ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ ಇದೀಗ ಪ್ರಕಟ

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ ಇದೀಗ ಪ್ರಕಟ
Published by Savita Halli
18 ಜೂನ್ 2022 Karnataka State Police

ಶಿವಮೊಗ್ಗ ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ ಒಟ್ಟು 105 ( 73 ಸಿಪಿಸಿ + 24 ಮಪಿಸಿ (ನೇರ) ಮತ್ತು 11 (ಸೇವಾನಿರತ)) ನಾಗರೀಕ ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅಧಿಸೂಚನೆ ಹೋರಾಡಿಸಲಾಗಿತ್ತು. ಆದರಂತೆ ಅರ್ಜಿ ಸಲ್ಲಿಸಿದ  ಅಭ್ಯರ್ಥಿಗಳಿಗೆ ದಿ : 24.10.2021 ರಂದು ನೇರ ಅಭ್ಯರ್ಥಿಗಳಿಗೆ ಹಾಗೂ ಸೇವಾನಿರತ ಅಭ್ಯರ್ಥಿಗಳಿಗೆ  ದಿ: 21.11.2021 ರಂದು  ಲಿಖಿತ ಪರೀಕ್ಷೆಯನ್ನು ನಡೆಸಲಾಗಿರುತ್ತದೆ. 
ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ "ದೇಹದಾರ್ಡ್ಯತೆ ಮತ್ತು ಸಹಿಷ್ಣತ ಪರೀಕ್ಷೆಗಳಲ್ಲಿ, ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ತಯಾರಿಸಿ , ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇರೆಗೆ ಆಯ್ಕೆಯಾದ ಒಟ್ಟು 101 ಅಭ್ಯರ್ಥಿಗಳನ್ನು ಪೊಲೀಸ್ ನೇಮಕಾತಿ ಸಮಿತಿಯು, ಶಿವಮೊಗ್ಗ ಜಿಲ್ಲೆ ರವರ ಒಪ್ಪಿಗೆ ಪ್ರಕಾರ ಮೊದಲ ತಾತ್ಕಾಲಿಕ ಆಯ್ಕೆವಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಇದೀಗ 2021-22 ರ ನಾಗರೀಕ ಪೊಲೀಸ್ ಕಾನ್‌ಟೆಬಲ್ ನೇಮಕಾತಿಯ ಶಿವಮೊಗ್ಗ ಜಿಲ್ಲೆಯ ಎರಡನೇ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಣೆಯನ್ನು ಮಾಡಿದೆ. 
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಡೌನ್ ಲೋಡ್ ಮಾಡಿಕೊಂಡು ಆಯ್ಕೆಪಟ್ಟಿಯನ್ನು ನೋಡಬಹುದಾಗಿದೆ.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.