹ್ನ

Sir, nanu Bcom final year student sir

R
Ramesh Devaraj Badiger
31 ಮಾರ್ಚ್ 2021, 11:05 ಅಪರಾಹ್ನ

Sir nanu Bcom 5th sem student nanu application hakabahuda sir

P
Puneeth Kumar Ck
31 ಮಾರ್ಚ್ 2021, 10:57 ಅಪರಾಹ್ನ

How to apply sir free coching

Stay Updated with KPSC Vaani

Get instant notifications for exam alerts, question papers, syllabus, and results directly on your phone.