ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಇದೀಗ ಪ್ರಕಟ

ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಇದೀಗ ಪ್ರಕಟ
Published by Bhagya R K
20 ಮೇ 2025 Others

ಚಿಕ್ಕಮಗಳೂರು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ (DCC Bank) 27-11-2024ರಲ್ಲಿ ಅದಿಸೂಚಿಸಲಾದ ಅಸಿಸ್ಟೆಂಟ್ ಮ್ಯಾನೇಜರ್, ಫಸ್ಟ್ ಡಿವಿಷನ್ ಅಸಿಸ್ಟೆಂಟ್ (FDA), ಜೂನಿಯರ್ ಅಸಿಸ್ಟೆಂಟ್ ಹಾಗೂ ಅಟೆಂಡರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಬಹು ನಿರೀಕ್ಷಿತ ಲಿಖಿತ ಪರೀಕ್ಷೆಯ ದಿನಾಂಕ ಪ್ರಕಟವಾಗಿದೆ. ಒಟ್ಟು 85 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.

          ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2025ರ ಮೇ 24 ಮತ್ತು 25 ರಂದು ಈ ಹುದ್ದೆಗಳ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು. ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳು ತಮ್ಮ Hall Ticket ಅನ್ನು ಅಧಿಕೃತ ವೆಬ್‌ಸೈಟ್ ಅಥವಾ ಕೆಳಗಿನ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.

📅 ಪ್ರಕಟಣೆ ದಿನಾಂಕ: 19-05-2025
🏛 ಪ್ರಕಟಣಾಧಿಕಾರಿ: ನೇರ ನೇಮಕಾತಿ ಸಮಿತಿ ಅಧ್ಯಕ್ಷರು ಮತ್ತು ವ್ಯವಸ್ಥಾಪಕರು, ಡಿ.ಸಿ.ಸಿ. ಬ್ಯಾಂಕ್, ಚಿಕ್ಕಮಗಳೂರು.

ಹುದ್ದೆಗಳ ವಿವರ : 85
ಸಹಾಯಕ ವ್ಯವಸ್ಥಾಪಕರು - 04
ಪ್ರಥಮ ದರ್ಜೆ ಸಜಯಕರು / ಮೇಲ್ವಿಚಾರಕರು - 18 
ಕಿರಿಯ ಸಹಾಯಕರು - 53
ಸಹಾಯಕರು / ಅಟೆಂಡರ್ - 10

📌 ಪರೀಕ್ಷೆಯ ವಿವರಗಳು :

✅ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 27-11-2024
✅ ಪರೀಕ್ಷೆ ದಿನಾಂಕಗಳು: 24-05-2025 ಮತ್ತು 25-05-2025

🎫 ಹಾಲ್ ಟಿಕೆಟ್‌ ಡೌನ್‌ಲೋಡ್ :
ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪ್ರವೇಶ ಪತ್ರಗಳನ್ನು ಈ ಕೆಳಗಿನ ವೆಬ್‌ಸೈಟ್‌ಗಳಲ್ಲಿ ಲಾಗಿನ್‌ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು:

Hall Ticket ಡೌನ್‌ಲೋಡ್ ಮಾಡಲು ಹೆಜ್ಜೆಗಳು:
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
“Recruitment” ಅಥವಾ “Hall Ticket” ವಿಭಾಗವನ್ನು ತೆರೆಯಿರಿ
ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
Hall Ticket ಅನ್ನು ಡೌನ್‌ಲೋಡ್ ಮಾಡಿ ಮತ್ತು ಮುದ್ರಿಸಿ

ಮಹತ್ವದ ಸೂಚನೆ: ಪರೀಕ್ಷೆಗೆ ಹಾಜರಾಗುವಾಗ Hall Ticket ನೊಂದಿಗೆ ಯಾವುದೇ ಮಾನ್ಯ ಗುರುತಿನ ಚೀಟಿ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.

🎯 ಅಭ್ಯರ್ಥಿಗಳು ನೀಡಲಿರುವ ಪರೀಕ್ಷೆ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ವೆಬ್‌ಸೈಟ್‌ಗಳಿಗೆ ಭೇಟಿನೀಡಬಹುದು. ಹಾಲ್ ಟಿಕೆಟ್‌ ಇಲ್ಲದೆ ಪರೀಕ್ಷೆಗೆ ಹಾಜರಾಗಲು ಅವಕಾಶವಿಲ್ಲ, ಎಂಬುದು ಸ್ಪಷ್ಟಪಡಿಸಲಾಗಿದೆ.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.