ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್(BEL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್(BEL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by Bhagya R K
08 ಫೆಬ್ರವರಿ 2025 Others

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಹೊಸ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಹಿರಿಯ ಸಹಾಯಕ ಅಧಿಕಾರಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿದ ಬಳಿಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ :
- ಹುದ್ದೆಯ ಹೆಸರು : ಹಿರಿಯ ಸಹಾಯಕ ಅಧಿಕಾರಿ
- ಒಟ್ಟು ಹುದ್ದೆಗಳು : 05
- ಉದ್ಯೋಗ ಸ್ಥಳ : ಕೊಡಗು, ಕರ್ನಾಟಕ

ವಿದ್ಯಾರ್ಹತೆ :
- ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ :
- ಗರಿಷ್ಠ ವಯಸ್ಸು : 35 ವರ್ಷ (01-02-2025 ರಂತೆ)

- ವಯೋಮಿತಿ ಸಡಿಲಿಕೆ :
  - OBC (NCL) ಅಭ್ಯರ್ಥಿಗಳಿಗೆ: 03 ವರ್ಷಗಳು
  - PWBD ಅಭ್ಯರ್ಥಿಗಳಿಗೆ: 10 ವರ್ಷಗಳು

 ಅರ್ಜಿಶುಲ್ಕ :
- SC/ST/PwBD/ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ಶುಲ್ಕವಿಲ್ಲ
- ಇತರ ಎಲ್ಲಾ ಅಭ್ಯರ್ಥಿಗಳಿಗೆ : ₹400/-

ವೇತನ ಶ್ರೇಣಿ :
- ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಮಾಸಿಕ 30,000/- ರೂ ಗಳಿಂದ 1,20,000/- ರೂ ಗಳ ವರೆಗೆ ವೇತನ ನೀಡಲಾಗುತ್ತದೆ.

ಆಯ್ಕೆ ವಿಧಾನ :
- ಲಿಖಿತ ಪರೀಕ್ಷೆ
- ಸಂದರ್ಶನ

ಅರ್ಜಿ ಸಲ್ಲಿಸುವ ವಿಳಾಸ :
Deputy Manager (HR & ER), Bharat Electronics Limited, Plot No. 405,
Industrial Area Phase III, Panchkula, Haryana – 134113

ಪ್ರಮುಖ ದಿನಾಂಕಗಳು :
- ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 05-02-2025
- ಅರ್ಜಿಸಲ್ಲಿಸಲು ಕೊನೆಯ ದಿನಾಂಕ : 26-02-2025

ಆಸಕ್ತ ಅಭ್ಯರ್ಥಿಗಳು BEL ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಶ್ರದ್ಧೆಯಿಂದ ಅರ್ಜಿ ಸಲ್ಲಿಸಿ. ನಿಮ್ಮ ಭವಿಷ್ಯ ನಿರ್ಮಾಣದ ಈ ಅದ್ಭುತ ಅವಕಾಶವನ್ನು ಕೈಚೆಲ್ಲಿ ಬಿಡದೆ ತಕ್ಷಣವೇ ಅರ್ಜಿ ಸಲ್ಲಿಸಿ!

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.