ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್(BEL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ

ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್(BEL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ
Published by Bhagya R K
16 ಏಪ್ರಿಲ್ 2025 Others

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆ 2025ರ ನೇಮಕಾತಿಗೆ ಸಂಬಂಧಿಸಿದಂತೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಒಟ್ಟು 07 ಪ್ರಾಜೆಕ್ಟ್ ಎಂಜಿನಿಯರ್ ಮತ್ತು ಟ್ರೇನಿ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು – ಕರ್ನಾಟಕದಲ್ಲಿ ಉದ್ಯೋಗಾವಕಾಶ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು 2025ರ ಏಪ್ರಿಲ್ 30ರೊಳಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

🔹 ಹುದ್ದೆಯ ವಿವರಗಳು :
- ಸಂಸ್ಥೆ ಹೆಸರು : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)  
- ಒಟ್ಟು ಹುದ್ದೆಗಳು : 07  
- ಕಚೇರಿ ಸ್ಥಳ : ಬೆಂಗಳೂರು, ಕರ್ನಾಟಕ  
- ಹುದ್ದೆ ಹೆಸರು : ಪ್ರಾಜೆಕ್ಟ್ ಎಂಜಿನಿಯರ್-I, ಟ್ರೇನಿ ಎಂಜಿನಿಯರ್-I  

- ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ ₹30,000 - ₹50,000/- ರೂ ಗಳ ವರೆಗೆ ವೇತನವನ್ನು ನೀಡಲಾಗುತ್ತದೆ.  

🔹 ಅರ್ಹತಾ ಮಾನದಂಡಗಳು :
- ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ B.Sc, B.E ಅಥವಾ B.Tech ಪೂರ್ಣಗೊಳಿಸಿರಬೇಕು.

🔹 ಹುದ್ದೆಗಳ ವಿವರ :
ಪ್ರಾಜೆಕ್ಟ್ ಎಂಜಿನಿಯರ್-I : 05    
ಟ್ರೇನಿ ಎಂಜಿನಿಯರ್-I  : 02       

ವಯೋಮಿತಿ :
ಪ್ರಾಜೆಕ್ಟ್ ಎಂಜಿನಿಯರ್-I : 32 ವರ್ಷ        
ಟ್ರೇನಿ ಎಂಜಿನಿಯರ್-I  : 28 ವರ್ಷ

- ವಯೋಮಿತಿ ಸಡಿಲಿಕೆ :
  - OBC (NCL): 3 ವರ್ಷ  
  - SC/ST: 5 ವರ್ಷ  
  - PwBD: 10 ವರ್ಷ  

🔹 ಅರ್ಜಿದಾರಿಗಳಿಗೆ ಶುಲ್ಕ :
- SC/ST/PwBD ಅಭ್ಯರ್ಥಿಗಳು : ಶುಲ್ಕವಿಲ್ಲ  
- ಪ್ರಾಜೆಕ್ಟ್ ಎಂಜಿನಿಯರ್-I: ₹472/-  
- ಟ್ರೇನಿ ಎಂಜಿನಿಯರ್-I: ₹177/-  
- ಪಾವತಿ ವಿಧಾನ : SBI Collect ಮೂಲಕ  

🔹 ಆಯ್ಕೆ ವಿಧಾನ : 
ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ನಡೆಯಲಿದೆ.

🔹 ವೇತನ ವಿವರ :
ಪ್ರಾಜೆಕ್ಟ್ ಎಂಜಿನಿಯರ್-I : ₹40,000 – ₹50,000    
ಟ್ರೇನಿ ಎಂಜಿನಿಯರ್-I  : ₹30,000 – ₹35,000    

🔹 ಅರ್ಜಿ ಸಲ್ಲಿಸುವ ವಿಧಾನ :
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು BEL ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಅದನ್ನು ಸರಿಯಾದ ರೀತಿಯಲ್ಲಿ ತುಂಬಿ ಸಂಬಂಧಿತ ದಾಖಲೆಗಳ ನಕಲ್ನೊಂದಿಗೆ ಕೆಳಕಂಡ ವಿಳಾಸಕ್ಕೆ 2025ರ ಏಪ್ರಿಲ್ 30ರೊಳಗೆ ಕಳುಹಿಸಬೇಕು:

ಅರ್ಜಿ ಸಲ್ಲಿಸುವ ವಿಳಾಸ :  
Deputy Manager (HR/SC&US SBU),  
Bharat Electronics Limited,  
Jalahalli Post,  
Bengaluru – 560013

🔹 ಮುಖ್ಯ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15-04-2025  
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-04-2025  

ಹೆಚ್ಚಿನ ಮಾಹಿತಿಗೆ BEL ಅಧಿಕೃತ ವೆಬ್‌ಸೈಟ್ ಅಥವಾ ಅಧಿಸೂಚನೆ ನೋಡಿ.  

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.